5ನೇ ಗಣಿತ ಭಾಗ 1 & 2

ಗಣಿತ ಭಾಗ -1 


ಅಧ್ಯಾಯ.1
5 - ಅಂಕಿಗಳ ಸಂಖ್ಯೆಗಳು


I ಕೆಳಗಿನ ಸಂಖ್ಯೆಗಳಿಗೆ ಸ್ಥಾನಬೆಲೆ ಪಟ್ಟಿಯನ್ನು ಬರೆಯಿರಿ.

1) 2,684

2) 7,000

3) 9,806

4) 8,649


II ಕೆಳಗಿನವುಗಳನ್ನು ಪದಗಳಲ್ಲಿ ಬರೆಯಿರಿ.

1) 1,739 = 

2) 3,007 =

3) 4,088 =

4) 11,900 =


III ಕೆಳಗಿನವುಗಳನ್ನು ಸಂಖ್ಯಾರೂಪದಲ್ಲಿ ಬರೆಯಿರಿ.

1) ಒಂಬತ್ತು ಸಾವಿರದ ಮೂರು ನೂರ ಹದಿನೈದು. = (9315)

2) ಎರಡು ಸಾವಿರದ ನಾಲ್ಕು ನೂರು. =

3) ಏಳು ಸಾವಿರದ ಮೂವತ್ತಾರು. =


IV ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1) 3–ಅಂಕಿಯ ಅತಿ ದೊಡ್ಡಸಂಖ್ಯೆಯನ್ನು ಬರೆಯಿರಿ. (999)

2) 3–ಅಂಕಿಯ ಅತಿ ಚಿಕ್ಕಸಂಖ್ಯೆಯನ್ನು ಬರೆಯಿರಿ.(100)

3) 4–ಅಂಕಿಯ ಅತಿ ದೊಡ್ಡಸಂಖ್ಯೆಯನ್ನು ಬರೆಯಿರಿ.9999

4) 4–ಅಂಕಿಯ ಅತಿ ಚಿಕ್ಕಸಂಖ್ಯೆಯನ್ನು ಬರೆಯಿರಿ.(1000)


V  ಸಂಖ್ಯೆಗಳನ್ನು ಹೋಲಿಸಿ ಅವುಗಳ ಮಧ್ಯದಲ್ಲಿ =, > ಅಥವಾ < ಚಿಹ್ನೆಯನ್ನು ಬರೆಯಿರಿ.

1) 3,567 .......... 4,567 (<)

2) 6,582 .......... 6,385 (>)

3) 7,384 .......... 7,384 (=)



VI ಕೆಳಗಿನ ಅಂಕಿಗಳನ್ನು ಬಳಸಿ 4-ಅಂಕಿಗಳ ಅತಿ ದೊಡ್ಡಸಂಖ್ಯೆ ಮತ್ತು ಅತಿ ಚಿಕ್ಕಸಂಖ್ಯೆಯನ್ನು ಬರೆಯಿರಿ. (ಅಂಕಿಗಳನ್ನು ಪುನರಾವರ್ತಿಸದೆ)

1) 1, 2, 3, 4 = (4321 ಮತ್ತು 1234)

2) 6, 3, 8, 0 =

3) 5, 2, 7, 4 =


VII ಈ ಕೆಳಗಿನ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ.

1) 2,456 2,465 2,565 2,546

2) 5,768 5,678 5,687 5,867

3) 8,901 8,910 8,109 8,190


VIII ಈ ಕೆಳಗಿನ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.

1) 2,947 3,038 2,930 3,830

2) 4,892 4,982 4,082 4,792

3) 5,678 5,778 5,878 5,978




ಅಧ್ಯಾಯ-2
ಸಂಕಲನ


ಅಭ್ಯಾಸ 1.1


I ಸೂಕ್ತ ಸ್ಥಳದಲ್ಲಿ  ಅಲ್ಪವಿರಾಮ ಚಿಹ್ನೆಯನ್ನು ಸೇರಿಸಿ ಕೊಟ್ಟಿರುವ ಸಂಖ್ಯೆಗಳನ್ನು ಪದಗಳಲ್ಲಿ ಬರೆಯಿರಿ.

1) 32894 = (32,894)

2) 18415 =

3) 99999 =

4) 40003 =


II ಕೆಳಗಿನವುಗಳನ್ನು ಸಂಖ್ಯಾ ರೂಪದಲ್ಲಿ ಬರೆಯಿರಿ.

1) ನಲವತ್ತೈದು ಸಾವಿರದ ಆರು ನೂರ ಹದಿನೆಂಟು. = (45618)

2) ಎಂಬತ್ತೆರಡು ಸಾವಿರದ ಮೂರು. = (82003)

3) ಹದಿಮೂರು ಸಾವಿರದ ಏಳುನೂರ ಒಂಬತ್ತು. =

4) ತೊಂಬತ್ತ್ನಾಲ್ಕು ಸಾವಿರದ ಮೂರುನೂರ ಹದಿನಾಲ್ಕು. =



III ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳನ್ನು ವಿಸ್ತರಿಸಿ ಬರೆಯಿರಿ

ಉದಾಹರಣೆ :
47,609 = 4 × 10,000 + 7 × 1,000 + 6 × 100 + 0 × 10 + 9 × 1

1) 19,203 =

2) 77,777 =

3) 38,294 =



I ಕೆಳಗಿನ ಸಂಖ್ಯೆಗಳನ್ನು ಕೂಡಿರಿ.

1) 4,368 + 2,521 = (6889)

2) 2,673 + 5,134 =

3) 3,653 + 4,213 + 1,156 =

4) 1,345 + 2,463 + 564 =




II ಈ ಸಮಸ್ಯೆಗಳನ್ನು ಬಿಡಿಸಿ.

1) ಸುಮತಿಯು ಸೋಮವಾರ ` 3,672 ಮತ್ತು ಮಂಗಳವಾರ ` 4,678 ಅನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದಳು. ಅವಳು ಬ್ಯಾಂಕ್‍ನ ಖಾತೆಯಲ್ಲಿ ಜಮಾ ಮಾಡಿದ ಒಟ್ಟು ಹಣವನ್ನು ಕಂಡುಹಿಡಿಯಿರಿ.
ಉತ್ತರ:
ಸೋಮವಾರ ಜಮಾ ಮಾಡಿದ ಹಣ, ರೂ. = 3672
ಮಂಗಳವಾರ ಜಮಾ ಮಾಡಿದ ಹಣ, ರೂ  = 4678
ಅವಳು ಜಮಾ ಮಾಡಿದ ಹಣ, ರೂ = 3672 + 4678 = ರೂ. 8350

2) ಒಂದು ಹಳ್ಳಿಯ ಜನಸಂಖ್ಯೆಯು 3,389. ಇನ್ನೊಂದು ಹಳ್ಳಿಯ ಜನಸಂಖ್ಯೆಯು 4,893. ಎರಡು ಹಳ್ಳಿಗಳ ಒಟ್ಟು ಜನಸಂಖ್ಯೆಯನ್ನು ಕಂಡುಹಿಡಿಯಿರಿ.

3) ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಒಂದನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯು 1,673, ಎರಡನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯು 1,845, ಮೂರನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯು 1,437 ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯು 1,547. ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯನ್ನು ಕಂಡುಹಿಡಿಯಿರಿ.

4) ಮಲ್ಲಪ್ಪನು ತನಗೆ ಒಂದು ಸ್ಕೂಟರ್ ಹಾಗೂ ತನ್ನ ಮಗನಿಗೆ ಒಂದು ಮೋಟಾರು ಸೈಕಲ್ ಕೊಂಡನು. ಸ್ಕೂಟರ್‍ನ ಬೆಲೆಯು ರೂ.34,221. ಮೋಟಾರು ಸೈಕಲ್‍ನ ಬೆಲೆಯು ರೂ.35,678. ಮಲ್ಲಪ್ಪನು ಇವುಗಳನ್ನು ಕೊಂಡುಕೊಳ್ಳಲು ನೀಡಿದ ಒಟ್ಟು ಹಣವನ್ನು ಕಂಡುಹಿಡಿಯಿರಿ.
ಉತ್ತರ: 
ಸ್ಕೂಟರ್ ನ ಬೆಲೆ = ರೂ. 34,221.
ಮೋಟಾರು ಸೈಕಲ್‍ನ ಬೆಲೆ = ರೂ. 35,678.
ಮಲ್ಲಪ್ಪನು ನೀಡಿದ ಒಟ್ಟು ಹಣ= ಸ್ಕೂಟರ್ ನ ಬೆಲೆ + ಮೋಟಾರು ಸೈಕಲ್‍ನ ಬೆಲೆ =  34,221 +  35,678 = ರೂ. 69,899.

5) ಒಬ್ಬ ಪುಸ್ತಕ ವ್ಯಾಪಾರಿಯು 26,817 ಪುಸ್ತಕಗಳನ್ನು ಮೊದಲನೇ ಪುಸ್ತಕ ಪದರ್ಶನದಲ್ಲಿ  ಮತ್ತು 17,794 ಪುಸ್ತಕಗಳನ್ನು ಎರಡನೇ ಪುಸ್ತಕ ಪದರ್ಶನದಲ್ಲಿ ಮಾರಾಟ ಮಾಡುತ್ತಾನೆ. ಎರಡು ಪುಸ್ತಕ ಪದರ್ಶನಗಳಲ್ಲಿ ಪುಸ್ತಕ ವ್ಯಾಪಾರಿಯು ಮಾರಾಟ ಮಾಡಿದ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:
ಮೊದಲನೇ ಪುಸ್ತಕ ಪ್ರದರ್ಶನದಲ್ಲಿ ಮಾರಾಟ ಮಾಡಿದ ಪುಸ್ತಕಗಳ ಸಂಖ್ಯೆ = 26,817
ಎರಡನೇ ಪುಸ್ತಕ ಪ್ರದರ್ಶನದಲ್ಲಿ ಮಾರಾಟ ಮಾಡಿದ ಪುಸ್ತಕಗಳ ಸಂಖ್ಯೆ = 17,794
ಎರಡೂ ಪುಸ್ತಕ ಪ್ರದರ್ಶನಗಳಲ್ಲಿ ಮಾರಾಟ ಮಾಡಿದ ಒಟ್ಟು ಪುಸ್ತಕಗಳ ಸಂಖ್ಯೆ  = 26,817 + 17,794
= 44,611



ಅಭ್ಯಾಸ 2.1

I ಈ ಕೆಳಗಿನ ಸಂಖ್ಯೆಗಳ ಮೊತ್ತ ಕಂಡುಹಿಡಿಯಿರಿ.

1) 36,417 + 32,532 = (68,949)

2) 28,490 + 61,306 =

3) 12,973 + 46,016 =

4) 23,462 + 52,304 =

5) 42,806 + 34,063 =



II ಈ ಕೆಳಗಿನ ಸಂಖ್ಯೆಗಳ ಮೊತ್ತ ಕಂಡುಹಿಡಿಯಿರಿ.

1) 36,907 + 53,613 = (90,520)

2) 24,596 + 36,578 =

3) 43,374 + 36,654 =

4) 25,700 + 2,246 + 16,413 =

5) 25,236 + 34,051 + 8,368 =



III ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ರಕ್ಷಿತ ಅರಣ್ಯ ಪ್ರದೇಶದಲ್ಲಿ 26,759 ಸಸಿಗಳಿವೆ. ವನಮಹೋತ್ಸವ ಸಮಯದಲ್ಲಿ 13,842 ಸಸಿಗಳನ್ನು ನೆಡಲಾಯಿತು. ರಕ್ಷಿತ ಅರಣ್ಯ ಪ್ರದೇಶದಲ್ಲಿ ಒಟ್ಟು ಎಷ್ಟು ಸಸಿಗಳಿವೆ?
ಉತ್ತರ:
ರಕ್ಷಿತ ಅರಣ್ಯ ಪ್ರದೇಶದಲ್ಲಿ ಮೊದಲು ಇದ್ದ ಸಸಿಗಳು = 26,759
ವನಮಹೋತ್ಸವ ಸಮಯದಲ್ಲಿ ನೆಟ್ಟ ಸಸಿಗಳು: 13,842
ಒಟ್ಟು ಸಸಿಗಳು = (26,759 + 13,842) = 40,601

2) ಹಾಲಿನ ಸಹಕಾರಿ ಸಂಘವು ರೈತರಿಂದ 15,209 ಲೀಟರ್ ಹಾಲನ್ನು ಮೊದಲ ವಾರದಲ್ಲಿ ಮತ್ತು ಅದರ ಮುಂದಿನ ವಾರದಲ್ಲಿ 16,826 ಲೀಟರ್ ಹಾಲನ್ನು ಸಂಗ್ರಹಿಸಿತು. ಹಾಲಿನ ಸಹಕಾರಿ ಸಂಘವು ರೈತರಿಂದ ಒಟ್ಟು ಎಷ್ಟು ಲೀಟರ್ ಹಾಲು ಸಂಗ್ರಹಿಸಿತು?

3) ಭಾರತೀಯ ಕಿಕೆಟ್ ಕ್ರೀಡಾಪಟು ಟೆಸ್ಟ್ ಪಂದ್ಯಗಳಲ್ಲಿ 14,025 ರನ್ನುಗಳನ್ನು ಹಾಗೂ ಒಂದು ದಿನದ ಪಂದ್ಯಗಳಲ್ಲಿ 15,759 ರನ್ನುಗಳನ್ನು ಗಳಿಸಿದ್ದಾನೆ.ಅವನು ಗಳಿಸಿದ ಒಟ್ಟು ರನ್ನುಗಳನ್ನು ಕಂಡುಹಿಡಿಯಿರಿ.

4) ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ 17,943 ಕನ್ನಡ ಭಾಷೆಯ ಪುಸ್ತಕಗಳು, 14,635 ಹಿಂದಿ ಭಾಷೆಯ ಪುಸ್ತಕಗಳು ಮತ್ತು 10,284 ಆಂಗ್ಲ ಭಾಷೆಯ ಪುಸ್ತಕಗಳು ಇವೆ. ಎಲ್ಲಾ ಭಾಷೆಯ ಒಟ್ಟು ಪುಸ್ತಕಗಳು ಎಷ್ಟು ?

5) ವಿಧಾನಸಭೆಯ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಕ್ರಮವಾಗಿ 32,135, 29,048 ಮತ್ತು 4,951 ಮತಗಳನ್ನು ಪಡೆದರು. ಚುನಾವಣೆಯಲ್ಲಿ ನಡೆದ ಒಟ್ಟು ಮತದಾನ ಎಷ್ಟು?




ಅಧ್ಯಾಯ-3
ವ್ಯವಕಲನ



I ವ್ಯವಕಲನ  ಮಾಡಿರಿ.

1) 4,528 – 3,214 = (1,314)

2) 6,453 – 5,302 =

3) 3,759 – 2,156 =


II ವ್ಯವಕಲನ  ಮಾಡಿರಿ.

1) 6,123 – 3,586 = (2,537)

2) 8,000 – 4,617 =

3) 3,564 – 1,345 =


II ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಒಂದು ಕಾರ್ಖಾನೆಯು 8,534 ಡಬ್ಬಗಳನ್ನು ತಯಾರಿಸಿದೆ. ಅದರಲ್ಲಿ 5,421 ಡಬ್ಬಗಳು ಮಾರಾಟವಾದರೆ, ಉಳಿದ ಡಬ್ಬಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:
ತಯಾರಿಸಿದ ಡಬ್ಬಿಗಳು = 8,534
ಮಾರಾಟವಾದ ಡಬ್ಬಗಳು = 5,421
ಉಳಿದ ಡಬ್ಬಗಳ ಸಂಖ್ಯೆ = 8,534 - 5,421 = 3,113

2) ಒಂದು ತಾಲ್ಲೂಕಿನ ಎಲ್ಲಾ ಶಾಲೆಗಳ ಐದನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ 5,728. ಇದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯು 3,572. ಗಂಡು ಮಕ್ಕಳ ಸಂಖ್ಯೆಯನ್ನು ಕಂಡು ಹಿಡಿಯಿರಿ.

