1) ವಂಶವೃಕ್ಷದಲ್ಲಿ ಗಂಡುವಿಗೆ ಬಳಸುವ ಚಿಹ್ನೆ ಯಾವುದು?
A) ♀
B) ♂ ✓
C) O
D) Δ
2) ಭಾರತದಲ್ಲಿ ಶೇಕಡ …. ಭಾಗದಷ್ಟು ಜನರು ಗ್ರಾಮಗಳಲ್ಲಿ ವಾಸಿಸುತ್ತಾರೆ
A) 72 ✓
B) 62
C) 52
D) 42
3) ಆಯ್ಕೆಗಳಲ್ಲಿ ಯಾವುದು ಆಟಗಳಿಂದ ಪ್ರಯೋಜನ ಆಗುತ್ತದೆ ?
A) ಮನೋರಂಜನೆ ✓
B) ಪರಿಸರ ಸಂರಕ್ಷಣೆ
C) ಜ್ಞಾನ
D) ಬರೆಯುವ ಕೌಶಲ್ಯ
4) ʼವೃಕ್ಷ ಮಾತೆʼ ಎಂದು ದೇಶಾದ್ಯಂತ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ಪರಿಸರ ಕಾರ್ಯಕರ್ತರು ಯಾರು ?
A) ಪಾಂಡುರಂಗ ಹೆಗಡೆ
B) ಸಾಲುಮರದ ತಿಮ್ಮಕ್ಕ ✓
C) ಸುಂದರಲಾಲ ಬಹುಗುಣ
D) ಮೇಧಾ ಪಾಟ್ಕರ್
5) ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಘಟಕ ಯಾವುದು ?
A) ನೈಟ್ರೋಜನ್ ✓
B) ಆಕ್ಸಿಜನ್
C) ಕಾರ್ಬನ್ ಡೈಆಕ್ಸೈಡ್
D) ನೀರಾವಿ, ಅನಿಲಗಳು ಮತ್ತು ಧೂಳಿನ ಕಣಗಳು
6) ಬೆಳೆ ಬೆಳೆಯಲು ಕೆಲವು ಹಂತಗಳನ್ನು ಈ ಕೆಳಗೆ ನೀಡಲಾಗಿದೆ
1) ನೀರು ಹರಿಸುವುದು
2) ಉಳುಮೆ ಮಾಡುವುದು
3) ಬೀಜಗಳನ್ನು ಬಿತ್ತುವುದು
ಅವುಗಳ ಸರಿಯಾದ ಕ್ರಮವನ್ನು ಆಯ್ಕೆಗಳಲ್ಲಿ ಗುರುತಿಸಿ
A) 2)….1)…3)
B) 1)…2)…3)
C) 2)…3)…1) ✓
D) 3)…1)…2)
7) ಜಂಕ್ ಫುಡ್ ಎಂದು ಕರೆಯಲ್ಪಡುವ ಆಹಾರ ಪದಾರ್ಥಗಳು ಯಾವುವು ?
A) ಪಿಜ್ಜಾ ಬರ್ಗರ್ ✓
B) ತರಕಾರಿಗಳು
C) ಹಣ್ಣುಗಳು
D) ಸೊಪ್ಪುಗಳು
8) ಆಯ್ಕೆಗಳಲ್ಲಿ ನಗರ ಪ್ರದೇಶದ ವಸತಿ ಸಮಸ್ಯೆಗಳ ಬಗ್ಗೆ ಯಾವ ಹೇಳಿಕೆ ಸರಿಯಾಗಿದೆ ?
A) ಸಮರ್ಪಕ ಚರಂಡಿ ವ್ಯವಸ್ಥೆ ಇರುವುದಿಲ್ಲ
B) ಕಸ ವಿಲೇವಾರಿ ಸಮಸ್ಯೆ ಇರುವುದಿಲ್ಲ
C) ಬಹುಮಹಡಿ ವಸತಿ ಕಟ್ಟಡಗಳಲ್ಲಿ ಆಗಾಗ್ಗೆ ಸಂಬವಿಸುವ ಅಗ್ನಿ ದುರಂತಗಳು ✓
D) ವಾಹನಗಳ ಸಂಚಾರ ದಟ್ಟಣೆ ಇರುವುದಿಲ್ಲಾ
9) ಆಯ್ಕೆಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ
A) ವಸ್ತುವನ್ನು ವೈಜ್ಞಾನಿಕವಾಗಿ ದ್ರವ್ಯ ಎಂದು ಕರೆಯಲಾಗಿದೆ
B) ದ್ರವ್ಯಗಳೆಲ್ಲವೂ ಅತ್ಯಂತ ಸಣ್ಣ ಕಣಗಳಿಂದ ಆಗಿವೆ
C) ದ್ರವ್ಯದ ಅತಿ ಸೂಕ್ಷ್ಮವಾದ ಚೂರನ್ನು ಕಣ ಎನ್ನುತ್ತೇವೆ
D) ದ್ರವ್ಯದ ಕಣಗಳೆಲ್ಲವೂ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುತ್ತವೆ ✓
10) ಭೂಮಿಯ ಮೇಲೆ ನೀರಿನ ಅತಿದೊಡ್ಡ ಆಕರ ಯಾವುದು ?