3) ಸಂಜೀವನ ಹತ್ತಿರ ರೂ. 8,524 ಗಳಿವೆ. ಅವನು ರೂ. 2,937 ಅನ್ನು ಅನಾಥಾಲಯದ ಸಮಿತಿಗೆ ದಾನ ಮಾಡುತ್ತಾನೆ. ಅವನ ಹತ್ತಿರ ಉಳಿದ ಹಣವನ್ನು ಕಂಡುಹಿಡಿಯಿರಿ

4) ಒಬ್ಬ ತೆಂಗಿನಕಾಯಿ ವ್ಯಾಪಾರಿಯು 49,137 ತೆಂಗಿನಕಾಯಿಗಳನ್ನು ಖರೀದಿಸಿದನು. ಒಂದು ತಿಂಗಳಿನಲ್ಲಿ 26,134 ತೆಂಗಿನಕಾಯಿಗಳನ್ನು ಮಾರಿದನು. ಅವನ ಹತ್ತಿರ ಉಳಿದ ತೆಂಗಿನಕಾಯಿಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:
ತೆಂಗಿನಕಾಯಿ ವ್ಯಾಪಾರಿಯು ಖರೀದಿಸಿದ ತೆಂಗಿನಕಾಯಿಗಳ ಸಂಖ್ಯೆ = 49,137
ಒಂದು ತಿಂಗಳಿನಲ್ಲಿ ಮಾರಿದ ತೆಂಗಿನಕಾಯಿಗಳ ಸಂಖ್ಯೆ = 26,134
ತೆಂಗಿನಕಾಯಿ ವ್ಯಾಪಾರಿಯ ಹತ್ತಿರ ಉಳಿದ ತೆಂಗಿನಕಾಯಿಗಳ ಸಂಖ್ಯೆ = 49,137 – 26,134 = 23,003

5) ಟೀ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಒಂದು ದಿನದಲ್ಲಿ 48,342 ಟೀ ಪೊಟ್ಟಣಗಳನ್ನು ತುಂಬಿಸಬೇಕಾಗಿದೆ. ಊಟದ ಸಮಯದ ವೇಳೆಗೆ 33,675 ಟೀ ಪೆÇಟ್ಟಣಗಳನ್ನು ತುಂಬಿಸಿದರೆ ಇನ್ನೂ ತುಂಬಿಸಬೇಕಾದ ಟೀ ಪೊಟ್ಟಣಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:
ಒಂದು ದಿನದಲ್ಲಿ ತುಂಬಿಸಬೇಕಾದ ಟೀ ಪೊಟ್ಟಣಗಳ ಸಂಖ್ಯೆ = 48,342

ಊಟದ ಸಮಯದ ವೇಳೆಗೆ ತುಂಬಿಸಿದ ಟೀ ಪೊಟ್ಟಣಗಳ ಸಂಖ್ಯೆ = 33,675
ಇನ್ನೂ ತುಂಬಿಸಬೇಕಾದಪೊಟ್ಟಣಗಳ ಸಂಖ್ಯೆ = 48,342 – 33,675 = 14,667
∴ ಇನ್ನೂ ತುಂಬಿಸಬೇಕಾದ ಟೀ ಪೊಟ್ಟಣಗಳ ಸಂಖ್ಯೆ = 14,667



ಅಭ್ಯಾಸ 3.1

 ವ್ಯವಕಲನ  ಮಾಡಿರಿ.

1) 59,842 – 34,532 =

2) 86,291 – 64,130 =

3) 41,297 – 16,025 =

4) 25,768 – 4,304 =

5) 17,094 – 3,043 =


II  ವ್ಯವಕಲನ  ಮಾಡಿರಿ.

1) 42,695 – 20,746 =

2) 50,625 – 36,178 =

3) 40,000 – 16,543 =

4) 25,307 – 6,419 =

5) 20,000 – 8,625 =


III ಕೆಳಗಿನ ಲೆಕ್ಕಗಳನ್ನು ಬಿಡಿಸಿರಿ.

1) 16,486 ನ್ನು 26,475 ರಿಂದ ಕಳೆಯಿರಿ.

2) 36,279 ನ್ನು 52,367 ರಿಂದ ಕಳೆಯಿರಿ.

3) 10,000 ನ್ನು 31,579 ರಿಂದ ಕಳೆಯಿರಿ.

4) 24,683 ನ್ನು 40,000 ರಿಂದ ಕಳೆಯಿರಿ.

5) 4,297 ನ್ನು 11,035 ರಿಂದ ಕಳೆಯಿರಿ.


IV ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) 37,946 ಕ್ಕೆ ಎಷ್ಟನ್ನು ಸೇರಿಸಿದರೆ 91,643 ಆಗುತ್ತದೆ?

2) 67,215 ರಲ್ಲಿ ಎಷ್ಟನ್ನು ಕಳೆದರೆ 28,941 ಆಗುತ್ತದೆ?

3) ಎರಡು ಸಂಖ್ಯೆಗಳ ಮೊತ್ತ 87,065. ಅವುಗಳಲ್ಲಿ ಒಂದು ಸಂಖ್ಯೆ 49,726. ಹಾಗಾದರೆ ಇನ್ನೊಂದು ಸಂಖ್ಯೆಯನ್ನು ಕಂಡುಹಿಡಿಯಿರಿ.

4) ಒಬ್ಬ ರೈತನು ಕಳೆದ ವರ್ಷ 38,462 ತೆಂಗಿನ ಕಾಯಿಗಳನ್ನು ತನ್ನ ತೋಟದಿಂದ ಪಡೆದನು. ಈ ವರ್ಷ 47,285 ತೆಂಗಿನ ಕಾಯಿಗಳನ್ನು ಪಡೆದನು. ಅವನು ಕಳೆದ ವರ್ಷಕ್ಕಿಂತ ಎಷ್ಟು ಹೆಚ್ಚು ತೆಂಗಿನ ಕಾಯಿಗಳನ್ನು ಪಡೆದಿದ್ದಾನೆ?

5) ವಿಧಾನ ಸಭೆಯ ಚುನಾವಣೆಯಲ್ಲಿ ಸುರೇಶರವರು 42,618 ಮತಗಳನ್ನು ಪಡೆದರು. ರೋಹಿಣಿಯವರು 54,951 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಶಾಲಿಯಾದರು. ಸುರೇಶರವರಿಗಿಂತ ರೋಹಿಣಿಯವರು ಎಷ್ಟು ಹೆಚ್ಚು ಮತಗಳನ್ನು ಪಡೆದರು?

6) ಸಹಕಾರ ಹಾಲಿನ ಡೈರಿ 15,684 ಲೀಟರ್ ಹಾಲನ್ನು `ಕ’ ಹಳ್ಳಿಯಿಂದ ಮತ್ತು  17,324 ಲೀಟರ್ ಹಾಲನ್ನು `ಬ’ ಹಳ್ಳಿಯಿಂದ ಸಂಗ್ರಹಿಸಿತು. ಸಹಕಾರ ಹಾಲಿನ ಡೈರಿಯು ್ರ 20,263 ಲೀಟರ್ ಹಾಲನ್ನು ಮಾರಾಟ ಮಾಡಿದರೆ, ಎಷ್ಟು  ಪ್ರಮಾಣದ ಹಾಲು ಉಳಿಯಿತು.?
ಉತ್ತರ:
ಸಹಕಾರ ಹಾಲಿನ ಡೈರಿಯು `ಕ’ ಹಳ್ಳಿಯಿಂದ ಸಂಗಹಿಸಿದ  ಹಾಲಿನ ಪ್ರಮಾಣ = 15,684 ಲೀ.
ಸಹಕಾರ ಹಾಲಿನ ಡೈರಿಯು `ಬ’ ಹಳ್ಳಿಯಿಂದ ಸಂಗ್ರಹಿಸಿದ  ಹಾಲಿನ ಪ್ರಮಾಣ = 17,324 ಲೀ.
ಎರಡೂ ಹಳ್ಳಿಗಳಿಂದ ಸಂಗ್ರಹಿಸಿದ ಹಾಲಿನ ಪ್ರಮಾಣ = 15,684 + 17,324 = 33,008 ಲೀ.
ಸಹಕಾರ ಹಾಲಿನ ಡೈರಿಯು ಮಾರಿದ ಹಾಲಿನ ಪ್ರಮಾಣ = 20,263 ಲೀ.
ಸಹಕಾರ ಹಾಲಿನ ಡೈರಿಯಲ್ಲಿ ಉಳಿದ ಹಾಲಿನ ಪ್ರಮಾಣ = 33,008 – 20,263 = 12,745 ಲೀ.
ಆದ್ದರಿಂದ ಸಹಕಾರ ಹಾಲಿನ ಡೈರಿಯಲ್ಲಿ 12,745 ಲೀ. ಹಾಲು ಉಳಿಯಿತು

7) ಒಂದು ಪೆಟ್ರೋಲ್ ಬಂಕ್‍ನಲ್ಲಿ 96,321 ಲೀಟರ್‌ನಷ್ಟು ಪೆಟ್ರೋಲ್ ಇತ್ತು. ಸೋಮವಾರ 26,841 ಲೀಟರ್ ಪೆಟ್ರೋಲ್ ಮಾರಾಟವಾಯಿತು. ಮಂಗಳವಾರ 35,769 ಲೀಟರ್ ಪೆಟ್ರೋಲ್ ಮಾರಾಟವಾಯಿತು. ಪೆಟ್ರೋಲ್ ಬಂಕ್‍ನಲ್ಲಿ ಉಳಿದ ಪೆಟ್ರೋಲ್‍ನ ಪ್ರಮಾಣವನ್ನು ಕಂಡುಹಿಡಿಯಿರಿ. 
ಉತ್ತರ:
ಪೆಟ್ರೋಲ್ ಬಂಕ್‍ನಲ್ಲಿ ಇದ್ದ ಪೆಟ್ರೋಲ್ ನ ಪ್ರಮಾಣ  = 96,321 ಲೀ.
ಸೋಮವಾರ ಮಾರಿದ ಪೆಟ್ರೋಲ್‌ನ ಪ್ರಮಾಣ = 26,841 ಲೀ.
ಮಂಗಳವಾರ ಮಾರಿದ ಪೆಟ್ರೋಲ್‌ನ ಪ್ರಮಾಣ = 35,769 ಲೀ.
ಸೋಮವಾರ ಮತ್ತು ಮಂಗಳವಾರ ಮಾರಿದ ಪೆಟ್ರೋಲ್‌ ಪ್ರ ಮಾಣ = 26,841 + 35,769 = 62,610 ಲೀ.
ಪೆಟ್ರೋಲ್ ಬಂಕ್‍ನಲ್ಲಿ ಉಳಿದ ಪೆಟ್ರೋಲ್‌ನ ಪ್ರಮಾಣ = 96,321 – 62,610 = 33,711 ಲೀ.
∴ ಪೆಟ್ರೋಲ್ ಬಂಕ್‍ನಲ್ಲಿ 33,711 ಲೀ. ಪೆಟ್ರೋಲ್ ಉಳಿಯಿತು.


ಅಭ್ಯಾಸ 3.2


I ಕೆಳಗಿನವುಗಳನ್ನು ಬಿಡಿಸಿ.


1) 54,398 + 24,897 – 39,486 =


2) 43,618 + 6,382 – 29,467 =

3) 21,679 + 27,428 – 2,438 =


II ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಮೊಬೈಲ್‍ಗಳನ್ನು ಉತ್ಪಾದಿಸುವ ಒಂದು ಕಾರ್ಖಾನೆಯು ನವೆಂಬರ್ ತಿಂಗಳಲ್ಲಿ 23,715 ಮೊಬೈಲ್‍ಗಳನ್ನು ಮತ್ತು ಡಿಸೆಂಬರ್ ತಿಂಗಳಿನಲ್ಲಿ 34,160 ಮೊಬೈಲ್‍ಗಳನ್ನು ಉತ್ಪಾದಿಸಿತು. ಅವುಗಳಲ್ಲಿ 42,534 ಮೊಬೈಲ್‍ಗಳನ್ನು ಮಾರಲಾಯಿತು. ಹಾಗಾದರೆ ಉಳಿದ ಮೊಬೈಲ್‍ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.

2) ಆನಂದನ ಬ್ಯಾಂಕ್ ಖಾತೆಯಲ್ಲಿ ರೂ.15,282 ಹಣವಿದೆ. ಅವನು ಬುಧವಾರದಂದು ರೂ.25,718 ನ್ನು ತನ್ನ ಖಾತೆಗೆ ಜಮಾ ಮಾಡುತ್ತಾನೆ. ಅವನು ಗುರುವಾರದಂದು ರೂ.30,145 ಹಣವನ್ನು ಖಾತೆಯಿಂದ ತೆಗೆಯುತ್ತಾನೆ. ಹಣ ತೆಗೆದ ನಂತರ ಅವನ ಖಾತೆಯಲ್ಲಿ ಉಳಿದ ಹಣವೆಷ್ಟು ?

3) ಶ್ರೀಮತಿ ಅನಿತಾಳ ಹತ್ತಿರ  ರೂ.50,000 ಇದೆ. ಅವಳು ರೂ.13,538 ಕ್ಕೆ ಒಂದು ಬಣ್ಣದ ದೂರದರ್ಶನವನ್ನು ಮತ್ತು ರೂ.16,990ಕ್ಕೆ ಒಂದು ರೆಫ್ರೀಜರೇಟರ್ ಕೊಂಡುಕೊಳ್ಳುತ್ತಾಳೆ. ಈಗ ಅವಳ ಬಳಿ ಉಳಿದ ಹಣವನ್ನು ಕಂಡುಹಿಡಿಯಿರಿ.

4) ಒಂದು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಹಂಚಲು 60,000 ಸಮವಸ್ತ್ರಗಳನ್ನು ಕೊಡಲಾಗಿದೆ. 12,372 ಮತ್ತು 23,003 ಸಮವಸ್ತ್ರಗಳನ್ನು ಈಗಾಗಲೇ ಎರಡು ತಾಲ್ಲೂಕುಗಳಲ್ಲಿ ಹಂಚಲಾಗಿದೆ. ಹಾಗಾದರೆ ಇನ್ನೂ ಉಳಿದಿರುವ ಸಮವಸ್ತ್ರಗಳ ಸಂಖ್ಯೆ ಎಷ್ಟು ?




ಅಧ್ಯಾಯ-4
ಅಪವರ್ತನಗಳು ಮತ್ತು ಅಪವರ್ತ್ಯಗಳು.


ಅಭ್ಯಾಸ 4.1

2) ಕೆಳಗಿನ ಸಂಖ್ಯೆಗಳಲ್ಲಿ 7 ರ ಅಪವತ್ರ್ಯಗಳಿಗೆ ವೃತ್ತ ಹಾಕಿರಿ.
7, 13, 14, 21, 22, 35, 36, 42 ಮತ್ತು 45

3) ಕೆಳಗಿನ ಸಂಖ್ಯೆಗಳಲ್ಲಿ 12 ರ ಅಪವತ್ರ್ಯಗಳಿಗೆ ವೃತ್ತ ಹಾಕಿರಿ.
6, 12, 18, 24, 30, 36, 42, 48, 54, 60, 66, 72

4) 50 ಮತ್ತು 60 ಸಂಖ್ಯೆಗಳ ನಡುವಿನ 2 ರ ಅಪವತ್ರ್ಯಗಳನ್ನು ಬರೆಯಿರಿ.

5) 50 ಮತ್ತು 100 ಸಂಖ್ಯೆಗಳ ನಡುವಿನ 15 ರ ಅಪವತ್ರ್ಯಗಳನ್ನು ಬರೆಯಿರಿ.

6) ಕೆಳಗಿನ ಸಂಖ್ಯೆಗಳಿಗೆ ಐದು ಅಪವತ್ರ್ಯಗಳನ್ನು ಬರೆಯಿರಿ.
15, 17, 19 ಮತ್ತು 23

7) ಕೆಳಗಿನ ಸಂಖ್ಯೆಗಳಲ್ಲಿ 24 ರ ಅಪವರ್ತನಗಳಿಗೆ ವೃತ್ತ ಹಾಕಿರಿ.
1, 2, 3, 4, 5, 6, 7, 8, 9, 10, 12, 14, 16, 18, 20, 22 ಮತ್ತು 24

8) ಕೆಳಗಿನ ಸಂಖ್ಯೆಗಳಿಗೆ ಯಾವುದಾದರೂ ಎರಡು ಅಪವರ್ತನಗಳನ್ನು ಬರೆಯಿರಿ.
6, 18, 28, 36, 42, 48


9) ಕೆಳಗಿನ ಸಂಖ್ಯೆಗಳ ಎಲ್ಲಾ ಅಪವರ್ತನಗಳನ್ನು ಬರೆಯಿರಿ.
9, 13, 20, 26, 40


10) ಕೆಳಗಿನ ಸಂಖ್ಯೆಗಳಿಗೆ ಅಪವರ್ತನ ವೃಕ್ಷ ಬರೆಯಿರಿ.
12, 20, 28, 32 ಮತ್ತು 36






ಅಧ್ಯಾಯ-5
ಭಿನ್ನರಾಶಿಗಳು


ಅಭ್ಯಾಸ 5.1

3) ಈ ಕೆಳಗಿನ ಪ್ರತಿಯೊಂದನ್ನು ಭಿನ್ನರಾಶಿಯಲ್ಲಿ ಬರೆಯಿರಿ

a) ಅರ್ಧ = (1/2)

b) ಮೂರನೇ ಎರಡು =

c) ಹತ್ತನೇ ಎರಡು =

d) ಏಳನೇ ಐದು =

e) ಹದಿನಾರನೇ ಐದು=

f) ಹನ್ನೆರಡನೇ ಐದು =

g) ಒಂಭತ್ತನೇ ಎಂಟು =

h) ಒಂಭತ್ತನೇ ನಾಲ್ಕು =

i) ನಾಲ್ಕನೇ ಮೂರು =

j) ಐದನೇ ಎರಡು =


4) ಈ ಕೆಳಗಿನ ಪ್ರತಿಯೊಂದು ಭಿನ್ನರಾಶಿಯನ್ನು  ಪದಗಳಲ್ಲಿ ಬರೆಯಿರಿ.

a) 2/5  = (ಐದನೇ ಎರಡು)

b) 3/4  =

c) 7/10  =

d) 11/12  =

e) 2/3  =

f) 4/5  =

g) 5/8  =

h) 3/7  =

i) 5/6  =

j) 7/9  =


6) ಬಿಟ್ಟ ಜಾಗ ತುಂಬಿರಿ

a) 1/8 ರಲ್ಲಿ ಛೇದ ..... (8)

b) 2/5 ರಲ್ಲಿ ಅಂಶ ..... (2)

c) 3 ಎನ್ನುವುದು 1/3 ಭಿನ್ನರಾಶಿಯ .... ಆಗಿದೆ

d) 1 ಎನ್ನುವುದು 1/5 ಭಿನ್ನರಾಶಿಯ ..... ಆಗಿದೆ.

e) ಭಿನ್ನರಾಶಿಯಲ್ಲಿ ಛೇದವನ್ನು ..... ಕೆಳಗೆ ಗೆರೆ ಏಳೆಯುವುದರ ಮೂಲಕ ಬೇರ್ಪಡಿಸಲ್ಪಟ್ಟಿದೆ.

10) ಗೆರೆ ಎಳೆಯುವ ಮೂಲಕ  ಭಿನ್ನರಾಶಿಯನ್ನು ಚಿತ್ರಗಳಲ್ಲಿ ಪ್ರತಿನಿಧಿಸಿರಿ

a) 12 ರ 1/3 ಎಂದರೆ ಎಷ್ಟು?

b) 15 ರ 2/5 ಎಂದರೆ ಎಷ್ಟು?

c) 21 ರ 2/7 ಎಂದರೆ ಎಷ್ಟು?



ಅಭ್ಯಾಸ 5.2

I. ಕೆಳಗಿನ ಖಾಲಿ ಚೌಕದಲ್ಲಿ > ಅಥವಾ > ಚಿಹ್ನೆಯನ್ನು ಬರೆಯಿರಿ.

1) 3/5 ..... 3/7

2) 9/15 ..... 9/11

3) 4/7 ..... 4/5

4) 5/12 .....7/12

5) 6/17 ..... 3/17

6) 5/19 ..... 11/19

7) 12/21 ..... 12/15

8) 11/17 ..... 11/15

9)  6/11 ..... 6/15

10) 14/23 ..... 5/23

11) 17/20 ..... 12/20

12) 11/15 ..... 8/15



ಅಭ್ಯಾಸ 5.3

I. ಈ ಸರಣಿಯನ್ನು ಪೂರ್ತಿಗೊಳಿಸಿ.

1) 2/3  = 4/6 = ⬍/9 = 8/⬍

2) 5/7 = ⬍/14 = 15/⬍ = ⬍/42


II. ಮುಂದಿನ ಮೂರು ಸಮಾನ ಭಿನ್ನರಾಶಿಗಳನ್ನು ಬರೆಯಿರಿ

1) 2/5, 4/10,  .....,  ......, .......

2) 3/8, 6/16, ....., ....., ..... .

3) 9/11, 18/22, ....., ....., ..... .


III. ಕೆಳಗೆ ಕೊಟ್ಟಿರುವ ಭಿನ್ನರಾಶಿಗಳು ಸಮಾನ ಆಗಿವೆಯೇ?

1) 3/5 ಮತ್ತು 18/30 (ಹೌದು)

2) 12/17 ಮತ್ತು 8/20 (ಇಲ್ಲಾ)

3) 2/7 ಮತ್ತು 7/21

4) 5/11 ಮತ್ತು 25/55


IV  ಕೆಳಗೆ ಕೊಟ್ಟಿರುವ ಅಂಶ ಮತ್ತು ಛೇದ ಇರುವಂತೆ 4/7 ಭಿನ್ನರಾಶಿಗೆ ಸಮಾನ ಭಿನ್ನರಾಶಿಗಳನ್ನು ಕಂಡುಹಿಡಿಯಿರಿ

1) ಅಂಶ 16 =

2) ಅಂಶ 24 =

3) ಛೇದ 21 =

4) ಛೇದ 84 =




ಅಭ್ಯಾಸ 5.4

I ಈ ಕೆಳಗಿನ ಭಿನ್ನರಾಶಿಗಳನ್ನು ಸುಲಭ ರೂಪಕ್ಕೆ ಬರೆಯಿರಿ.

1) 8/16  = (1/2)

2) 5/10  = (1/2)

3) 54/108  = (1/2)

4) 4/20  =

5) 3/15  =

6) 12/16  =

7) 9/27  =

8) 36/48  =

9) 24/56  =

10) 24/72  =



ಅಧ್ಯಾಯ-6.
ಕೋನಗಳು.


ಅಭ್ಯಾಸ 6.2

7) ಕೊಟ್ಟಿರುವ ಆಯ್ಕೆಗಳಿಂದ ಸರಿಯಾದುದನ್ನು ಆಯ್ಕೆ ಮಾಡಿ ಬರೆಯಿರಿ.
a) ಇವುಗಳಲ್ಲಿ ವಿಶಾಲಕೋನಕ್ಕೆ ಒಂದು ಉದಾಹರಣೆ.
1) 90°   
2) 53°   
3) 178°
4) 180°


8) ಈ ಮುಂದಿನ ಕೋನಗಳ ಅಳತೆಗಳನ್ನು ವಿಂಗಡಿಸಿರಿ.
16°, 180°, 88°, 179°, 45°, 90°, 100°, 35°, 142°
ಉತ್ತರ:
ಲಘುಕೋನ =
ಲಂಬಕೋನ =
ವಿಶಾಲಕೋನ =
ಸರಳಕೋನ =


9) ಮುಂದಿನ ಕೋನಗಳ ಅಳತೆಯನ್ನು ಅಂದಾಜು ಮಾಡಿ, ಅನಂತರ ಅವುಗಳನ್ನು ಅಳೆದು, ವಿಧವನ್ನು ಹೆಸರಿಸಿರಿ.

10) ಚಿತ್ರದಲ್ಲಿ ಗುರುತಿಸಿರುವ ಕೋನಗಳನ್ನು ಅಳೆದು ಮೊತ್ತವನ್ನು ಬರೆಯಿರಿ :




ಅಧ್ಯಾಯ-7.
ವೃತ್ತಗಳು.


ಅಭ್ಯಾಸ 7.1

I ಬಿಟ್ಟ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿಸಿ.

a) ವೃತ್ತದ ಮೇಲಿನ ಬಿಂದು ಮತ್ತು ವೃತ್ತಕೇಂದ್ರಕ್ಕಿರುವ ದೂರ ..... (ತ್ರಿಜ್ಯ)

b) ಚಿತ್ರದಲ್ಲಿ

1) ವೃತ್ತ ಕೇಂದ್ರ .....

2) ವೃತ್ತದ ತ್ರಿಜ್ಯವನ್ನು ಪ್ರತಿನಿಧಿಸುವ ರೇಖಾಖಂಡ .....

3) ವೃತ್ತದ ತ್ರಿಜ್ಯ ... ಸೆಂ.ಮೀ.


II ಸರಿಯಾದ ಹೇಳಿಕೆಯನ್ನು ✔️ ಚಿಹ್ನೆಯಿಂದಲೂ , ತಪ್ಪು ಹೇಳಿಕೆಯನ್ನು X ಚಿಹ್ನೆಯಿಂದಲೂ ಗುರುತಿಸಿ.

a) ಒಂದು ವೃತ್ತಕ್ಕೆ ಒಂದೇ ತ್ರಿಜ್ಯವನ್ನು ಎಳೆಯಬಹುದು (X )

b) ವೃತ್ತದ ಎಲ್ಲಾ ತ್ರಿಜ್ಯಗಳು ಪರಸ್ಪರ ಸಮ (✔️)

c) ಒಂದು ವೃತ್ತಕ್ಕೆ ಒಂದೇ ಕೇಂದ್ರವಿರುತ್ತದೆ. (✔️)



ಅಭ್ಯಾಸ 7.2

1) ಕೆಳಗಿನ ತ್ರಿಜ್ಯದ ವೃತ್ತಗಳನ್ನು ರಚಿಸಿ.

a) 1 ಸೆಂ.ಮೀ

b) 2.5 ಸೆಂ.ಮೀ

c) 3.0 ಸೆಂ.ಮೀ

d) 3.5 ಸೆಂ.ಮೀ

e) 3.7 ಸೆಂ.ಮೀ


3)  'O' ಬಿಂದುವನ್ನು ಗುರುತಿಸಿ ಇದೇ ಬಿಂದುವನ್ನು ಕೇಂದ್ರವಾಗಿರಿಸಿ, 2 ಸೆಂ.ಮೀ, 3 ಸೆಂ.ಮೀ, 4 ಸೆಂ.ಮೀ ಮತ್ತು 5 ಸೆಂ.ಮೀ ತ್ರಿಜ್ಯದ ವೃತ್ತಗಳನ್ನು ರಚಿಸಿ.


ಅಧ್ಯಾಯ-8.
ಉದ್ದ.


ಅಭ್ಯಾಸ 8.1


I. ಮೌಖಿಕ ಲೆಕ್ಕಗಳು.

1) 1 ಸೆಂಟಿಮೀಟರಿಗೆ ಎಷ್ಟು ಮಿಲೀಮೀಟರುಗಳು ? (10 ಮಿಲೀ ಮೀಟರು)

2) 1 ಮೀಟರಿಗೆ ಎಷ್ಟು ಸೆಂಟಿಮೀಟರುಗಳು? (100 ಸೆಂಟಿಮೀಟರು)

3) 1 ಕಿಲೋಮೀಟರಿಗೆ ಎಷ್ಟು ಮೀಟರುಗಳು? (1000 ಮೀಟರು)

4) 1/2 ಕಿಲೋ ಮೀಟರ್ ಎಷ್ಟು ಮೀಟರ್ ಗೆ ಸಮ? (500 ಮೀಟರು)

5) 3/4 ಮೀಟರ್ ಎಷ್ಟು ಸೆಂಟೀಮೀಟರಿಗೆ ಸಮ? (75 ಸೆಂಟಿಮೀಟರು)


II. ಈ ಕೆಳಗಿನವುಗಳನ್ನು ಬಿಡಿಸಿ.

1) 573 ಸೆಂ.ಮೀಗಳನ್ನು ಮೀಟರಿಗೆ ಪರಿವರ್ತಿಸಿ.

2) 1378 ಮೀಟರ್ ಗಳನ್ನು ಕಿಲೋಮೀಟರುಗಳಗಿ ಪರಿವರ್ತಿಸಿ

3) 1515 ಸೆಂಟಿಮೀಟರುಗಳನ್ನು ಮಿಲಿಮೀಟರುಗಳಾಗಿ ಪರಿವರ್ತಿಸಿ

4) ರಾಧೆಯ ಶಾಲೆಯು ಅವಳ ಮನೆಯಿಂದ 2450 ಮೀಟರ್ ದೂರದಲ್ಲಿದೆ. ಈ ದೂರವನ್ನು ಕಿಲೋಮೀಟರ್ ನಲ್ಲಿ ಬರೆಯಿರಿ

5) ಒಂದು ಖಾಲಿ ಜಾಗದ ಉದ್ದವು 15 ಮೀಟರ್ ಇದೆ. ಈ ಉದ್ದವನ್ನು ಸೆಂಟಿಮೀಟರ್ ನಲ್ಲಿ ಬರೆಯಿರಿ.



ಅಭ್ಯಾಸ 8.2
I.ಮೌಖಿಕ ಲೆಕ್ಕಗಳು.

1) ಒಂದು ತಂತಿಯ ಉದ್ದ 3 ಮೀ ಇದೆ. ಇಷ್ಟೇ ಉದ್ದದ 5 ತಂತಿಗಳ ಉದ್ದವೆಷ್ಟು?

2) 50 ಮೀ ಬಟ್ಟೆಯಿರುವ ಬಂಡಲಿನಿಂದ17 ಮೀ ಬಟ್ಟೆಯನ್ನು ಮಾರಲಾಗಿದೆ. ಉಳಿದಿರುವ ಬಟ್ಟೆಯ ಉದ್ದವೆಷ್ಟು?

3) 24 ಮೀ ಉದ್ದ ಬಣ್ಣದ ಟೇಪನ್ನು 8 ವಿದ್ಯಾರ್ಥಿನಿಯರಿಗೆ ಸಮನಾಗಿ ಹಂಚಲಾಗಿದೆ. ಪ್ರತಿ ವಿದ್ಯಾರ್ಥಿನಿಗೆ ದೊರೆತ ಟೇಪಿನ ಉದ್ದವೆಷ್ಟು?

4) 9 ಮೀ ಉದ್ದದಲ್ಲಿ ಎಷ್ಟು ಸೆಂಟಿಮೀಟರುಗಳಿವೆ?

5) 19 ಮೀ ಉದ್ದದ ಮರದ ಪಟ್ಟಿ ಇದೆ. ಇದರಲ್ಲಿ 3 ಮೀ ಉದ್ದದ 5 ತುಂಡುಗಳನ್ನು ಕತ್ತರಿಸಲಾಗಿದೆ. ಹಾಗಾದರೆ ಉಳಿದ ಮರದ ಪಟ್ಟಿಯಉದ್ದವೆಷ್ಟು?


II. ಇವುಗಳ ಮೊತ್ತ ಕಂಡು ಹಿಡಿಯಿರಿ.

1) 22 ಮೀ 71 ಸೆಂ.ಮೀ ಮತ್ತು 14 ಮೀ 30 ಸೆಂ.ಮೀ

2) 4 ಕಿ.ಮೀ 230 ಮೀ ಮತ್ತು 22 ಕಿ.ಮೀ 280 ಮೀ

III. ಇವುಗಳನ್ನು ಬಿಡಿಸಿ.

1) 75 ಮೀ 48 ಸೆಂ.ಮೀ ನಿಂದ 68 ಮೀ 35 ಸೆಂ.ಮೀ ನ್ನು ಕಳೆಯಿರಿ

2) 17 ಕಿ.ಮೀ 650 ಮೀ ನಿಂದ 12 ಕಿ.ಮೀ 425 ಮೀ ನ್ನು ಕಳೆಯಿರಿ


IV. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ

1) 12 ಸೆಂ.ಮೀ ಉದ್ದದ ಸರಳರೇಖೆಯನ್ನು 5 ಸೆಂ.ಮೀ ಉದ್ದದ ಎಷ್ಟು ಸರಳರೇಖೆಯಾಗಿ ಮಾಡಬಹುದು?

2) ರವಿಯು 3 ಮೀ 60 ಸೆಂ.ಮೀ ಉದ್ದದ ಪ್ಯಾಂಟಿನ ಬಟ್ಟೆಯನ್ನು ಕೊಂಡುಕೊಂಡನು. ಅದರಲ್ಲಿ ತನ್ನ ತಮ್ಮನಿಗೆ 1 ಮೀ 20 ಸೆಂ.ಮೀ ಉದ್ದದ ಬಟ್ಟೆಯನ್ನು ಕೊಟ್ಟನು. ಹಾಗಾದರೆ ರವಿಗೆ ಉಳಿದ ಪ್ಯಾಂಟಿನ ಬಟ್ಟೆ ಎಷ್ಟು?

3) ಜಾನ್‍ನು ಈ ರೀತಿ ಬಟ್ಟೆಯನ್ನು ಕೊಂಡುಕೊಂಡನು. ಷರ್ಟಿಗೆ 2 ಮೀ 20 ಸೆಂ.ಮೀ ಪ್ಯಾಂಟಿಗೆ 1 ಮೀ 20 ಸೆಂ.ಮೀ ಮತ್ತು ಕೋಟಿಗೆ 4 ಮೀ 80 ಸೆಂ.ಮೀ ಹಾಗಾದರೆ ಅವನು ಕೊಂಡ ಬಟ್ಟೆಯ ಉದ್ದವೆಷ್ಟು ?

4) ಒಂದು ಫ್ರಾಕ್ ಹೊಲೆಯಲು 2 ಮೀ 80 ಸೆಂ.ಮೀ ಬಟ್ಟೆ ಬೇಕು. ಅದೇ ಅಳತೆಯ 12 ಫ್ರಾಕ್‍ಗಳನ್ನು ಹೊಲೆಯಲು ಬೇಕಾಗುವ ಒಟ್ಟು ಬಟ್ಟೆ ಎಷ್ಟು ?

5) 6 ಜೊತೆ ಜುಬ್ಬಾ ಮತ್ತು ಫೈಜಾಮ ಹೊಲೆಯಲು 33 ಮೀ ಬಟ್ಟೆ ಬೇಕು. ಹಾಗಾದರೆ 1 ಜೊತೆಗೆ ಬೇಕಾಗುವ ಬಟ್ಟೆ ಎಷ್ಟು?

6) ತಂತಿಯ 8 ಬಂಡಲ್‍ಗಳಿವೆ. ಈ ಬಂಡಲ್‍ಗಳ ತಂತಿಯ ಉದ್ದ 204 ಮೀ ಹಾಗಾದರೆ ಪ್ರತಿಯೊಂದು ಬಂಡಲ್‍ನಲ್ಲಿರುವ ತಂತಿಯ ಉದ್ದವೆಷ್ಟು?

7) ಒಂದು ಏಣಿಯ ಎತ್ತರವು 1 ಮೀ 25 ಸೆಂ.ಮೀ ಇದೆ. ಒಂದು ಮೇಜಿನ ಎತ್ತರವು ಏಣಿಯ ಎತ್ತರಕ್ಕಿಂತ 50 ಸೆಂ.ಮೀ ಕಡಿಮೆ ಇದೆ. ಹಾಗಾದರೆ ಮೇಜಿನ ಎತ್ತರ ಎಷ್ಟು?