A) ಸಾಗರಗಳು ✓
B) ನದಿಗಳು
C) ಚಿಲುಮೆಗಳು
D) ಜಲಾಶಯಗಳು
11) ಮೂಲಧಾತುವಿನ ಅತ್ಯಂತ ಚಿಕ್ಕ ಘಟಕವನ್ನು …. ಎನ್ನುತ್ತಾರೆ
A) ಪರಮಾಣು ✓
B) ಧಾತು
C) ಮಿಶ್ರಣ
D) ಸಂಯುಕ್ತ
12) ಸೂರ್ಯನ ಪರಿವಾರದಲ್ಲಿರುವ ಒಟ್ಟು ಉಪಗ್ರಹಗಳು ….
A) 173 ✓
B) 150
C) 100
D) 50
13) ಭೂಮಿಯ ಮೇಲಿನ ಎಲ್ಲಾ ಶಕ್ತಿಗಳ ಮೂಲ ಆಕರ
A) ಸೂರ್ಯ ✓
B) ಚಂದ್ರ
C) ಭೂಮಿ
D) ಮಂಗಳ
14) ಭೂಮಧ್ಯರೇಖೆ ಅಥವಾ ಸಮಭಾಜಕ ರೇಖೆ ಎಂದರೆ ….
A) 66 ½⁰ ಉತ್ತರ ಅಕ್ಷಾಂಶ
B) 23 1/2⁰ ದಕ್ಷಿಣ ಅಕ್ಷಾಂಶ
C) 0⁰ ಅಕ್ಷಾಂಶ ✓
D) 66 ½⁰ ದಕ್ಷಿಣ ಅಕ್ಷಾಂಶ
15) ಗಂಗಾ ಯಮುನಾ ಬ್ರಹ್ಮಪುತ್ರ ನದಿಗಳ ಉಗಮ ಸ್ಥಾನವು ….
A) ಅರವಳಿ ಪರ್ವತಶ್ರೇಣಿ
B) ಹಿಮಾಲಯ ಪರ್ವತ ಶ್ರೇಣಿ ✓
C) ಸಾತ್ಪುರ ಪರ್ವತ ಶ್ರೇಣಿ
D) ವಿಂಧ್ಯ ಪರ್ವತ ಶ್ರೇಣಿ
16) ಆಯ್ಕೆಗಳಲ್ಲಿ ಯಾವುದು ವಿಭಕ್ತ ಕುಟುಂಬದ ಲಕ್ಷಣ ಆಗಿದೆ ?
A) ಮನೆಯಲ್ಲಿ ಹಿರಿಯವರು ಎಂದರೆ ಮುತ್ತಜ್ಜ ಮತ್ತು ಮುತ್ತಜ್ಜಿ
B) ಕುಟುಂಬದಲ್ಲಿ ಎರಡು ತಲೆಮಾರುಗಳಿರುತ್ತವೆ ✓
C) ಕುಟುಂಬದ ಸದಸ್ಯರೆಲ್ಲರೂ ವಿವಾಹಿತರಾಗಿರುತ್ತಾರೆ
D) ಕುಟುಂಬದ ಗಾತ್ರ ದೊಡ್ಡದು
17) ಸೋಲಿಗರು ; ಮೈಸೂರು :: ಕೊರಗರು : ?
A) ದಕ್ಷಿಣಕನ್ನಡ ✓
B) ಮೈಸೂರು
C) ಕೊಡಗು
D) ಹಾಸನ
18) ಆಯ್ಕೆಗಳಲ್ಲಿ ಯಾವುದು ನವೀಕರಿಸಲಾಗದ ಸಂಪನ್ಮೂಲ ಆಗಿದೆ ?
A) ಗಾಳಿ
B) ಸೌರ ಶಕ್ತಿ
C) ಕಬ್ಬಿಣ ✓
D) ಕಾಡು
19) ವಂಶವೃಕ್ಷದಲ್ಲಿ ಹೆಣ್ಣಿಗೆ ಬಳಸುವ ಚಿಹ್ನೆ ಯಾವುದು ?