8) ಒಂದು ಗ್ರಾಮ ಪಂಚಾಯ್ತಿಯವರು ತಮ್ಮ ಹಳ್ಳಿಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ದಿನ ಅವರು 3 ಕಿ,ಮೀ 460 ಮೀ ರಸ್ತೆಯನ್ನು ಎರಡನೇ ದಿನ 4 ಕಿ.ಮೀ 540 ಮೀ ರಸ್ತೆಯನ್ನು ನಿರ್ಮಾಣ ಮಾಡಿದರು. ಹಾಗಾದರೆ ಅವರು ನಿರ್ಮಾಣ ಮಾಡಿದ ಒಟ್ಟು ರಸ್ತೆಯ ಉದ್ದವೆಷ್ಟು?




ಅಧ್ಯಾಯ-9.
ಸುತ್ತಳತೆ ಮತ್ತು ವಿಸ್ತೀರ್ಣ.


ಅಭ್ಯಾಸ 9.1

I. ಮೌಖಿಕ ಪ್ರಶ್ನೆಗಳು.

1) ಎರಡು ಆಯಾಮಗಳನ್ನು ಹೊಂದಿರುವ ಆಕೃತಿಯನ್ನು ಏನೆಂದು ಕರೆಯುತ್ತಾರೆ? (2ಡಿ)

2) ಆಯತದಲ್ಲಿರುವ ಎರಡು ಆಯಾಮಗಳನ್ನು ಹೆಸರಿಸಿ (ಉದ್ದ ಮತ್ತು ಅಗಲ)

3) ಆಯತದಲ್ಲಿ ಅಭಿಮುಖವಾದ ಎಷ್ಟು ಜೊತೆ ಬಾಹುಗಳಿವೆ? (2 ಜೊತೆ)

4) ಆಯತದಲ್ಲಿ ಅಭಿಮುಖ ಬಾಹುಗಳು ಪರಸ್ಪರ ಹೇಗಿವೆ? (ಸಮ ಮತ್ತು ಸಮಾಂತರ)

5) ಆಯತದ ಸುತ್ತಳತೆಯು ಅದರ ಉದ್ದ ಮತ್ತು ಅಗಲಗಳ ಮೊತ್ತದ ಎಷ್ಟರಷ್ಟಿರುತ್ತದೆ? (2 ರಷ್ಟು)


IV. ಈ ಸಮಸ್ಯೆಗಳನ್ನು ಬಿಡಿಸಿರಿ.

1) ಆಯತಾಕಾರದ ಕೊಠಡಿಯ ನೆಲದ ಉದ್ದ 6 ಮೀ ಮತ್ತು ಅಗಲ 4 ಮೀ ಹಾಗಾದರೆ ಅದರ ಸುತ್ತಳತೆ ಎಷ್ಟು?

2) ಆಯತಾಕಾರದ ಹೊಲದ ಉದ್ದವು 150 ಮೀ ಮತ್ತು ಅಗಲವು 120 ಮೀ. ಹಾಗಾದರೆ ಹೊಲದ ಸುತ್ತಳತೆ ಎಷ್ಟು?

3) ಆಯತಾಕಾರದ ತೋಟದ ಉದ್ದವು 80 ಮೀ ಮತ್ತು ಅಗಲವು 50 ಮೀ ಆದರೆ, ತೋಟದ ಸುತ್ತಳತೆ ಎಷ್ಟು? ಈ ತೋಟದ ಸುತ್ತ ಮುಳ್ಳಿನ ತಂತಿ ಬೇಲಿಯನ್ನು 5 ಸುತ್ತು ಹಾಕಬೇಕಾಗಿದೆ. ಹಾಗಾದರೆ, ಬೇಕಾಗುವ ತಂತಿಯ ಉದ್ದವೆಷ್ಟು?

4) 80 ಮೀ ಉದ್ದ ಮತ್ತು 30 ಮೀ ಅಗಲವಿರುವ ಆಯತಾಕಾರದ ಸಭಾಂಗಣದ ಗೋಡೆಯ ಸುತ್ತ 4 ಸುತ್ತು ಬಣ್ಣದ ಕಾಗದದ ತೋರಣವನ್ನು ಕಟ್ಟಬೇಕಾಗಿದೆ. ಇದಕ್ಕೆ ಬೇಕಾದ ತೋರಣದ ಉದ್ದವೆಷ್ಟು? ಒಂದು ಮೀಟರ್ ತೋರಣಕ್ಕೆ ರೂ.15 ಆದರೆ, ಸಭಾಂಗಣವನ್ನು ತೋರಣದಿಂದ ಶೃಂಗಾರ ಮಾಡಲು ತಗಲುವ ವೆಚ್ಚವೆಷ್ಟು?

5) ಶ್ರೀಲತಾಳು ಬೆಳಗಿನ ವಾಯು ಸಂಚಾರಕ್ಕೆ ಹೋದಾಗ, ಆಯತಾಕಾರ ಪಾರ್ಕಿನ ಅಂಚಿನ ಸುತ್ತ 3 ಸುತ್ತು ನಡೆದಳು. ಆ ಪಾರ್ಕಿನ ಉದ್ದ 320 ಮೀ ಮತ್ತು ಅಗಲ 210 ಮೀ ಆದರೆ, ಅವಳು ನಡೆದ ಒಟ್ಟು ದೂರವೆಷ್ಟು?



ಅಭ್ಯಾಸ 9.2


I ಮೌಖಿಕ ಪ್ರಶ್ನೆಗಳು.

1) ಚೌಕದ ಎರಡು ಆಯಾಮಗಳನ್ನು ತಿಳಿಸಿ

2) ಚೌಕದಲ್ಲಿ ಸಮನಾದ ಬಾಹುಗಳು ಎಷ್ಟು?

3) ಚೌಕದ ಸುತ್ತಳತೆಯು ಅದರ ಉದ್ದದ ಎಷ್ಟರಷ್ಟಿರುತ್ತದೆ?

4) 5 ಸೆಂ.ಮೀ ಬಾಹುವುಳ್ಳ ವರ್ಗದ ಸುತ್ತಳತೆ ಎಷ್ಟು?


IV ಈ ಸಮಸ್ಯೆಗಳನ್ನು ಬಿಡಿಸಿ.

1) ಒಂದು ಚೌಕಾಕಾರ ಕೊಠಡಿಯ ುದ್ದ 15 ಮೀ. ಅದರ ಸುತ್ತಳತೆ ಎಷ್ಟು?

2) ಒಂದು ಚೌಕಾಕಾರ ಮೈದಾನದ ಉದ್ದ 85 ಮೀ ಇದೆ. ರಾಮನು ಈ ಮೈದಾನದ ಸುತ್ತ 4 ಸುತ್ತು ಓಡುತ್ತಾನೆ. ಅವನು ಓಡಿದ ಒಟ್ಟು ದೂರವೆಷ್ಟು ?

3) ಒಂದು ಚೌಕಾಕಾರದ ಕೊಠಡಿಯ ಉದ್ದ 16 ಮೀ ಇದೆ. ಈ ಕೊಠಡಿಯು ಗೋಡೆಯ ಸುತ್ತ 4 ಸುತ್ತು ಬಣ್ಣದ ತೋರಣವನ್ನು ಕಟ್ಟಬೇಕಿದೆ. ಇದಕ್ಕೆ ಬೇಕಾದ ತೋರಣದ ಉದ್ದವೆಷ್ಟು?


ಅಭ್ಯಾಸ 9.3


I ಉತ್ತರಿಸಿ.

1) ವಿಸ್ತೀರ್ಣದ ಆದರ್ಶ ಮಾನ ಯಾವುದು?

2) ಒಂದು ಸಮತಲಾಕೃತಿಯು ಆಕ್ರಮಿಸುವ ಒಟ್ಟು ಸ್ಥಳವನ್ನು ಏನೆಂದು ಕರೆಯುತ್ತಾರೆ?

3) ಒಂದು ಘಟಕ ಚೌಕದ ವಿಸ್ತೀರ್ಣವು ಎಷ್ಟು ಚದರ ಮಾನಗಳು?


V ಈ ಸಮಸ್ಯೆಗಳನ್ನು ಬಿಡಿಸಿರಿ.

1) ಒಬ್ಬ ರೈತನು ಆಯತಾಕಾರದ  ಜಮೀನನ್ನು ಹೊಂದಿದ್ದಾನೆ. ಅದರ ಉದ್ದ 250 ಮೀ ಅಗಲ 180 ಮೀ ಆದರೆ, ಜಮೀನಿನ ವಿಸ್ತೀರ್ಣವನ್ನು ಕಂಡುಹಿಡಿಯಿರಿ.

2) ಒಂದು ಕೊಠಡಿಯ ನೆಲಕ್ಕೆ ಪೂರ್ಣವಾಗಿ ಅಲಂಕಾರಿಕ ಕಾರ್ಪೇಟನ್ನು ಹಾಸಬೇಕಿದೆ. ಕೊಠಡಿಯ ಉದ್ದ 16  ಮೀ ಮತ್ತು ಅಗಲ 5 ಮೀ. ಆದರೆ ಹಾಸಲು ಅಗತ್ಯವಿರುವ ಕಾರ್ಪೇಟ್‍ನ ವಿಸ್ತೀರ್ಣವನ್ನು ಕಂಡುಹಿಡಿಯಿರಿ.

3) ಆಯತಾಕಾರದ ಒಂದು ಸಭಾಂಗಣದ ಉದ್ದ 25 ಮೀ ಅಗಲ 18 ಮೀ. ಈ ಸಭಾಂಗಣದ ನೆಲಕ್ಕೆ 3 ಮೀ X 1ಮೀ ಅಳತೆಯ ಹಾಸುಗಲ್ಲನ್ನು ಹಾಕಬೇಕಿದೆ. ಬೇಕಾಗುವ ಹಾಸುಗಲ್ಲುಗಳೆಷ್ಟು?

4) ಆಯತಾಕಾರದ ಒಂದು ನಿವೇಶನವು 25 ಮೀ ಉದ್ದ ಮತ್ತು 15 ಮೀ ಅಗಲವಿದೆ. ಇದರ ವಿಸ್ತೀರ್ಣವನ್ನು ಕಂಡು ಹಿಡಿಯಿರಿ. ಒಂದು ಚ.ಮೀ.ಗೆ ರೂ 250 ದರದಂತೆ ನಿವೇಶನದ ಒಟ್ಟು ಬೆಲೆ ಎಷ್ಟು?




ಅಭ್ಯಾಸ 9.4



I. ಉತ್ತರಿಸಿ.

1) ಒಂದು ಚೌಕವು ಆಕ್ರಮಿಸುವ ಒಟ್ಟು ಸ್ಥಳವನ್ನು ಏನೆಂದು ಕರೆಯುತ್ತಾರೆ?

2) ವಿಸ್ತೀರ್ಣದ ಆದರ್ಶಮಾನ ಯಾವುದು?

3) ಚೌಕದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ ಯಾವುದು?


IV ಈ ಸಮಸ್ಯಗಳನ್ನು ಬಿಡಿಸಿರಿ.

1) ಒಂದು ಚೌಕಾಕಾರದ ಕೊಠಡಿಯ ಉದ್ದ 6 ಮೀ ಇದೆ. ಅದರ ವಿಸ್ತೀರ್ಣ ಎಷ್ಟು?

2) ಒಂದು ವರ್ಗಾಕಾರ ಹಾಳೆಯ ಉದ್ದ 21 ಸೆಂ.ಮೀ ಇದೆ. ಅದರ ವಿಸ್ತೀರ್ಣವೆಷ್ಟು?

3) ಚೌಕಾಕಾರವಿರುವ ಒಂದು ಕ್ಯಾನ್ವಾಸ್ ಬಟ್ಟೆಯ ಉದ್ದ 15 ಮೀ ಇದೆ. ಅದರ ವಿಸ್ತೀರ್ಣವೆಷ್ಟು?

4) ವರ್ಗಾಕಾರ ಕೊಠಡಿಯ ಉದ್ದ 8 ಮೀ ಇದೆ. ಈ ಕೊಠಡಿಯ ನೆಲಕ್ಕೆ 2 ಮೀ X 1 ಮೀ ಅಳತೆಯ ಗ್ರಾನೈಟ್ ಕಲ್ಲುಗಳನ್ನು ಹಾಕಿಸಬೇಕಿದೆ. ಬೇಕಾಗುವ ಗ್ರಾನೈಟ್ ಕಲ್ಲುಗಳೆಷ್ಟು?




ಅಧ್ಯಾಯ-10.
ಅಂಕಿ ಅಂಶಗಳು.


ಅಭ್ಯಾಸ 10.1

1) 




.................................................

ಗಣಿತ ಭಾಗ -2

.................................................





ಅಧ್ಯಾಯ-1.
ಗುಣಾಕಾರ.




I. ಗುಣಲಬ್ಧವನ್ನು ಕಂಡುಹಿಡಿಯಿರಿ.

1) 35 × 0 =

2) 164 × 1  =

3) 100 × 0  =

4) 1 × 235  =

5) 0 × 1,001  =

6) 1 × 55  =


II ಈ ಕೆಳಗಿನ ಸಂಖ್ಯೆಗಳ ಗುಣಲಬ್ಧವನ್ನು ಕಂಡುಹಿಡಿಯಿರಿ

1) 45 × 16  =

2) 63 × 31  =

3) 162 × 17 =

4) 18 × 42 =

5) 83 × 17 =

6) 234 × 22 =


III ಬಿಡಿಸಿ.

1) ಒಂದು ನೋಟ್‍ಪುಸ್ತಕದ ಬೆಲೆಯು ₹ 16. ಅಂತಹ 12 ನೋಟ್‍ಪುಸ್ತಕಗಳ ಬೆಲೆ ಎಷ್ಟು?

2) ಒಬ್ಬ ವಿದ್ಯಾರ್ಥಿಯ ಶಾಲಾ ಶುಲ್ಕವು ₹ 38 ಆದರೆ, 128 ವಿದ್ಯಾರ್ಥಿಗಳ ಶಾಲಾ ಶುಲ್ಕ ಎಷ್ಟು?

3) 63 ವಿದ್ಯಾರ್ಥಿಗಳು ತರಗತಿಯ ಶಿಕ್ಷಕರೊಂದಿಗೆ ಒಂದು ದಿನದ ಪವಾಸಕ್ಕೆ ಹೋದರು. ಶಿಕ್ಷಕರು ಪತಿ ವಿದ್ಯಾರ್ಥಿಯಿಂದ   ₹ 150 ನ್ನು ಪಯಾಣ ಮತ್ತು ಊಟದ ವೆಚ್ಚಕ್ಕಾಗಿ ಸಂಗಹಿಸಿದರೆ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಒಟ್ಟು ಹಣವೆಷ್ಟು? 

4) ಹತ್ತು ಕಿ.ಗ್ರಾ ಅಕ್ಕಿಯಿರುವ ಚೀಲದ ಬೆಲೆಯು  ₹ 285 ಆದರೆ, ಅಂತಹ 25 ಅಕ್ಕಿ ಚೀಲಗಳ ಬೆಲೆ ಎಷ್ಟು?

5) ಶಾಲೆಯ ಮುಖ್ಯ ಶಿಕ್ಷಕರು ಬೇರೆ ಬೇರೆ ಸ್ಪರ್ಧೆಗಳಿಗೆ ಮೊದಲನೇ ಮತ್ತು ಎರಡನೇ ಬಹುಮಾನಗಳನ್ನು ನೀಡಲು ನಿರ್ಧರಿಸಿದರು. 16 ವಿದ್ಯಾರ್ಥಿಗಳು ಮೊದಲನೇ ಮತ್ತು 16 ವಿದ್ಯಾರ್ಥಿಗಳು ಎರಡನೇ ಬಹುಮಾನಗಳನ್ನು ಪಡೆದರು. ಮೊದಲನೇ ಮತ್ತು ಎರಡನೇ ಬಹುಮಾನದ ಬೆಲೆಗಳು ಕ್ರಮವಾಗಿ ₹ 11 ಮತ್ತು ₹ 9. ಈ ಬಹುಮಾನಗಳನ್ನು ಕೊಂಡುಕೊಳ್ಳಲು ತಗಲುವ ವೆಚ್ಚ ಕಂಡುಹಿಡಿಯಿರಿ.






ಅಬ್ಯಾಸ 1.1

I ಗುಣಲಬ್ಧವನ್ನು ಕಂಡು ಹಿಡಿಯಿರಿ.

1) 146 × 173  =

2) 178 × 142 =

3) 163 × 134 =

4) 183 × 208 =

5) 150 × 107 =

6) 248 × 212 =

7) 316 × 100  =

8) 100 × 523 =


II ಗುಣಲಬ್ಧವನ್ನು ಕಂಡು ಹಿಡಿಯಿರಿ.

1) 2,861 × 9  =

2) 3,947 × 7 =

3) 7,254 × 6  =

4) 6,041 × 5 =

5) 8,028 × 8 =

6) 4,395 × 9 =


III ಗುಣಲಬ್ಧವನ್ನು ಕಂಡು ಹಿಡಿಯಿರಿ.

1) 9,025 × 10  =

2) 2,549 × 20 =

3) 3,746 × 23  =

4) 4,756 × 19 =

5) 2,439 × 31  =

6) 1,258 × 13 =

7) 1,028 × 37 =

8) 2,375 × 16 =


IV ಗುಣಲಬ್ಧವನ್ನು ಕಂಡು ಹಿಡಿಯಿರಿ.

1) 21,497 × 3  =

2) 15,746 × 5 =

3) 11,048 × 7  =

4) 10,039 × 9 =


V ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಸಿದ್ದಪ್ಪನು ಕಿತ್ತಳೆ ಹಣ್ಣನ್ನು ರಫ್ತು ಮಾಡುವ ಹಣ್ಣಿನ ದಲ್ಲಾಳಿ. ಒಂದು ಡಬ್ಬಿಯಲ್ಲಿ 144 ಕಿತ್ತಳೆ ಹಣ್ಣು ಇರುತ್ತವೆ. ಅವನು 259 ಕಿತ್ತಳೆ ಹಣ್ಣಿನ ಡಬ್ಬಿಗಳನ್ನು ರಫ್ತು ಮಾಡುತ್ತಾನೆ. ಹಾಗಾದರೆ ಅವನು ರಫ್ತು ಮಾಡುವ ಕಿತ್ತಳೆ ಹಣ್ಣುಗಳ ಸಂಖ್ಯೆಯನ್ನು
ಕಂಡುಹಿಡಿಯಿರಿ.

2) ಒಂದು ರಕ್ಷಿತ ಅರಣ್ಯ ಪ್ರದೇಶದಲ್ಲಿ, 160 ಗಿಡಗಳನ್ನು ಪ್ರತಿ ಅಡ್ಡ ಸಾಲಿನಲ್ಲಿ ಮತ್ತು 108 ಗಿಡಗಳನ್ನು ಪ್ರತಿ ಕಂಬಸಾಲಿನಲ್ಲಿ ಇರುವಂತೆ ನೆಡಲಾಗಿದೆ. ಒಟ್ಟು ಗಿಡಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.

3) ಒಬ್ಬ ಬೈಸಿಕಲ್ ಮಾರುವ ವ್ಯಾಪಾರಿಯು ತನ್ನ ಶೋ ರೂಂನ ಸಲುವಾಗಿ 27 ಬೈಸಿಕಲ್‍ಗಳನ್ನು ಕೊಂಡುಕೊಳ್ಳುತ್ತಾನೆ. ಪ್ರತಿ ಬೈಸಿಕಲ್‍ನ ಬೆಲೆಯು  ₹` 2,067 ಆದರೆ ಬೈಸಿಕಲ್ ವ್ಯಾಪಾರಿ ನೀಡಿದ ಒಟ್ಟು ಹಣ ಎಷ್ಟು ?

4) ಒಬ್ಬ ರೈತನು 23 ಕ್ವಿಂಟಾಲ್ ಗೋಧಿಯನ್ನು ಬೆಳೆಯುತ್ತಾನೆ. ಅವನು ಪ್ರತಿ ಕ್ವಿಂಟಾಲ್ ಗೋಧಿಯನ್ನು ₹ 1,935 ಗಳಿಗೆ ಮಾರುತ್ತಾನೆ. ಅವನಿಗೆ ಗೋಧಿಯನ್ನು ಮಾರುವುದರಿಂದ ದೊರೆಯುವ ಒಟ್ಟು ಹಣ ಎಷ್ಟು ?



ಅಧ್ಯಾಯ-2.
ಭಾಗಾಕಾರ.



ಅಬ್ಯಾಸ 2.1

I ಕೆಳಗಿನವುಗಳಿಗೆ  ಭಾಗಲಬ್ಧ ಹಾಗೂ ಶೇಷವನ್ನು ಕಂಡುಹಿಡಿಯಿರಿ.

1) 48 ÷ 6  =

2) 36 ÷ 3  =

3) 55 ÷ 4  =

4) 72 ÷ 7  =


IIಕೆಳಗಿನವುಗಳಿಗೆ  ಭಾಗಲಬ್ಧ ಹಾಗೂ ಶೇಷವನ್ನು ಕಂಡುಹಿಡಿಯಿರಿ.

1) 232 ÷ 4  =

2) 474 ÷ 6  =

3) 255 ÷ 11  =

4) 527 ÷ 12  =


III ಕೆಳಗಿನವುಗಳಿಗೆ  ಭಾಗಲಬ್ಧ ಹಾಗೂ ಶೇಷವನ್ನು ಕಂಡುಹಿಡಿಯಿರಿ.

1) 1,653 ÷ 8  =

2) 1,325 ÷ 2  =

3) 1,435 ÷ 15  =

4) 2,647 ÷ 13  =


IV ಕೆಳಗಿನವುಗಳಿಗೆ  ಭಾಗಲಬ್ಧ ಹಾಗೂ ಶೇಷವನ್ನು ಕಂಡುಹಿಡಿಯಿರಿ.

1) 24,658 ÷ 2  =

2) 14,005 ÷ 7  =

3) 32,745 ÷ 10  =

4) 12,056 ÷ 12  =


V ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಒಬ್ಬ ಟೈಲರನ ಹತ್ತಿರ 18 ಮೀಟರ್ ಅಂಗಿಯ ಬಟ್ಟೆ ಇದೆ. ಅವನು 9 ಅಂಗಿಗಳನ್ನು ಈ ಬಟ್ಟೆಯಿಂದ ಹೊಲಿಯಬಹುದು. ಹಾಗಾದರೆ ಒಂದು ಅಂಗಿಯನ್ನು ಹೊಲಿಯಲು ಎಷ್ಟು ಬಟ್ಟೆ ಬೇಕಾಗುತ್ತದೆ?

2) ಒಂದು ಬೈಕ್ 5 ಲೀಟರ್ ಪೆಟ್ರೋಲ್‍ನಲ್ಲಿ 240 ಕಿ. ಮೀ. ದೂರ ಕ್ರಮಿಸುತ್ತದೆ. ಹಾಗಾದರೆ ಈ ಬೈಕ್ ಪ್ರತಿ ಲೀಟರ್ ಗೆ ಎಷ್ಟು ದೂರ ಕ್ರಮಿಸುತ್ತದೆ? 

3) ಶ್ರೀಧರನು ₹ 946 ಕ್ಕೆ 11 ಸಮಾನ ಬೆಲೆಯ ಆಟಿಕೆ ಸಾಮಾನುಗಳನ್ನು ಕೊಂಡನು. ಪ್ರತಿ ಆಟಿಕೆಯ ಬೆಲೆಯನ್ನು ಕಂಡು ಹಿಡಿಯಿರಿ. 

4) ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ₹ 90,912. ಅವನ ಒಂದು ತಿಂಗಳಿನ ಆದಾಯವನ್ನು ಕಂಡುಹಿಡಿಯಿರಿ.

5) ಒಂದು ಕಾರಿನ ಕಾರ್ಖಾನೆಯು 13 ತಿಂಗಳಿನಲ್ಲಿ 14,820 ಕಾರುಗಳನ್ನು ಉತ್ಪಾದಿಸುತ್ತದೆ. ಕಾರಿನ ಕಾರ್ಖಾನೆಯು ಒಂದು ತಿಂಗಳಿನಲ್ಲಿ ಉತ್ಪಾದಿಸುವ ಕಾರುಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.



ಅಬ್ಯಾಸ 2.2

I ಕೆಳಗಿನ ಲೆಕ್ಕಗಳನ್ನು ಬಿಡಿಸಿ : 

1) ಕಿತ್ತಳೆಯ ತೋಟದಲ್ಲಿ 82 ಕಿತ್ತಳೆಯ ಗಿಡಗಳಿವೆ. ಒಬ್ಬ ರೈತನು ಪ್ರತಿಯೊಂದು ಗಿಡದಿಂದ 60 ಕಿತ್ತಳೆಯ ಹಣ್ಣುಗಳನ್ನು ಕೀಳುತ್ತಾನೆ. ಅವುಗಳನ್ನುಪ್ರತಿ ಪೆಟ್ಟಿಗೆಯಲ್ಲಿ 12 ಹಣ್ಣುಗಳಂತೆ ತುಂಬಿದರೆ ಆ ಎಲ್ಲಾ ಹಣ್ಣುಗಳನ್ನು ತುಂಬಲು ಎಷ್ಟು ಪೆಟ್ಟಿಗೆಗಳು
ಬೇಕಾಗುತ್ತವೆ?

2) ಒಂದು ಶಾಲೆಯ 15 ವಿದ್ಯಾರ್ಥಿಗಳು ಒಂದು ವಾಹನವನ್ನು ಪ್ರತಿ ಕಿ.ಮೀ. ಗೆ ₹ 9 ರಂತೆ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಅವರು 325 ಕಿ. ಮೀ. ದೂರಕ್ರಮಿಸಿದರೆ, ಪ್ರತಿ ವಿದ್ಯಾರ್ಥಿಯು ನೀಡಬೇಕಾದ ಹಣವನ್ನು ಲೆಕ್ಕ ಹಾಕಿ.

3) ಅನಿತಾಳ ಹತ್ತಿರ ಇರುವ ಹಸು ಒಂದು ದಿನಕ್ಕೆ 8 ಲೀಟರ್ ಹಾಲು ನೀಡುತ್ತದೆ. ಒಂದು ಲೀಟರ್ ಹಾಲಿನ ಮಾರುವ ಬೆಲೆಯು ₹ 18. ಅವಳು ಒಂದು ತಿಂಗಳಲ್ಲಿ ಗಳಿಸಿದ ಹಣವನ್ನು ತನ್ನ ನಾಲ್ಕು ಮಕ್ಕಳಿಗೆ ಸಮನಾಗಿ ಹಂಚಿದರೆ, ಪತಿಯೊಬ್ಬರಿಗೆ ಎಷ್ಟು ಹಣ ದೊರೆಯುತ್ತದೆ?



ಅಧ್ಯಾಯ-3.
ಮಾನಸಿಕ ಗಣಿತ.


ಅಭ್ಯಾಸ 3.1


I ಕೆಳಗಿನ ಸಂಖ್ಯೆಗಳನ್ನು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 7,547 =

2) 3,469 =

3) 15,238 =

4) 32,658 =


II ಕೆಳಗಿನ ಸಂಖ್ಯೆಗಳನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 26,674 =

2) 32,464 =

3) 46,379 =

4) 53,668 =


III ಕೆಳಗಿನ ಸಂಖ್ಯೆಗಳ ಮೊತ್ತವನ್ನು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.
1) 42,125 + 35,637 =

2) 54,837 + 41,354 =

3) 33,231 + 20,097 =

4) 47,463 + 41,541 =


IV ಕೆಳಗಿನ ಸಂಖ್ಯೆಗಳ ಮೊತ್ತವನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.
1) 56,256 + 24,872 =

2) 47,671 + 28,745 =

3) 32,184 + 45,138 =

4) 15,025 + 40,165 =


V ಕೆಳಗಿನ ಸಂಖ್ಯೆಗಳ ವ್ಯತ್ಯಾಸವನ್ನು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 65,487 – 46,502 =

2) 45,630 – 32,148 =

3) 57,146 – 25,472 =

4) 60,046 – 15,247 =


VI III ಕೆಳಗಿನ ಸಂಖ್ಯೆಗಳ ವ್ಯತ್ಯಾಸವನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 51,689 – 34,685 =

2) 86,853 – 47,829 =

3) 80,808 – 55,055 =

4) 77,777 – 44,444 =


VII  ಕೆಳಗಿನ ಸಂಖ್ಯೆಗಳ ಗುಣಲಬ್ಧವನ್ನು ಗರಿಷ್ಟ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 428 × 54 =

2) 878 × 46 =

3) 5,476 × 11 =

4) 2,645 × 18 =


VIII ಕೆಳಗಿನ ಸಂಖ್ಯೆಗಳ ಭಾಗಲಬ್ಧವನ್ನು ಗರಿಷ್ಟ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ.

1) 398 ÷ 82 =

2) 786 ÷ 22 =

3) 3,265 ÷ 58 =

4) 7,687 ÷ 43 =


IX ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಒಂದು ಸಿದ್ಧ ಉಡುಪು ತಯಾರಿಕಾ ಕಂಪನಿಯು 16,783 ಅಂಗಿಗಳನ್ನು ಮತ್ತು 12,438 ಪ್ಯಾಂಟುಗಳನ್ನು ಒಂದು ತಿಂಗಳಲ್ಲಿ ತಯಾರು ಮಾಡುತ್ತದೆ. ತಯಾರಿಸಿದ ಒಟ್ಟು ಉಡುಪುಗಳ ಸಂಖ್ಯೆಯನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ
ಅಂದಾಜು ಮಾಡಿರಿ.

2) ಸಮಾಚಾರ ಪತ್ರಿಕೆಯನ್ನು ಮಾರುವವನು ಮೊದಲ ತಿಂಗಳಲ್ಲಿ 36,721 ಮತ್ತು ಎರಡನೇ ತಿಂಗಳಲ್ಲಿ 24,172 ಪತ್ರಿಕೆಗಳನ್ನು ಮಾರುತ್ತಾನೆ. ಎರಡನೇ ತಿಂಗಳಲ್ಲಿ ಎಷ್ಟು ಕಡಿಮೆ ಪತ್ರಿಕೆಗಳು ಮಾರಾಟವಾದವು ಎಂಬುದನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ ಅಂದಾಜು ಮಾಡಿರಿ.

3) ಒಂದು ರೈಲುಗಾಡಿಯು ಒಂದು ಗಂಟೆಯಲ್ಲಿ 225 ಕಿ. ಮೀ. ಚಲಿಸುತ್ತದೆ. ಒಂದು ದಿನದಲ್ಲಿ ಚಲಿಸುವ ದೂರವನ್ನು ಗರಿಷ್ಠ ಸ್ಥಾನದ ಬೆಲೆಗೆ ಅಂದಾಜು ಮಾಡಿರಿ.

4) ಒಬ್ಬ ಮರಗೆಲಸ ಮಾಡುವವನು ನವೆಂಬರ್ ತಿಂಗಳಿನಲ್ಲಿ ₹ 18,634 ಗಳನ್ನು ಮತ್ತು ಡಿಸೆಂಬರ್ ತಿಂಗಳಿನಲ್ಲಿ ₹ 32,645 ಗಳಿಸುತ್ತಾನೆ. ಡಿಸೆಂಬರ್ ತಿಂಗಳಲ್ಲಿ ಎಷ್ಟು ಹೆಚ್ಚು ಹಣವನ್ನು ಗಳಿಸುತ್ತಾನೆ ಎಂಬುದನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ ಅಂದಾಜು ಮಾಡಿರಿ




ಅಧ್ಯಾಯ-4.
ದಶಮಾಂಶ ಭಿನ್ನರಾಶಿಗಳು.


ಅಭ್ಯಾಸ 4.1


I.  ಕೆಳಗಿನ ದಶಮಾಂಶಗಳನ್ನು ಓದಿ ಮತ್ತು ಪದಗಳಲ್ಲಿ ಬರೆಯಿರಿ.

1) 0.5  =

2) 0.13  =

3) 1.7  =

4) 5.21  =


II. ಕೆಳಗೆ ಕೊಟ್ಟಿರುವುದನ್ನು ಸಂಖ್ಯೆಯಲ್ಲಿ ಬರೆಯಿರಿ.

1) ಸೊನ್ನೆ ಬಿಂದು ಒಂದು ಎರಡು  =

2) ಆರು ಬಿಂದು ಎಂಟು  =

3) ಹತ್ತು ಬಿಂದು ಐದು  =

4) ನಾಲ್ಕು ಬಿಂದು ಸೊನ್ನೆ ಎರಡು  =

5) ಆರು ಬಿಂದು ಎಂಟು ನಾಲ್ಕು  =

6) ನೂರಾ ಎಂಟು ಬಿಂದು ಸೊನ್ನೆ ಆರು  =


III. ಬಿಟ್ಟ ಜಾಗಗಳನ್ನು ತುಂಬಿರಿ.

1) 8 ಮಿ.ಮೀ = ..... ಸೆಂ.ಮೀ

2) 75 ಮಿ.ಮೀ = ..... ಸೆಂ.ಮೀ

3) 8 ಸೆಂ.ಮೀ. 5 ಮಿ.ಮೀ = ..... ಸೆಂ.ಮೀ

4) 525 ಮಿ.ಮೀ = ..... ಸೆಂ.ಮೀ


IV ಬಿಟ್ಟ ಜಾಗ ಭರ್ತಿ ಮಾಡಿ.

1) 1) 8 ಸೆಂ.ಮೀ = ..... ಮೀ

2) 72 ಸೆಂ.ಮೀ = ..... ಮೀ

3) 375 ಸೆಂ.ಮೀ = ..... ಮೀ

4) 4 ಮೀ 80 ಸೆಂ.ಮೀ = ..... ಮೀ

5) 15 ಮೀ 6 ಸೆಂ.ಮೀ = .....ಮೀ


V ದಶಮಾಂಶ ಭಿನ್ನರಾಶಿಗಳಲ್ಲಿ ಬರೆಯಿರಿ

1) 75 ಪೈಸೆಗಳು = ₹ ......