A) x
B) ♂
C) O
D) Δ ✓
20) ಸಸ್ಯಗಳು … ಮೂಲಕ ಉಸಿರಾಡುತ್ತವೆ
A) ಬೇರುಗಳು
B) ಕಾಂಡಗಳು
C) ಕಿವಿರುಗಳು
D) ಪತ್ರರಂದ್ರಗಳು ✓
21) ಭಾರತದ ಗ್ರಾಮಗಳ ಶೇಕಡ …. ಭಾಗದಷ್ಟು ಜನರಿಗೆ ಕೃಷಿಯೇ ಜೀವನಾಧಾರ
A) 80
B) 70
C) 50 ✓
D) 50
22) ಸಾಮಾನ್ಯವಾಗಿ ವಾಯುವಿನಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಎಷ್ಟಿರುತ್ತದೆ ?
A) 78%
B) 21% ✓
C) 0.04%
D) 0.96%
23) ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಆಟಗಳಿಂದ ಪ್ರಯೋಜನ ಆಗುತ್ತದೆ ?
A) ಬರೆಯುವ ಕೌಶಲ್ಯ
B) ಸ್ಪರ್ಧಾ ಮನೋಭಾವ ✓
C) ಪರಿಸರ ಸಂರಕ್ಷಣೆ
D) ಜ್ಞಾನ
24) ಪೆಟ್ರೋಲಿಯಂ ಎಂಬುದು ….
A) ದ್ರವರೂಪದ ಖನಿಜ ✓
B) ಘನರೂಪದ ಖನಿಜ
C) ಅನಿಲರೂಪದ ಖನಿಜ
D) ಮೇಲಿನ ಯಾವುದು ಅಲ್ಲ
25) ಕೃಷಿ ಕಾರ್ಮಿಕರು ಎಂದರೆ ಯಾರು ?
A) ತಮ್ಮದೇ ಆದ ಸ್ವಲ್ಪ ಜಮೀನು ಹೊಂದಿರುವವರು
B) ಹೆಚ್ಚು ಜಮೀನು ಹೊಂದಿರುವವರು
C) ತಮ್ಮದೇ ಸ್ವಂತ ಜಮೀನು ಭೂಮಿ ಹೊಂದಿಲ್ಲದವರು
D) ಮಳೆಯಾಧಾರಿತ ಕೃಷಿ ಭೂಮಿ ಹೊಂದಿರುವವರು ✓
26) ಸಸ್ಯಮೂಲದ ಆಹಾರ ಪದಾರ್ಥಗಳಿಗೆ ಕೊಟ್ಟಿರುವ ಆಯ್ಕೆಗಳಲ್ಲಿ ಏಕದಳ ಧಾನ್ಯಗಳಿಗೆ ಉದಾಹರಣೆಗಳು ಯಾವುವು ?
A) ಉದ್ದು ಹೆಸರು ತೊಗರಿ
B) ಶೇಂಗಾ ಎಳ್ಳು ಕುಸುಬಿ
C) ಸಾಮೆ ನವಣೆ ಜೋಳ ✓
D) ಬದನೆ ಬೀಟ್ರೂಟ್ ಸಿಹಿಗೆಣಸು
27) ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾಮೂಹಿಕ ವಸತಿಗಳಲ್ಲಿ ಕಂಡು ಬರುವ ಸೌಲಭ್ಯಗಳು ಯಾವುವು ?
A) ಚಿತ್ರಮಂದಿರ ಹಾಗೂ ರಂಗಮಂದಿರ
B) ಆರೋಗ್ಯ ಕೇಂದ್ರ ಹಾಗೂ ಶೌಚಾಲಯ ✓
C) ನೀರು ಸರಬರಾಜು ಹಾಗೂ ವಿದ್ಯುತ್
D) ರಸ್ತೆಗಳು ಹಾಗೂ ಪಾರ್ಕಿಂಗ್ ಸೌಲಭ್ಯ
28) ನೀರಿನ ಮುಖ್ಯ ಮೂಲ ಯಾವುದು ?
A) ನದಿಗಳು
B) ಮಳೆ ✓
C) ಕೆರೆಗಳು
D) ಜಲಾಶಯಗಳು
29) ದ್ರವ್ಯಗಳು ಮಾಡಲ್ಪಟ್ಟಿರುವ ಅಣುಗಳನ್ನು ಈ ಕೆಳಗೆ ನೀಡಲಾಗಿದೆ ಅವುಗಳ ಗಾತ್ರಕ್ಕೆ ಅನುಗುಣವಾಗಿ ಸರಿಯಾದ ಕ್ರಮವನ್ನು ಕೊಟ್ಟಿರುವ ಆಯ್ಕೆಗಳಲ್ಲಿ ಗುರುತಿಸಿ
1) ದ್ರವ್ಯಗಳು
2) ಅಣು (ಸಂಯುಕ್ತ ಅಣುಗಳು)
3) ಪರಮಾಣು
4) ಮೂಲಧಾತು
A) 1)…2)…3)…4)
B) 3)…4)…2)…1) ✓
C) 3)…2)…4)…1)
D) 4)…3)…2)…1)
30) ಸೂರ್ಯ ಒಂದು ….