2) 10 ರೂಪಾಯಿಗಳು ಮತ್ತು 25 ಪೈಸೆಗಳು = ₹ ......

3) 870 ಪೈಸೆಗಳು = ₹ ......

4) 782 ರೂಪಾಯಿಗಳು ಮತ್ತು 10 ಪೈಸೆಗಳು = ₹ ......

5) 2050 ಪೈಸೆಗಳು = ₹ ......


ಅಭ್ಯಾಸ 4.2

I ಕೆಳಗೆ ಕೊಟ್ಟಿರುವ ಭಿನ್ನರಾಶಿಗಳನ್ನು ದಶಮಾಂಶ ಭಿನ್ನರಾಶಿಗಳಾಗಿ ಬರೆಯಿರಿ.

1)  8/10  =

2)  7/10  =

3)  6/10  =

4)  16/10  =

5)  42/10  =

6)  83/10  =

7)  7/100  =

8)  72/100  =

9)  861/100  =

10)  162/10  =

11)  141/100  =

12) 1461/100 =

13)  1/2 =

14) 3/4  =

15)  2/5  =

16)  7/20  =

17)  38/50  =

18)  17/25  =

19)  13/20  =

20)  8/25  =


II ಕೆಳಗೆ ಕೊಟ್ಟಿರುವ ದಶಮಾಂಶ ಭಿನ್ನರಾಶಿಗಳನ್ನು ಸಾಮಾನ್ಯ ಭಿನ್ನರಾಶಗಳಾಗಿ ಬರೆಯಿರಿ.

1)  0.7  =

2)  0.02  =

3)  3.8  =

4)  14.5  =

5)  0.56  =

6)  8.03  =

7)  14.57  =

8)  85.4  =

9)  147.5  =

10)  8.5  =

11)  85.61  =

12)  6.84  =



ಅಧ್ಯಾಯ-5.
ಹಣ


ಅಭ್ಯಾಸ 5.1 



I. ಇವುಗಳ ಬೆಲೆ ಕಂಡು ಹಿಡಿಯಿರಿ

1) ₹ 13.25, ₹ 6.30 ಮತ್ತು ₹ 10.40 ರ ಮೊತ್ತ = .....

2) ₹ 78.45 ಮತ್ತು ₹ 69.70 ರ ವ್ಯತ್ಯಾಸ = .....

3) ₹ 147.25 X ₹ 8 ರ ಭಾಗಲಬ್ಧ = .....


II ಕೆಳಗಿನವುಗಳನ್ನು ಬಿಡಿಸಿ.

1) ₹ 95.8 ನ್ನು ₹ 279.05 ಮತ್ತು ₹ 103.25 ರ ಮೊತ್ತದಿಂದ ಕಳೆಯಿರಿ.

2) ₹ 32 ನ್ನು ಪೈಸೆಗಳಲ್ಲಿ ಸೂಚಿಸಿ

3) ₹ 19.75 ಗಳನ್ನು ಪೈಸೆಗಳಲ್ಲಿ ಸೂಚಿಸಿ

4) 4705 ಪೈಸೆಗಳನ್ನು ರೂಪಾ ಯಿಗಳಲ್ಲಿ ಸೂಚಿಸಿ.


ಹಣಕಾಸಿನ ವ್ಯವಹಾರದಲ್ಲಿ ಸಂಕಲನಕ್ಕೆ ಸಂಬಂಧಿಸಿದ ಸಮಸ್ಯೆಗಳು.
III ಬಿಡಿಸಿ.

1) ನನ್ನ ಹತ್ತಿರ ₹ 625 ಇದೆ. ನನ್ನ ತಂದೆ ನನಗೆ ₹ 450.75 ನ್ನು ಕೊಟ್ಟರು. ಹಾಗಾದರೆ ಈಗ ನನ್ನ ಹತ್ತಿರ ಇರುವ ಒಟ್ಟು ಹಣ ಎಷ್ಟು ?

2) ಮಹೇಶನು ₹ 18.5 ಕ್ಕೆ ಒಂದು ಪೆನ್ನನ್ನು,  ₹ 10.75 ಕ್ಕೆ ಒಂದು ಪುಸ್ತಕವನ್ನು ಮತ್ತು ₹ 125 ಕ್ಕೆ ಒಂದು ಕೈಚೀಲವನ್ನು ಕೊಂಡನು. ಹಾಗಾದರೆ, ಅವನು ಕೊಂಡ ಎಲ್ಲಾ ವಸ್ತುಗಳ ಒಟ್ಟು ಬೆಲೆ ಎಷ್ಟು?

3) ಗಿರಿಜಳು ತರಕಾರಿ ಅಂಗಡಿಯಲ್ಲಿ ₹ 36.50 ಕ್ಕೆ ಕಿ.ಗ್ರಾಂ ಹುರುಳಿಕಾಯಿ, ₹ 12.25 ಕ್ಕೆ ಒಂದು ಕಿ.ಗ್ರಾಂ ಟೊಮೆಟೋ ಮತ್ತು
₹ 14.75 ಕ್ಕೆ ಒಂದು ಕಿ.ಗ್ರಾಂ ಆಲೂಗೆಡ್ಡೆಯನ್ನು ಕೊಳ್ಳುತ್ತಾಳೆ. ಹಾಗಾದರೆ ಗಿರಿಜಳು ತರಕಾರಿ ಅಂಗಡಿಯವನಿಗೆ ಒಟ್ಟು ಎಷ್ಟು ಹಣವನ್ನು ನೀಡಬೇಕು?


ಹಣಕಾಸಿನ ವ್ಯವಹಾರದಲ್ಲಿ ವ್ಯವಕಲನಕ್ಕೆ ಸಂಬಂಧಿಸಿದ ಸಮಸ್ಯೆಗಳು.

III ಬಿಡಿಸಿ.

1) ₹ 500 ರಿಂದ ₹ 348.25 ನ್ನು ಕಳೆ.

2) ವರುಣನು ₹ 475.5 ಗೆ ಸಿಹಿ ತಿಂಡಿಯನ್ನು ಕೊಂಡನು ಅದಕ್ಕಾಗಿ  ಅಂಗಡಿಯವನಿಗೆ ₹ 500 ನ್ನು ಕೊಟ್ಟನು. ಹಾಗಾದರೆ ಅಂಗಡಿಯವನಿಂದ ವರುಣನಿಗೆ ಬರಬೇಕಾದ ಬಾಕಿ ಹಣ ಎಷ್ಟು?

3) ರಜಿಯಾಳ ಹತ್ತಿರ ₹ 345 ಇದೆ. ಇದರಲ್ಲಿ ಇವಳು ₹ 245.75 ಮೌಲ್ಯದ ಉಡುಪನ್ನು ಕೊಳ್ಳುತ್ತಾಳೆ. ಹಾಗಾದರೆ ಇವಳ ಹತ್ತಿರ ಉಳಿಯುವ ಹಣ ಎಷ್ಟು?

4) ಪೂರ್ಣಿಮಳ ಹತ್ತಿರ ₹ 3425 ಗಳಿವೆ. ಇವಳು ತನ್ನ ಸ್ನೇಹಿತೆಗೆ ಸೀರೆ ತೆಗೆದುಕೊಳ್ಳಲು ₹ 2745.75 ಹಣವನ್ನು ಕೊಟ್ಟಳು. ಹಾಗಾದರೆ ಪೂರ್ಣಿಮಳ ಹತ್ತಿರ ಉಳಿಯುವ ಹಣ ಎಷ್ಟು?

5) ಜೋಸೆಪ್‍ನು ಬ್ಯಾಂಕ್ ಒಂದರ ತನ್ನ ಖಾತೆಯಲ್ಲಿ ₹ 2500 ರಷ್ಟು ಹಣ ಹೊಂದಿರುತ್ತಾನೆ. ತನ್ನ ಖರ್ಚಿಗಾಗಿ ಇದರಿಂದ ₹ 1800.75 ಹಣವನ್ನು ಹಿಂಪಡೆಯುತ್ತಾನೆ. ಹಾಗಾದರೆ, ಇವನ ಖಾತೆಯಲ್ಲಿ ಇರುವ ಬಾಕಿ ಹಣ ಎಷ್ಟು?


ಹಣಕಾಸಿನ ವ್ಯವಹಾರದಲ್ಲಿ ಗುಣಾಕಾರ ಕ್ಕೆ ಸಂಬಂಧಿಸಿದ ಸಮಸ್ಯೆಗಳು.

IV ಬಿಡಿಸಿ. 

1) ಒಂದು ಕೋಳಿ ಮೊಟ್ಟೆಯ ಬೆಲೆ ₹ 4 ಆದರೆ, ಒಂದು ಡಜನ್ ಕೋಲಿ ಮೊಟ್ಟೆಗಳ ಬೆಲೆ ಎಷ್ಟು?

2) ಸ್ವಾತಿಯು ಬಟ್ಟೆ ಅಂಗಡಿಯಲ್ಲಿ ಮೀ.ಗೆ ₹ 75 ರಂತೆ 8 ಮೀಟರ್ ಬಟ್ಟೆಯನ್ನು ಕೊಳ್ಳುತ್ತಾಳೆ. ಹಾಗಾದರೆ ಅವಳು ಅಂಗಡಿಯವನಿಗೆ ಕೊಡಬೇಕಾದ ಒಟ್ಟು ಹಣ ಎಷ್ಟು?

3) ಒಂದು ಛತ್ರಿಯ ಬೆಲೆ ₹ 225 ಆದರೆ, 15 ಛತ್ರಿಗಳ ಬೆಲೆ ಎಷ್ಟು?

4) ಒಬ್ಬ ಕೂಲಿಕಾರನು ಒಂದು ದಿನಕ್ಕೆ ₹ 525 ಹಣವನ್ನು ಸಂಪಾದಿಸುತ್ತಾನೆ. ಹಾಗಾದರೆ ಅವನ ಒಂದು ವಾರದ ಸಂಪಾದನೆ ಎಷ್ಟು?

5) ಒಂದು ಮೇಜಿನ ಬೆಲೆ ₹ 4320 ಆದರೆ, 16 ಮೇಜುಗಳ ಬೆಲೆ ಎಷ್ಟು?



ಹಣಕಾಸಿನ ವ್ಯವಹಾರದಲ್ಲಿ ಭಾಗಾಕಾರ ಕ್ಕೆ ಸಂಬಂಧಿಸಿದ ಸಮಸ್ಯೆಗಳು.

V ಬಿಡಿಸಿ. 
1) ಒಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 10 ವಿದ್ಯಾರ್ಥಿಗಳಿಗೆ ಒಟ್ಟು  4000 ರಷ್ಟು ಹಣವನ್ನು ವಿದ್ಯಾರ್ಥಿವೇತನಕ್ಕಾಗಿ ನೀಡಲಾಯಿತು. ಹಾಗಾದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ನೀಡಿದ ವಿದ್ಯಾರ್ಥಿವೇತನ ಎಷ್ಟು?

2) ಮೋಹನನು 9 ಅಂಗಿಗಳನ್ನು ಕೊಳ್ಳಲು  1422 ಅನ್ನು ಕೊಟ್ಟನು. ಹಾಗಾದರೆ ಪ್ರತಿ ಅಂಗಿಯ ಬೆಲೆ ಎಷ್ಟು?

3)  1125 ಹಣವನ್ನು ಅಮರ್, ಅಕ್ಬರ್, ಮತ್ತು ಆಂಥೋನಿಯವರಿಗೆ ಸಮನಾಗಿ ಹಂಚಲಾಯಿತು. ಹಾಗಾದರೆ ಪ್ರತಿಯೊಬ್ಬರಿಗೂ ದೊರಕಿದ ಹಣದ ಪಾಲೆಷ್ಟು?

4) ಒಂದು ಡಜನ್ ಸೇಬು ಹಣ್ಣಿನ ಬೆಲೆ   96 ಆದರೆ, ಒಂದು ಸೇಬು ಹಣ್ಣಿನ ಬೆಲೆ ಎಷ್ಟು?

5) ವಿನೋದ ಮರಕೆಲಸ ಮಾಡಿ 6 ದಿವಸಗಳಲ್ಲಿ  9666 ಸಂಪಾದನೆ ಮಾಡುತ್ತಾನೆ. ಹಾಗಾದರೆ ಅವನ ಒಂದು ದಿನದ ಸಂಪಾದನೆ ಎಷ್ಟು?





ಅಧ್ಯಾಯ-6.
ತೂಕ ಮತ್ತು ಗಾತ್ರ



ಅಭ್ಯಾಸ 6.1 




I  ಮೌಖಿಕ ಲೆಕ್ಕಗಳು.

1) ಆಲ್ಬರ್ಟನು ಅಂಗಡಿಯಿಂದ 16 ಕಿ.ಗ್ರಾಂ ಬೆಲ್ಲ ಮತ್ತು 15 ಕಿ.ಗ್ರಾಂ ಅಕ್ಕಿಯನ್ನು ಕೊಂಡುಕೊಂಡನು. ಎರಡೂ ಪೊಟ್ಟಣಗಳನ್ನು ಒಂದೇ ಚೀಲದಲ್ಲಿ ಹಾಕಿದನು. ಹಾಗಾದರೆ ಆ ಚೀಲದಲ್ಲಿರುವ ವಸ್ತುಗಳ ಒಟ್ಟು ತೂಕವೆಷ್ಟು?

2) ಒಂದು ಶಾಲೆಯ ಉಗ್ರಾಣದಲ್ಲಿ ಅಕ್ಷರ ದಾಸೋಹಕ್ಕಾಗಿ ಒದಗಿಸಿದ 62 ಕಿ.ಗ್ರಾಂ ಅಕ್ಕಿ ಇದೆ. ಇದರಲ್ಲಿ ಒಂದು ದಿನ 15 ಕಿ.ಗ್ರಾಂ ಅಕ್ಕಿಯನ್ನು ಊಟಕ್ಕಾಗಿ ಉಪಯೋಗಿಸಿದರೆ ಉಳಿದ ಅಕ್ಕಿ ಎಷ್ಟು?

3) ಒಂದು ಚೀಲದಲ್ಲಿ 20 ಕಿ.ಗ್ರಾಂ ರವೆಯನ್ನು ತುಂಬಬಹುದು. ಹಾಗಾದರೆ, 140 ಕಿ.ಗ್ರಾಂ ರವೆಯನ್ನು ತುಂಬಲು ಅಂತಹ ಎಷ್ಟು  ಚೀಲಗಳು ಬೇಕು?

4) ಒಬ್ಬ ವ್ಯಾಪಾರಿಯು, ಪ್ರತಿ ಪೊಟ್ಟಣದಲ್ಲಿ 15 ಕಿ.ಗ್ರಾಂ ಸಕ್ಕರೆ ತುಂಬಿರುವ 5 ಪೊಟ್ಟಣಗಳನ್ನು ಹೊಂದಿದ್ದಾನೆ. ಹಾಗಾದರೆ ಅವನಲ್ಲಿರುವ  ಒಟ್ಟು ಸಕ್ಕರೆಯ ತೂಕವೆಷ್ಟು?


II ಇವುಗಳನ್ನು ಪರಿವರ್ತಿಸಿ

1) 7 ಕಿ.ಗ್ರಾಂ = .... ಗ್ರಾಂ

2) 16 ಗ್ರಾಂ = ..... ಮಿ.ಗ್ರಾಂ

3) 6000 ಮಿ.ಗ್ರಾಂ = ..... ಗ್ರಾಂ

4) 750 ಮಿ.ಗ್ರಾಂ = ..... ಗ್ರಾಂ

5) 12 ಕ್ವಿಂಟಾಲ್ = ...... ಕಿ.ಗ್ರಾಂ

6) 1500 ಕಿ.ಗ್ರಾಂ = ..... ಕ್ವಿಂಟಾಲ್


III ಇವುಗಳನ್ನು ಕೂಡಿ.

1) 4 ಕಿ.ಗ್ರಾಂ 250 ಗ್ರಾಂ 12 ಕಿ.ಗ್ರಾಂ ಮತ್ತು 355 ಗ್ರಾಂ

2) 23 ಕಿ.ಗ್ರಾಂ 432 ಗ್ರಾಂ, 37 ಕಿ.ಗ್ರಾಂ ಮತ್ತು 350 ಗ್ರಾಂ

3) 12 ಕಿ.ಗ್ರಾಂ 450 ಗ್ರಾಂ, 15 ಕಿ.ಗ್ರಾಂ ಮತ್ತು 550 ಗ್ರಾಂ

4) 17 ಕಿ.ಗ್ರಾಂ, 370 ಗ್ರಾಂ, 18 ಕಿ.ಗ್ರಾಂ ಮತ್ತು 630 ಗ್ರಾಂ

5) 6 ಕಿ.ಗ್ರಾಂ 250 ಗ್ರಾಂ, 8 ಕಿ.ಗ್ರಾಂ 430 ಗ್ರಾಂ, 7 ಕಿ.ಗ್ರಾಂ 220 ಗ್ರಾಂ ಮತ್ತು 430 ಗ್ರಾಂ



IV ಇವುಗಳನ್ನು ಕಳೆಯಿರಿ.

1) 28 ಕಿ.ಗ್ರಾಂ 550 ಗ್ರಾಂ ನಿಂದ 13 ಕಿ.ಗ್ರಾಂ 250 ಗ್ರಾಂ ಅನ್ನು ಕಳೆಯಿರಿ.

2) 70 ಕಿ,ಗ್ರಾಂ 675 ಗ್ರಾಂ ನಿಂದ 35 ಕಿ.ಗ್ರಾಂ 550 ಗ್ರಾಂ ಅನ್ನು ಕಳೆಯಿರಿ

3) 85 ಕಿ.ಗ್ರಾಂ 730 ಗ್ರಾಂ ನಿಂದ 55 ಕಿ.ಗ್ರಾಂ 335 ಗ್ರಾಂ ಅನ್ನು ಕಳೆಯಿರಿ

4) 63 ಕಿ.ಗ್ರಾಂ 350 ಗ್ರಾಂ ನಿಂದ 28 ಕಿ.ಗ್ರಾಂ 650 ಗ್ರಾಂ ಅನ್ನು ಕಳೆಯಿರಿ

5) 75 ಕಿ.ಗ್ರಾಂ 475 ಗ್ರಾಂ ನಿಂದ 34 ಕಿ.ಗ್ರಾಂ 585 ಗ್ರಾಂ ಅನ್ನು ಕಳೆಯಿರಿ


V  ಕೆಳಗಿನ ಸಮಸ್ಯೆಗಳನ್ನು ಬಿಡಿಸಿರಿ

1) ರಾಧೆಯು ತರಕಾರಿ ಅಂಗಡಿಯಿಂದ 2 ಕಿ.ಗ್ರಾಂ 500 ಗ್ರಾಂ ಕ್ಯಾರೇಟ್, 2 ಕಿ.ಗ್ರಾಂ 500 ಗ್ರಾಂ ಬದನೆಕಾಯಿ ಮತ್ತು 3 ಕಿ.ಗ್ರಾಂ 250 ಗ್ರಾಂ ಟೊಮೆಟೊ ತಂದಳು. ಹಾಗಾದರೆ ಅವಳು ತಂದ ತರಕಾರಿಯ ಒಟ್ಟು ತೂಕವೆಷ್ಟು?

2) ಒಬ್ಬ ವ್ಯಾಪಾರಿಯಲ್ಲಿ 68 ಕಿ.ಗ್ರಾಂ 250 ಗ್ರಾಂ ಗೋಧಿ ಇದೆ. ಅದರಲ್ಲಿ ಅವನು 15 ಕಿ.ಗ್ರಾಂ 250 ಗ್ರಾಂ ಅನ್ನು ಒಬ್ಬ ಗ್ರಾಹಕರಿಗೆ ಮತ್ತು 13 ಕಿ.ಗ್ರಾಂ 500 ಗ್ರಾಂ ಅನ್ನು ಇನ್ನೊಬ್ಬ ಗ್ರಾಹಕರಿಗೆ ಮಾರಿದನು. ಹಾಗಾದರೆ ವ್ಯಾಪಾರಿಯಲ್ಲಿ ಉಳಿದ ಗೋಧಿಯ ತೂಕವೆಷ್ಟು?

3) ಒಂದು ಎಕರೆ ಗದ್ದೆಯಲ್ಲಿ 29 ಕ್ವಿಂಟಾಲ್ 50 ಕಿ.ಗ್ರಾಂ ಭತ್ತವನ್ನು ಬೆಳೆಯಬಹುದಾಗಿದೆ. ರಾಚಪ್ಪನಿಗೆ 30 ಎಕರೆ ಗದ್ದೆ ಇದೆ. ಹಾಗಾದರೆ ಅವನು ಬೆಳೆಯಬಹುದಾದ ಒಟ್ಟು ಭತ್ತದ ತೂಕವೆಷ್ಟು?

4) 18 ಕಿ.ಗ್ರಾಂ 400 ಗ್ರಾಂ ಸಕ್ಕರೆಯನ್ನು 4 ಚೀಲಗಳಿಗೆ ಸಮನಾಗಿ ಹಂಚಿ ತುಂಬಲಾಗಿದೆ. ಹಾಗಾದರೆ ಪ್ರತಿ ಚೀಲದಲ್ಲಿರುವ ಸಕ್ಕರೆಯ ತೂಕವೆಷ್ಟು?

5) ಒಬ್ಬ ರೈತನು  ತನ್ನ ಒಂದು ಜಮೀನಿನಲ್ಲಿ 60 ಕಿ.ಗ್ರಾಂ 400 ಗ್ರಾಂ ಈರುಳ್ಳಿಯನ್ನು ಬೆಳೆದನು. ತನ್ನ ಮತ್ತೊಂದು ಜಮೀನಿನಲ್ಲಿ 56 ಕಿ.ಗ್ರಾಂ 800 ಗ್ರಾಂ ಈರುಳ್ಳಿಯನ್ನು ಬೆಳೆದನು. ಅವನು ಬೆಳೆದ ಒಟ್ಟು ಈರುಳ್ಳಿಯಲ್ಲಿ 9 ಕಿ.ಗ್ರಾಂ 200 ಗ್ರಾಂ ಅನ್ನು ಮಾರಾಟ ಮಾಡಿದನು. ಅವನಲ್ಲಿ ಉಳಿದ ಈರುಳ್ಳಿಯ  ತೂಕವೆಷ್ಡು?




ಅಭ್ಯಾಸ 6.2 

I ಮೌಖಿಕ ಲೆಕ್ಕಗಳು

1) ಒಂದು ಲೋಟದಲ್ಲಿ 300 ಮಿ.ಲೀ ನೀರಿದೆ. ಮತ್ತೊಂದು ಲೋಟದಲ್ಲಿ 250 ಮಿ.ಲೀ ನೀರಿದೆ. ಈ ಎರಡೂ ಲೋಟದ ನೀರನ್ನು ಒಂದು ಪಾತ್ರೆಗೆ  ಸುರಿಯಲಾಗಿದೆ. ಹಾಗಾದರೆ ಪಾತ್ರೆಯಲ್ಲಿರುವ ನೀರಿನ ಅಳತೆ ಎಷ್ಟು?

2) ಒಬ್ಬ ಹಾಲಿನ ವ್ಯಾಪಾರಿಯ ಬಳಿ 5 ಲೀ 700 ಮಿ.ಲೀ ಹಾಲಿದೆ. ಇದರಲ್ಲಿ ಅವನು ಒಬ್ಬರಿಗೆ 1 ಲೀ 350 ಮಿ.ಲೀ ಮತ್ತು ಇನ್ನೊಬ್ಬರಿಗೆ 2 ಲೀ 250 ಮಿ.ಲೀ ಹಾಲನ್ನು ಮಾರಿದರೆ, ವ್ಯಾಪಾರಿಯಲ್ಲಿ ಉಳಿದ ಹಾಲೆಷ್ಟು?

3) ಒಂದು ಬಾಟಲಿಯಲ್ಲಿ 200 ಮಿ.ಲೀ ಹಾಲು ತುಂಬಿದೆ. ಅಷ್ಟೇ ಅಳತೆಯ 5 ಬಾಟಲಿಗಳಲ್ಲಿರುವ ಒಟ್ಟು ಹಾಲು ಎಷ್ಟು?

4) 100 ಮಿ.ಲೀ ಕಬ್ಬಿನ ಹಾಲನ್ನು 4 ಜನ ಸ್ನೇಹಿತರಿಗೆ ಸಮನಾಗಿ ಹಂಚಲಾಗಿದೆ ಹಾಗಾದರೆ ಪ್ರತಿಯೊಬ್ಬರಿಗೂ ದೊರೆತ ಕಬ್ಬನ ಹಾಲಿನ ಅಳತೆ ಎಷ್ಟು?


II ಇವುಗಳನ್ನು ಪರಿವರ್ತಿಸಿ.

1) 5 ಲೀ = ..... ಮಿ.ಲೀ

2) 6 ಕಿ.ಲೀ = .....ಲೀ

3) 500 ಮಿ.ಲೀ = ..... ಲೀ

4) 8000 ಲೀ = ..... ಕಿ.ಲೀ


III ಇವುಗಳನ್ನು ಕೂಡಿ.

1) 3 ಲೀ 250 ಮಿ.ಲೀ,  750 ಮಿ.ಲೀ ಮತ್ತು 6 ಲೀ 500 ಮಿ.ಲೀ

2) 15 ಲೀ 450 ಮಿ.ಲೀ, 5 ಲೀ 350 ಮಿ.ಲೀ ಮತ್ತು 21 ಲೀ 750 ಮಿ.ಲೀ

3) 12 ಲೀ 550 ಮಿ.ಲೀ, 14 ಲೀ 450 ಮಿ.ಲೀ ಮತ್ತು 12 ಲೀ 650 ಮಿ.ಲೀ

4) 8 ಕಿ.ಲೀ 250 ಮಿ.ಲೀ, 3 ಕಿ.ಲೀ  350 ಲೀ ಮತ್ತು 4 ಕಿ.ಲೀ 550 ಲೀ


IV ಇವುಗಳನ್ನು ಕಳೆಯಿರಿ

1) ವೀಣಾಳು ಕಛೇರಿ ಕೆಲಸ ಮುಗಿಸಿ ಮನೆಗೆ ಬರುವಾಗ ಅಂಗಡಿಯಿಂದ 3 ಲೀ 250 ಮಿ.ಲೀ ಕಡಲೆಕಾಯಿ ಎಣ್ಣೆಯನ್ನು ತಂದಳು. ಅವಳ ತಾಯಿಯು ಅದೇ ದಿನ 1 ಲೀ 500 ಮಿ ಲೀ ಕಡಲೇಕಾಯಿ ಎಣ್ಣೆಯನ್ನು ತಂದಿದ್ದರು. ಹಾಗಾದರೆ ಅವರಿಬ್ಬರೂ ತಂದ ಎಣ್ಣೆಯ  ಒಟ್ಟು ಅಳತೆ ಎಷ್ಟು?

2) ಒಬ್ಬ ಹಾಲಿನ ವ್ಯಾಪಾರಿಯ ಬಳಿ 25 ಲೀ ಹಾಲು ಇದೆ. ಇದರಲ್ಲಿ ಅವನು 16 ಲೀ 750 ಮಿ.ಲೀ ಹಾಲನ್ನು ಮಾರಿದನು. ಅವನಲ್ಲಿ ಉಳಿದಿರುವ ಹಾಲು ಎಷ್ಟು?

3) ಒಂದು ಬಾಟಲಿಯಲ್ಲಿ 1 ಲೀ 500 ಮಿ.ಲೀ ಗಂಧದ ಎಣ್ಣೆ ಇದೆ. ಈ ಎಣ್ಣೆಯನ್ನು 250 ಮಿ.ಲೀ ಹಿಡಿಸುವ ಚಿಕ್ಕ ಬಾಟಲಿಗಳಿಗೆ ಸಮನಾಗಿ ಹಂಚಿ ಪ್ಯಾಕ್‍ ಮಾಡಬೇಕಾಗಿದೆ. ಹಾಗಾದರೆ ಬೇಕಾಗುವ ಚಿಕ್ಕ ಬಾಟಲಿಗಳು ಎಷ್ಟು?

4) ಒಂದು ಕ್ಯಾನಿನಲ್ಲಿ 15 ಲೀ ಸನ್‍ಫ್ಲವರ್ (ಸೂರ್ಯಕಾಂತಿ) ಎಣ್ಣೆ ಇದೆ. ಇದರಲ್ಲಿ ರಾಣಿಯು ಮೊದಲ ತಿಂಗಳು ಅಡುಗೆಗಾಗಿ 3 ಲೀ 600 ಮಿ.ಲೀ ಎಣ್ಣೆಯನ್ನು ಉಪಯೋಗಿಸಿದಳು. ಮತ್ತು ಎರಡನೇಯ ತಿಂಗಳು 5 ಲೀ 300 ಮಿ.ಲೀ ಎಣ್ಣೆಯನ್ನು ಉಪಯೋಗಿಸಿದಳು. ಕ್ಯಾನಿನಲ್ಲಿ ಉಳಿದಿರುವ ಎಣ್ಣೆ ಎಷ್ಟು?

5) ಒಂದು ಪಾತ್ರೆಯಲ್ಲಿ 1 ಲೀ 800 ಮಿ.ಲೀ ಚಹಾ ಇದೆ. ಇದನ್ನು ಒಂದು ಅಳತೆಯ 12 ಲೋಟಗಳಿಗೆ ಸಮನಾಗಿ ಹಂಚಲಾಗಿದೆ. ಹಾಗಾದರೆ ಪ್ರತಿ ಲೋಟದಲ್ಲಿರುವ ಚಹಾ ಎಷ್ಟು?





ಅಧ್ಯಾಯ-7.
ಕಾಲ.


ಅಭ್ಯಾಸ 7.1

I ಮೌಖಿಕ ಲೆಕ್ಕಗಳು.

1) ಬೆಳಿಗ್ಗೆ ಎಷ್ಟು ಗಂಟೆಗೆ ನೀನು ಏಳುವೆ?

2) ನೀನು ಶಾಲೆಗೆ ಎಷ್ಟು ಗಂಟೆಗೆ ಹೊರಡುವೆ?

3) ನೀನು ಆಟಕ್ಕೆ ಎಷ್ಟು ಗಂಟೆಗೆ ಹೊರಡುವೆ?

4) ನೀನು ರಾತ್ರಿ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ  ಓದುವೆ?

5) ನೀನು ರಾತ್ರಿ ಎಷ್ಟು ಗಂಟೆಗೆ ಊಟ ಮಾಡುವೆ?

6) ನೀನು ರಾತ್ರಿ ಎಷ್ಟು ಗಂಟೆಗೆ ಮಲಗುವೆ?


II ಈ ಕೆಳಗಿನ ವೇಳೆಯನ್ನು a.m ಮತ್ತು p.m ಗಳಲ್ಲಿ ನಮೂದಿಸಿ.

(1) 10: 15 ಬೆಳಿಗ್ಗೆ

(2) 8: 10 ರಾತ್ರಿ

(3) 1:45 ಮದ್ಯಾಹ್ನ

(4) 4: 30 ಬೆಳಿಗ್ಗೆ

(5) 9: 45 ರಾತ್ರಿ

(6) 5:35 ಸಂಜೆ


III  ಈ ಕೆಳಗಿ ವೇಳೆಯನ್ನು 12 ಗಂಟೆ ಗಡಿಯಾರಕ್ಕೆ ಪರಿವರ್ತಿಸಿ ಮತ್ತು a.m ಅಥವಾ p.m ಗಳಲ್ಲಿ ಸೂಚಿಸಿ


(1) 23: 25 ಗಂಟೆ

(2) 12: 35 ಗಂಟೆ

(3) 14: 45 ಗಂಟೆ

(4) 18: 40 ಗಂಟೆ

(5) 08: 30 ಗಂಟೆ

(6) 11:55 ಗಂಟೆ



ಅಭ್ಯಾಸ 7.2


I ಮೌಖಿಕ ಲೆಕ್ಕಗಳು.

1) ಒಂದು ನಿಮಿಷಕ್ಕೆ ಎಷ್ಟು ಸೆಕೆಂಡುಗಳು?

2) ಒಂದು ಘಂಟೆಗೆ ಎಷ್ಟು ನಿಮಿಷಗಳು?

3) ಒಂದು ದಿನನಕ್ಕೆ ಎಷ್ಟು ಗಂಟೆಗಳು?

4) ಒಂದು ವಾರಕ್ಕೆ ಎಷ್ಟು ದಿನಗಳು?

5) ಒಂದು ವರ್ಷಕ್ಕೆ ಎಷ್ಟು ತಿಂಗಳುಗಳು?

6) ಒಂದು ವರ್ಷಕ್ಕೆ ಎಷ್ಟು ದಿನಗಳು?

7) ಒಂದು ತಿಂಗಳಿಗೆ ಎಷ್ಟು ದಿನಗಳು?

8) ಫಬ್ರವರಿ ತಿಂಗಳಿನಲ್ಲಿ ಎಷ್ಟು ದಿನಗಳು?

9) ಅಧಿಕ ವರ್ಷ ಎಂದರೇನು?

10) 3 ಗಂಟೆ 20 ನಿಮಿಷ ಮತ್ತು 4 ಗಂಟೆ 30 ನಿಮಿಷಗಳ ಮೊತ್ತ ಎಷ್ಟು?