A) ಗ್ರಹ
B) ನಕ್ಷತ್ರ ✓
C) ಕ್ಷುದ್ರಗ್ರಹ
D) ಧೂಮಕೇತು
31) ಅಕ್ಷಾಂಶಗಳ ಎಂದರೆ …. ರೇಖೆಗಳು
A) ಭೂಗೋಳದ ಮೇಲೆ ಪಶ್ಚಿಮ-ಪೂರ್ವ ಕಾಲ್ಪನಿಕ ರೇಖೆಗಳು
B) ಭೂಗೋಳದ ಮೇಲೆ ಪೂರ್ವ-ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
C) ಭೂಗೋಳದ ಮೇಲೆ ಉತ್ತರ-ದಕ್ಷಿಣವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
D) ಭೂಗೋಳದ ಮೇಲೆ ದಕ್ಷಿಣ-ಉತ್ತರವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
32) ಯಾವ ಶಕ್ತಿಗಳ ಒಟ್ಟು ಮೊತ್ತವನ್ನು ಯಾಂತ್ರಿಕ ಶಕ್ತಿ ಎನ್ನುತ್ತಾರೆ ?
A) ಪ್ರಚನ್ನ ಶಕ್ತಿ + ಸ್ನಾಯು ಶಕ್ತಿ
B) ಪ್ರಚನ್ನ ಶಕ್ತಿ + ಚಲನ ಶಕ್ತಿ
C) ಪ್ರಚನ್ನ ಶಕ್ತಿ + ಉಷ್ಣ ಶಕ್ತಿ
D) ಪ್ರಚನ್ನ ಶಕ್ತಿ + ಸೌರಶಕ್ತಿ
33) ನಮ್ಮ ದೇಶದ ಕಾಶ್ಮೀರದಿಂದ ಮೇಘಾಲಯದವರೆಗೆ ಹಬ್ಬಿರುವ ಪರ್ವತ ಶ್ರೇಣಿಯನ್ನು …. ಎನ್ನುವರು
A) ಹಿಮಾಲಯ ಪರ್ವತ ಶ್ರೇಣಿ ✓
B) ವಿಂಧ್ಯ ಪರ್ವತ ಶ್ರೇಣಿ
C) ಅರಾವಳಿ ಪರ್ವತ ಶ್ರೇಣಿ
D) ಸಾತ್ಪುರ ಪರ್ವತ ಶ್ರೇಣಿ
34) ಸಸ್ಯದ ಆಹಾರ ತಯಾರಿಕೆಯಲ್ಲಿ ತಯಾರಾಗುವ ಅಂಶ ….
A) ಗ್ಲೂಕೋಸ್ ✓
B) ಖನಿಜ
C) ಲವಣಾಂಶ
D) ಕಾರ್ಬನ್ ಡೈಆಕ್ಸೈಡ್
35) ಬುಡಕಟ್ಟು ಜನಾಂಗವು ತಮ್ಮ ಆಹಾರಕ್ಕಾಗಿ ಹೆಚ್ಚಾಗಿ ಅವಲಂಬಿಸಿರುವ ಕಸುಬು ಯಾವುದು ?
A) ಬೇಟೆಯಾಡುವುದು ✓
B) ಕಮ್ಮಾರಿಕೆ
C) ಕುಂಬಾರಿಕೆ
D) ಮೀನುಗಾರಿಕೆ
36) ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ನವೀಕರಿಸಲಾಗದ ಸಂಪನ್ಮೂಲವಾಗಿದೆ ?
A) ವನ್ಯಜೀವಿಗಳು
B) ಸೌರಶಕ್ತಿ
C) ನೀರು
D) ಚಿನ್ನ
37) ಆಯ್ಕೆಗಳಲ್ಲಿ ಯಾವ ನದಿ ಕರ್ನಾಟಕದಲ್ಲಿ ಹರಿಯುತ್ತದೆ ?
A) ಗಂಗಾ
B) ನೇತ್ರಾವತಿ ✓
C) ಸೆಟ್ಲೆಟ್
D) ಯಮುನಾ
38) ಆಯ್ಕೆಗಳಲ್ಲಿ ಯಾವುದು ಗ್ರಾಮೀಣ ಸಮಸ್ಯೆ ಆಗಿದೆ ?
A) ಕೊಳಚೆ ಪ್ರದೇಶಗಳು
B) ಕಸದ ವಿಲೇವಾರಿ
C) ಜಲ ಮಾಲಿನ್ಯ
D) ಶಿಕ್ಷಣ ✓
39) ಸಸ್ಯಗಳು ಉಸಿರಾಟಕ್ಕಾಗಿ …. ಅನಿಲವನ್ನು ಅವಲಂಬಿಸಿವೆ
A) ಆಮ್ಲಜನಕ
B) ಕಾರ್ಬನ್ ಡೈಆಕ್ಸೈಡ್ ✓
C) ನೈಟ್ರೋಜನ್
D) ಜಲಜನಕ
40) ಆಯ್ಕೆಗಳಲ್ಲಿ ಯಾವುದು ಆಟಗಳಿಂದ ಪ್ರಯೋಜನ ಆಗುತ್ತದೆ ?
A) ಪರಿಸರ ಸಂರಕ್ಷಣೆ
B) ಜ್ಞಾನ
C) ಸೋಲು ಗೆಲುವು ಸಮವಾಗಿ ಸ್ವೀಕರಿಸುವ ಮನೋಭಾವ ✓
D) ಹಸಿವು ನಿವಾರಣೆ
41) ಆಯ್ಕೆಗಳಲ್ಲಿ ಯಾವುದು ಪೆಟ್ರೋಲಿಯಂ ಆಗಿಲ್ಲ ?
A) ಸೀಮೆಎಣ್ಣೆ
B) ಕಲ್ಲಿದ್ದಲು ✓
C) ಡೀಸೆಲ್
D) ಮೇಣ
42) ಭೂಮಿಯ ಮೇಲ್ಬಾಗ ಶೇಕಡ ಎಷ್ಟು ಪ್ರಮಾಣ ನೀರಿನಿಂದ ಆವರಿಸಿದೆ ?
A) 50%
B) 60%
C) 71% ✓
D) 80%
43) ಕೃಷಿ ಕಾರ್ಮಿಕರ ಬಗ್ಗೆ ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಸರಿ ?
A) ವರ್ಷಪೂರ್ತಿ ಕೆಲಸ ದೊರೆಯುತ್ತದೆ
B) ತುಂಬಾ ಶ್ರೀಮಂತರು
C) ನೀರಾವರಿ ಕೃಷಿ ಭೂಮಿಯನ್ನು ಹೊಂದಿರುತ್ತಾರೆ
D) ಕೆಲವೊಮ್ಮೆ ಕೂಲಿ ತುಂಬಾ ಕಡಿಮೆ ಇರುತ್ತದೆ ✓
44) ಸಸ್ಯಮೂಲದ ಆಹಾರ ಪದಾರ್ಥಗಳಿಗೆ ಕೊಟ್ಟಿರುವ ಆಯ್ಕೆಗಳಲ್ಲಿ ದ್ವಿದಳ ಧಾನ್ಯಗಳಿಗೆ ಉದಾಹರಣೆಗಳು ಯಾವುವು ?
A) ಉದ್ದು ಹೆಸರು ತೊಗರಿ ✓
B) ಶೇಂಗಾ ಎಳ್ಳು ಕುಸುಬಿ
C) ಸಾಮೆ ನವಣೆ ಜೋಳ
D) ಬದನೆ ಬೀಟ್ರೂಟ್ ಸಿಹಿಗೆಣಸು
45) ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಘಟಕ ಯಾವುದು ?
A) ನೈಟ್ರೋಜನ್
B) ಆಕ್ಸಿಜನ್
C) ಕಾರ್ಬನ್ ಡೈಆಕ್ಸೈಡ್
D) ನೀರಾವಿ ಜಡ ಅನಿಲಗಳು ಮತ್ತು ಧೂಳಿನ ಕಣಗಳು ✓
46) ಜೀವನಾವಶ್ಯಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾಮೂಹಿಕ ವಸತಿಗಳಲ್ಲಿ ಕಂಡು ಬರುವ ಸೌಲಭ್ಯಗಳು ಯಾವುವು ?
A) ಚಿತ್ರಮಂದಿರ ಹಾಗೂ ರಂಗಮಂದಿರ
B) ಆರೋಗ್ಯಕೇಂದ್ರ ಹಾಗೂ ಶೌಚಾಲಯ
C) ನೀರು ಸರಬರಾಜು ಹಾಗೂ ವಿದ್ಯುತ್ ✓
D) ರಸ್ತೆಗಳು ಹಾಗೂ ಪಾರ್ಕಿಂಗ್ ಸೌಲಭ್ಯ
47) ಕೊಟ್ಟಿರುವ ಆಯ್ಕೆಗಳಲ್ಲಿ ಕೃತಕ ಧಾತು ಯಾವುದು ?
A) ಹೀಲಿಯಂ
B) ಲಿಥಿಯಂ
C) ಪೆಟ್ರೋನಿಯಂ
D) ಸತು
48) ಸೌರವ್ಯೂಹದ ಸೂರ್ಯ ಕೇಂದ್ರಿತ ಮಾದರಿಯನ್ನು ಪ್ರತಿಪಾದಿಸಿದ ವಿಜ್ಞಾನಿ ಯಾರು ?
A) ವರಹಮಿಹಿರ
B) ಪತಂಜಲಿ
C) ಆರ್ಯಭಟ ✓
D) ಬಾಣ ಭಟ್ಟ
49) ಆಯ್ಕೆಗಳಲ್ಲಿ ಪ್ರಚನ್ನ ಶಕ್ತಿಗೆ ಉದಾಹರಣೆ ಯಾವುದು ?
A) ಬಾವಿಯಲ್ಲಿ ಸಂಗ್ರಹವಾದ ನೀರು
B) ಸಮುದ್ರದಲ್ಲಿ ನೀರು
C) ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ✓
D) ಸಾಗರದಲ್ಲಿ ಸಂಗ್ರಹವಾದ ನೀರು
50) ರೇಖಾಂಶ ಗಳೆಂದರೆ ….
A) ಭೂಗೋಳದ ಮೇಲೆ ದಕ್ಷಿಣ ಉತ್ತರವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
B) ಭೂಗೋಳದ ಮೇಲೆ ಉತ್ತರ ದಕ್ಷಿಣವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು ✓
C) ಭೂಗೋಳದ ಮೇಲೆ ಉತ್ತರ ಪೂರ್ವ ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
D) ಭೂಗೋಳದ ಮೇಲೆ ಪಶ್ಚಿಮ ಪೂರ್ವವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳು
51) ಆಯ್ಕೆಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ ?
A) ದ್ರವ್ಯವು ಸ್ಥಳವನ್ನು ಆಕ್ರಮಿಸುವುದಿಲ್ಲ ✓
B) ಒಂದು ದ್ರವ್ಯವು ಆಕ್ರಮಿಸುವ ಸ್ಥಳವನ್ನು ಮತ್ತೊಂದು ದ್ರವ್ಯವು ಆಕ್ರಮಿಸುವುದಿಲ್ಲ
C) ದ್ರವ್ಯವು ಅನೇಕ ಕಣಗಳ ಮೊತ್ತ
D) ದ್ರವ್ಯವು ರಾಶಿಯನ್ನು ಹೊಂದಿದೆ
52) ಯಾವ ಪ್ರದೇಶವನ್ನು ಭಾರತದ ಆಹಾರದ ಕಣಜ ಎಂದು ಕರೆಯಲಾಗಿದೆ ?
A) ದಕ್ಷಿಣ ಭಾರತದ ನದಿಗಳ ಬಯಲು ಪ್ರದೇಶ
B) ಪೂರ್ವ ಭಾರತದ ನದಿಗಳ ಬಯಲು ಪ್ರದೇಶ
C) ಉತ್ತರ ಭಾರತದ ನದಿಗಳ ಬಯಲು ಪ್ರದೇಶ ✓
D) ಪಶ್ಚಿಮ ಭಾರತದ ನದಿಗಳ ಬಯಲು ಪ್ರದೇಶ
53) ಮಾಂಸಾಹಾರಿ : ಸಿಂಹ :: ಮಿಶ್ರಹಾರಿ : ?
A) ಬೆಕ್ಕು ✓
B) ಜಿಂಕೆ
C) ಹುಲಿ
D) ಆನೆ
54) ಯಾವುದು ನವೀಕರಿಸಬಹುದಾದ ಸಂಪನ್ಮೂಲ ಆಗಿಲ್ಲ ?
A) ಕಲ್ಲಿದ್ದಲು
B) ಸೌರಶಕ್ತಿ
C) ಕಾಡು
D) ನೀರು
55) ಕೊಟ್ಟಿರುವ ಆಯ್ಕೆಗಳಲ್ಲಿ ಯಾವ ನದಿ ಕರ್ನಾಟಕದಲ್ಲಿ ಹರಿಯುವುದಿಲ್ಲ ?
A) ಗಂಗಾ ✓
B) ಕಾವೇರಿ
C) ಭದ್ರಾ
D) ಶರಾವತಿ
56) ಗ್ರಾಮೀಣ ವಿದ್ಯಾವಂತ ಯುವಜನರಿಗೆ ಸ್ವಂತ ಉದ್ಯೋಗಕ್ಕಾಗಿ ಸರಕಾರವು ಹಮ್ಮಿಕೊಂಡಿರುವ ಯೋಜನೆ ಯಾವುದು ?
A) ರೋಜ್ಗಾರ್ ಯೋಜನೆ ✓
B) ಸರ್ವ ಶಿಕ್ಷಣ ಅಭಿಯಾನ
C) ನಿರ್ಮಲ ಗ್ರಾಮ ಯೋಜನೆ
D) ಭಾಗ್ಯಲಕ್ಷ್ಮಿ ಯೋಜನೆ
57) ಆಯ್ಕೆಗಳಲ್ಲಿ ಯಾವುದು ಆಟಗಳಿಂದ ಪ್ರಯೋಜನ ಆಗುತ್ತದೆ ?
A) ಪರಿಸರ ಸಂರಕ್ಷಣೆ
B) ಜ್ಞಾನ
C) ಬರವಣಿಗೆ ಕೌಶಲ್ಯ
D) ದೈಹಿಕ ಕಸರತ್ತು ✓
58) ಈ ಕೆಳಗಿನವುಗಳಲ್ಲಿ ಜೈವಿಕ ಅಂಶವಿರುವ ವಸ್ತು ಯಾವುದು ?
A) ಹುರಿದ ಶೇಂಗಾ ಬೀಜ
B) ಹುರಿಯದ ಶೇಂಗಾ ಬೀಜ ✓
C) ಇಟ್ಟಿಗೆ
D) ಪೇಪರ್
59) ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಪಳೆಯುಳಿಕೆ ಇಂಧನವಾಗಿಲ್ಲ ?
A) ಪೆಟ್ರೋಲಿಯಂ
B) ನೈಸರ್ಗಿಕ ಅನಿಲ
C) ಸೌರಶಕ್ತಿ ✓
D) ಕಲ್ಲಿದ್ದಲು
60) ಜೀವ ಜಲ ಎಂದು ಯಾವ ಸಂಪನ್ಮೂಲಕ್ಕೆ ಕರೆಯಲಾಗಿದೆ ?
A) ಪೆಟ್ರೋಲ್
B) ಡೀಸೆಲ್
C) ಸೀಮೆ ಎಣ್ಣೆ
D) ನೀರು ✓
61) ಸಣ್ಣ ಕೃಷಿಕರ ಬಗ್ಗೆ ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಸರಿ ?
A) ಕೃಷಿ ಮಾಡಲು ಹಣದ ಅಭಾವವಿರುತ್ತದೆ
B) ಹೆಚ್ಚು ಜಮೀನನ್ನು ಹೊಂದಿರುವುದಿಲ್ಲ
C) ತಮ್ಮದೇ ಆದ ಸ್ವಲ್ಪ ಜಮೀನನ್ನು ಹೊಂದಿರುತ್ತಾರೆ
D) ಕೃಷಿ ಜಮೀನು ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ
62) ವಾಯುವಿನಲ್ಲಿರುವ ಎರಡನೇ ಅತಿದೊಡ್ಡ ಘಟಕ ಯಾವುದು ?
A) ನೈಟ್ರೋಜನ್
B) ಆಕ್ಸಿಜನ್ ✓
C) ಕಾರ್ಬನ್ ಡೈಆಕ್ಸೈಡ್
D) ನೀರಾವಿ ಜಡ ಅನಿಲಗಳು ಮತ್ತು ಧೂಳಿನ ಕಣಗಳು
63) ಸಂಚಾರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾಮೂಹಿಕ ವಸತಿಗಳಲ್ಲಿ ಕಂಡು ಬರುವ ಸೌಲಭ್ಯಗಳು ಯಾವುವು?
A) ಚಿತ್ರ ಮಂದಿರ ಹಾಗೂ ರಂಗಮಂದಿರ
B) ಆರೋಗ್ಯ ಕೇಂದ್ರ ಹಾಗೂ ಶೌಚಾಲಯ
C) ನೀರು ಸರಬರಾಜು ಹಾಗೂ ವಿದ್ಯುತ್
D) ರಸ್ತೆಗಳು ಹಾಗೂ ಪಾರ್ಕಿಂಗ್ ಸೌಲಭ್ಯ ✓
64) ಆಯ್ಕೆಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ?
A) ದ್ರವ್ಯದ ಕಣಗಳು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ
B) ವಾಯು ಒಂದು ದ್ರವ್ಯವಲ್ಲ ✓
C) ದ್ರವ್ಯದಲ್ಲಿನ ಒಟ್ಟು ಕಣಗಳ ಆ ದ್ರವ್ಯದ ತೂಕವನ್ನು ಅವಲಂಬಿಸಿದೆ
D) ವಾಯು ತಾನಿರುವ ಪಾತ್ರೆಯನ್ನು ಆಕ್ರಮಿಸುತ್ತದೆ
65) ಸಸ್ಯಮೂಲದ ಆಹಾರ ಪದಾರ್ಥಗಳಾದ ಸಾಮೆ ನವಣೆ ಮತ್ತು ಜೋಳ ಇವುಗಳನ್ನು ಯಾವ ವಿಧವಾಗಿ ವಿಂಗಡಿಸಬಹುದು ?
A) ದ್ವಿದಳ ಧಾನ್ಯಗಳು
B) ಎಣ್ಣೆ ಬೀಜಗಳು
C) ಏಕದಳ ಧಾನ್ಯಗಳು ✓
D) ತರಕಾರಿಗಳು
66) ಪರಿಸರ ಎಂದರೆ ….
A) ನಮ್ಮ ಸುತ್ತಲಿನ ವಾತಾವರಣವಲ್ಲ
B) ನಮ್ಮ ಸುತ್ತಲಿನ ವಾತಾವರಣವೇ ✓
C) ನಮ್ಮ ಸುತ್ತಲಿನ ಪ್ರಾಣಿಗಳು
D) ನಮ್ಮ ಸುತ್ತಲಿನ ವಾಯು
67) ಸಜೀವಿಗೆ ಉದಾಹರಣೆ ….
A) ಕಲ್ಲು
B) ನೀರು
C) ಆಕಾಶ
D) ಮರ ✓
68) ನಿರ್ಜೀವಿಗೆ ಉದಾಹರಣೆ ….
A) ಸಸ್ಯ
B) ಮನುಷ್ಯ
C) ಹಸು
D) ಕಟ್ಟಿಗೆ ✓
69) ಭೂಮಿಯ ಒಳಗಡೆ ಬೆಳೆಯುವ ಸಸ್ಯದ ಭಾಗ ….
A) ಎಲೆ
B) ಹೂವು
C) ಬೇರು ✓
D) ಕಾಂಡ
70) ಜೀವಿಗಳು ಉಸಿರಾಡಲು ಯಾವ ಅನಿಲವನ್ನು ಉಪಯೋಗಿಸಿಕೊಳ್ಳುತ್ತವೆ ?
A) ಆಕ್ಸಿಜನ್ ✓
B) ಕಾರ್ಬನ್
C) ಮೋರ್ಗನ್
D) ಬಾಕ್ಸೈಟ್
71) ಸಸ್ಯಗಳ ಆಹಾರವನ್ನು ಹೇಗೆ ತಯಾರಿಸಿಕೊಳ್ಳುತ್ತವೆ ?
A) ಮನುಷ್ಯರಿಂದ
B) ತಾವೇ ತಯಾರಿಸಿ ✓
C) ಪ್ರಾಣಿಗಳಿಂದ
D) ಯಾವುದು ಅಲ್ಲ
72) ಸಸ್ಯ ಮತ್ತು ಪ್ರಾಣಿಗಳನ್ನು ಅವಲಂಬಿಸಿರುವ ಜೀವಿಗಳನ್ನು ಏನೆನ್ನುತ್ತೇವೆ ?
A) ಪರಪೋಷಕಗಳು ✓
B) ಸ್ವಪೋಷಕಗಳು
C) ಸಸ್ಯಹಾರಿ
D) ಮಾಂಸಹಾರಿ
73) ಮಾಂಸಾಹಾರಿ ಪ್ರಾಣಿಗೆ ಉದಾಹರಣೆ ….
A) ಮೇಕೆ
B) ಕುರಿ
C) ಚಿರತೆ ✓
D) ಎತ್ತು
74) ಸಸ್ಯಹಾರಿ ಪ್ರಾಣಿಗೆ ಉದಾಹರಣೆ ….
A) ಮೊಲ ✓
B) ನಾಯಿ
C) ಹುಲಿ
D) ಸಿಂಹ
75) ಮಿಶ್ರಹಾರಿ ಪ್ರಾಣಿ ಯಾವುದು ?
A) ಜಿಂಕೆ
B) ಕರಡಿ
C) ಸಿಂಹ
D) ಬೆಕ್ಕು ✓
76) ನಾವು ನೋಡಲು ಸಹಾಯ ಮಾಡುವ ಅಂಗ ….
A) ಕಿವಿ
B) ಮೂಗು
C) ಕಣ್ಣು ✓