II. ಇವುಗಳನ್ನು ಸಂಕಲನ ಮಾಡಿ.

1) 4 ಗಂಟೆ 40 ನಿಮಿಷ ಮತ್ತು 6 ಗಂಟೆ 10 ನಿಮಿಷ

2) 3 ಗಂಟೆ  30 ನಿಮಿಷ  2  ಗಂಟೆ  20 ನಿಮಿಷ

3) 2 ಗಂಟೆ  50 ನಿಮಿಷ  3 ಗಂಟೆ  40 ನಿಮಿಷ

4) 5 ಗಂಟೆ  30 ನಿಮಿಷ  2 ಗಂಟೆ  50 ನಿಮಿಷ

5) 3 ಗಂಟೆ 15 ನಿಮಿಷ 18 ಸೆಕೆಂಡ್ ಮತ್ತು  1 ಗಂಟೆ 19 ನಿಮಿಷ 17 ಸೆಕೆಂಡ್

6) 2 ಗಂಟೆ 30 ನಿಮಿಷ 40 ಸೆಕೆಂಡ್ ಮತ್ತು 4 ಗಂಟೆ 50 ನಿಮಿಷ 30 ಸೆಕೆಂಡ್

7) 5 ಗಂಟೆ 45 ನಿಮಿಷ 30 ಸೆಕೆಂಡ್ ಮತ್ತು 3 ಗಂಟೆ 25 ನಿಮಿಷ 40 ಸೆಕೆಂಡ್

8) 3 ವರ್ಷ 8 ತಿಂಗಳು ಮತ್ತು 2 ವರ್ಷ 7 ತಿಂಗಳು

9) 5 ವರ್ಷ 6 ತಿಂಗಳು 4 ವರ್ಷ 9 ತಿಂಗಳು



ಅಭ್ಯಾಸ 7.3

I. ಮೌಖಿಕ ಲೆಕ್ಕಗಳು.

1) 5 ನಿಮಿಷಕ್ಕೆ ಎಷ್ಟು ಸೆಕೆಂಡುಗಳು?

2) 10 ಗಂಟೆಗಳಲ್ಲಿ ಎಷ್ಟು ನಿಮಿಷಗಳಿವೆ?

3) ಒಂದು ಗಂಡೆಗೆ ಎಷ್ಟು ಸೆಕೆಂಡುಗಳು?

4) 9:30 a.m  ನಿಂದ ಮದ್ಯಾಹ್ನ 12:00 ರವರೆಗೆ ಸಮಯದ ಅವಧಿ ಎಷ್ಟು?

5) 5: 30 p.m ಇದನ್ನು ರೈಲಿನ ವೇಳೆಯಲ್ಲಿ ತಿಳಿಸಿ.


II. ಇವುಗಳನ್ನು ಕಳೆಯಿರಿ.

1) 7 ಗಂಟೆ 30 ನಿಮಿಷ 50 ಸೆಕೆಂಡ್‍ನಿಂದ 3 ಗಂಟೆ 20 ನಿಮಿಷ 25 ಸೆಕೆಂಡ್.

2) 4 ಗಂಟೆ 40 ನಿಮಿಷ 50 ಸೆಕೆಂಡ್‍ನಿಂದ 3 ಗಂಟೆ 20 ನಿಮಿಷ 25 ಸೆಕೆಂಡ್.

3) 5 ಗಂಡೆ 30 ನಿಮಿಷದಿಂದ 2 ಗಂಟೆ 50 ನಿಮಿಷ.

4) 6 ಗಂಟೆ 10 ನಿಮಿಷದಿಂದ 5 ಗಂಟೆ 40 ನಿಮಿಷ.

5) 6 ವರ್ಷ 4 ತಿಂಗಳಿನಿಂದ 3 ವರ್ಷ 8 ತಿಂಗಳು.

6) 5 ವರ್ಷ 6 ತಿಂಗಳಿನಿಂದ 2 ವರ್ಷ 9 ತಿಂಗಳು.

7) 7 ವರ್ಷ 5 ತಿಂಗಳಿನಿಂದ 4 ವರ್ಷ 11 ತಿಂಗಳು.



ಅಭ್ಯಾಸ 7.4

III ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) ಒಬ್ಬ ಉದ್ಯೋಗಿಯು ಕಾರ್ಖಾನೆಯೊಳಕ್ಕೆ 6: 15 a.m ಗೆ ಕೆಲಸಕ್ಕಾಗಿ ಹೋಗುತ್ತಾನೆ. ಕೆಲಸ ಮುಗಿಸಿ 2: 15 p.m ಗೆ ಕಾರ್ಖಾನೆಯಿಂದ ಹೊರಗೆ ಬರುತ್ತಾನೆ. ಹಾಗಾದರೆ ಅವನು ಕೆಲಸ ಮಾಡಿದ ಅವಧಿ ಎಷ್ಟು ?

2) ಒಂದು ಶಾಲೆಯು ಅರ್ಧ ವಾರ್ಷಿಕ ರಜೆಗಾಗಿ ಅಕ್ಟೋಬರ್ 3 ರಂದು ಮುಚ್ಚಿತು. ರಜೆಯ ನಂತರ ಮತ್ತೆ ಅಕ್ಟೋಬರ್ 31 ರಂದು ತೆರೆಯಿತು. ಹಾಗಾದರೆ ಅರ್ಧ ವಾರ್ಷಿಕ ರಜೆಯ ದಿನಗಳೆಷ್ಟು?

3) ಒಂದು ಶಾಲೆಯು ಶನಿವಾರದಂದು 8: 00 a.m ಗೆ ಪ್ರಾರಂಭಗೊಂಡು, 15: 30 p.m ಗೆ ಮುಕ್ತಾಯಗೊಳ್ಳುತ್ತದೆ. ಹಾಗಾದರೆ ಅವನು ಸಂಜೆ ಕಛೇರಿಯನ್ನು ಬಿಟ್ಟ ವೇಳೆ ಎಷ್ಟು?

4) ಶ್ಯಾಮನು 9: 00 a.m ಗೆ ಕಛೇರಿಗೆ ಬರುತ್ತಾನೆ. ಕಛೇರಿಯಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ. ಹಾಗಾದರೆ ಅವನು ಸಂಜೆ ಕಛೇರಿಯನ್ನು ಬಿಟ್ಟ ವೇಳೆ ಎಷ್ಟು?

5) ಫಾತೀಮಾಳು ಶಾಲೆಯಲ್ಲಿ 5 ಗಂಟೆ 10 ನಿಮಿಷ ಅಭ್ಯಾಸ ಮಾಡುತ್ತಾಳೆ. ಮನೆಯಲ್ಲಿ 5 ಗಂಟೆ 50 ನಿಮಿಷ ಅಭ್ಯಾಸ ಮಾಡುತ್ತಾಳೆ. ಹಾಗಾದರೆ ಆ ಒಂದು ದಿನದಲ್ಲಿ ಅವಳು ಅಭ್ಯಾಸ ಮಾಡಿದ ಅವಧಿ ಎಷ್ಟು?

6) ಮಹೇಶನು ದಿನಾಂಕ 03.10.2011 ರಿಂದ 15 ದಿನಗಳ ಕಾಲ ರಜೆಯನ್ನು ತನ್ನ ಚಿಕ್ಕಪ್ಪನ ಮನೆಯಲ್ಲಿ ಕಳೆಯುತ್ತಾನೆ. ಹಾಗಾದರೆ ಅವನು ಯಾವ ದಿನಾಂಕದಂದು ಅವರ ಚಿಕ್ಕಪ್ಪನ ಮನೆಯಿಂದ ಹೊರಡುತ್ತಾನೆ?




ಅಧ್ಯಾಯ-8.
ಸಮಮಿತಿಯ ಆಕೃತಿಗಳು.


ಅಭ್ಯಾಸ 8.1

7) ಕೆಲವು ಪದಗಳನ್ನು ಹಾಗೂ ಸಂಖ್ಯೆಗಳನ್ನು ನೀಡಲಾಗಿದೆ. ಅದರಲ್ಲಿ ಕೆಲವು ಪದಗಳ / ಸಂಖ್ಯೆಗಳ ಪ್ರತಿಬಿಂಬ ಮೂಲ ಪದ ಅಥವಾ ಸಂಖ್ಯೆಗಳಂತೆಯೇ ಇರುತ್ತದೆ. ಅವುಗಳನ್ನು ಪಟ್ಟಿ ಮಾಡಿ.

a) 818 =

b) 310 =

c) 18081 =

d) 80888 =

e) DAD =

f) MAM =

g) EVE =

h) THAT =


8) ಸುತ್ತಮುತ್ತಲಿನಲ್ಲಿ ನೀವು ನೋಡಿರುವ ಸಮಮಿತಿ ಆಕೃತಿಗಳನ್ನು ಪಟ್ಟಿ ಮಾಡಿ.




ಅಭ್ಯಾಸ 8.2

3) a) 1/2 ಸುತ್ತು ತಿರುಗಿಸಿದಾಗ ಆಕಾರ ಬದಲಾಗದ ಆಂಗ್ಲ ಭಾಷೆಯ ದೊಡ್ಡ ( ಕ್ಯಾಪಿಟಲ್)‌ ಅಕ್ಷರಗಳನ್ನು ಪಟ್ಟಿ ಮಾಡಿ. ಉದಾಹರಣೆ :  X

b) ಆಂಗ್ಲ ಭಾಷೆಯ ಯಾವ ದೊಡ್ಡ ಅಕ್ಷರವನ್ನು 1/4 ಸುತ್ತು ತಿರುಗಿಸಿದಾಗ ಇನ್ನೊಂದು ಅಕ್ಷರ ಸಿಗುತ್ತದೆ.

c) 1/2 ಸುತ್ತು ತಿರುಗಿಸಿದಾಗ ಇನ್ನೋಂದು ಅಕ್ಷರ ಸಿಗುವ ಆಂಗ್ಲ ಭಾಷೆಯ ದೊಡ್ಡ ಅಕ್ಷರ ಯಾವುದು?

4) 1/4 ಸುತ್ತು ತಿರುಗಿದ ನಂತರ ಮೊದಲಿನಂತೆ ಕಾಣುವ ಆಕೃತಿಗಳ ಚಿತ್ರ ಬಿಡಿಸಿ.

5) 1/3 ಸುತ್ತು ತಿರುಗಿದ ನಂತರ ಮೊದಲಿನಂತೆ ಕಾಣುವ ಆಕೃತಿಗಳ ಚಿತ್ರ ಬಿಡಿಸಿ.





ಅಧ್ಯಾಯ-9.
ಮೂರು ಆಯಾಮದ  ಆಕೃತಿಗಳು.


ಅಭ್ಯಾಸ 9.1
I ಮೌಖಿಕ ಪ್ರಶ್ನೆಗಳು.

a) ಘನದ ಮುಖಗಳು ಯಾವ ಆಕಾರದಲ್ಲಿವೆ?

b) ಸಿಲಿಂಡರ್‌ನಲ್ಲಿರುವ ವೃತ್ತಾಕಾರದ ಮುಖಗಳ ಸಂಖ್ಯೆ ಎಷ್ಟು?

c) ಶಂಕುವಿನಲ್ಲಿರುವ ಸಮತಲ ಮೇಲ್ಮೈ ಮತ್ತು ವಕ್ರ ಮೇಲ್ಮೈಗಳ ಸಂಖ್ಯೆ ಎಷ್ಟು?


V 1) ಬೇರೆ ಬೇರೆ ಗಾತ್ರದ ಘನ, ಸಿಲಿಂಡರ್‌, ಶಂಕುಗಳ ಎರಡು ಆಯಾಮದ ಚಿತ್ರಗಳನ್ನು ಬರೆಯಿರಿ.

2) ನಿಮ್ಮ ಶಾಲೆಯ ಮುಂಭಾಗದ ನೋಟ, ಪಾರ್ಶ್ವನೋಟ ಹಾಗೂಮೇಲ್ಭಾಗದ ನೋಟಗಳ ಚಿತ್ರಗಳನ್ನು ಬರೆಯಿರಿ.

3) ನಿಮ್ಮ ಮನೆಯಲ್ಲಿರುವ ಬೇರೆ ಬೇರೆ ವಸ್ತುಗಳ ಮುಂಭಾಗದ ನೋಟ, ಪಾರ್ಶ್ವನೋಟ ಹಾಗೂ ಮೇಲ್ಭಾಗದ ನೋಟಗಳ ಚಿತ್ರಗಳನ್ನು ಬರೆಯಿರಿ.





ಅಧ್ಯಾಯ-10.
ವಿನ್ಯಾಸಗಳು.


ಅಭ್ಯಾಸ 10.1

I ಈ ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.

1) 1 ರಿಂದ 50 ರ ವರೆಗಿನ ಸಂಖ್ಯೆಗಳನ್ನು ಬರೆಯಿರಿ.
ʼವರ್ಗಸಂಖ್ಯೆʼ ಗಳಿಗೆ ಕೆಂಪು ಬಣ್ಣ ಹಚ್ಚಿರಿ. ʼತ್ರಿಭುಜ ಸಂಖ್ಯೆʼ ಗಳಿಗೆ ನೀಲಿ ಬಣ್ಣ ಹಚ್ಚಿರಿ. 

ಅ) ʼವರ್ಗಸಂಖ್ಯೆʼಗಳನ್ನು ಬರೆಯಿರಿ.

ಆ) ತ್ರಿಭುಜ ಸಂಖ್ಯೆಗಳನ್ನು ಬರೆಯಿರಿ.

ಇ) 1 ರಿಂದ 50 ರವರೆಗೆ ಎಷ್ಟು ವರ್ಗಸಂಖ್ಯೆಗಳಿವೆ?

ಈ) 1 ರಿಂದ 50 ರವರೆಗೆ ಎಷ್ಟು ತ್ರಿಭುಜ ಸಂಖ್ಯೆಗಳಿವೆ?


2) ಕೆಳಗೆ ಕೊಟ್ಟಿರುವ ಸಂಖ್ಯಾ ವಿನ್ಯಾಸವನ್ನು ಗಮನಿಸಿ, ಬಿಟ್ಟ ಸ್ಥಳವನ್ನು ತುಂಬಿರಿ.
1 + 2 + 1 = 4

1 + 2 + 3 + 2 + 1 = 9

1 + 2 + 3 + 4 + 3 + 2 + 1 = 16

......

......

......


3) ಕೆಳಗೆ ಕೊಟ್ಟಿರುವ ವರ್ಗ ಸಂಖ್ಯೆಗಳನ್ನು ಅನುಕ್ರಮ ಬೆಸಸಂಖ್ಯೆಗಳ ಮೊತ್ತದ ರೂಪದಲ್ಲಿ ವ್ಯಕ್ತಪಡಿಸಿರಿ.
16, 36, 81, 100, 121, 144, 169, 225
ಉದಾಹರಣೆ : 9 = 1 + 3 + 5

4) ಬಿಟ್ಟಿರುವ ಬೆಸಸಂಖ್ಯೆಗಳನ್ನು ಭರ್ತಿ ಮಾಡಿರಿ ಮತ್ತು ʼವರ್ಗಸಂಖ್ಯೆʼ ಗಳನ್ನು ವೃತ್ತದಲ್ಲಿ ಬರೆಯಿರಿ.

5) ಮೊದಲ 4 ವರ್ಗ ಸಂಖ್ಯೆಗಳು ಮತ್ತು ತ್ರಿಭುಜ ಸಂಖ್ಯೆಗಳನ್ನು ಪಟ್ಟಿ ಮಾಡಿರಿ. ಚುಕ್ಕೆ ಚಿತ್ರದಿಂದ ಸೂಚಿಸಿರಿ.

6) ತ್ರಿಭುಜ ಸಂಖ್ಯೆಗಳ ಸರಣಿಯ ಪ್ರಾರಣಭವನ್ನು ಕೆಳಗೆ ಕೊಡಲಾಗಿದೆ.
1, 3, 6, 10, ..., ..., ..., 36, 45
ಇವುಗಳನ್ನು ನಿಮ್ಮ ನೋಟ್ಸ್‌ ಪುಸ್ತಕದಲ್ಲಿ ಕೆಳಗಿನ ಪಟ್ಟಿಯಲ್ಲಿ ತೋರಿಸಿರುವಂತೆ  ಬರೆಯಿರಿ. ಬಿಟ್ಟ ಜಾಗ ಭರ್ತಿ ಮಾಡಿರಿ.
ಈಗ ಈ ಸಂಖ್ಯೆಗಳನ್ನು ಕೂಡಿ, ಕೆಳಗಿನ ಅಡ್ಡ ಸಾಲಿನಲ್ಲಿ ಬರೆಯಿರಿ.
ಈ ಸರಣಿ ಜೋಡಣೆಯಲ್ಲಿ ಉಂಟಾದ ಸಂಖ್ಯೆಗಳನ್ನು ಏನೆಂದು ಕರೆಯಬಹುದು?
ನಿಮ್ಮ ತೀರಗಮಾನವನ್ನು ಹೇಳಿಕೆಯ ರೂಪದಲ್ಲಿ ಬರೆಯಿರಿ.

7) ಕೆಳಗಿನ ಪಟ್ಟಿಯನ್ನು ಗಮನಿಸಿ

 4,5 ಮತ್ತು 6 ರ ಮಗ್ಗಿ ಕೋಷ್ಟಕಗಳಿಗೆ ಮೇಲಿನ ಮಾದರಿಯಂತೆ ಚಟುವಟಿಕೆ ಮಾಡಿರಿ. ತ್ರಿಭುಜ ಸಂಖ್ಯೆಗಳಿಗೆ ವೃತ್ತ ಹಾಕಿರಿ ವರ್ಗಸಂಖ್ಯೆಗಳಿಗೆ ಚೌಕ ಹಾಕಿರಿ.

51 ರಿಂದ 100 ರ ವರೆಗಿನ ಸಂಖ್ಯೆಗಳನ್ನು ಬರೆಯಿರಿ. ಇವುಗಳಲ್ಲಿ ತ್ರಿಭುಜ ಸಂಖ್ಯೆಗಳನ್ನು, ವರ್ಗಸಂಖ್ಯೆಗಳನ್ನು ಗುರುತಿಸಿ ಪಟ್ಟಿ ಮಾಡಿರಿ.
























No comments: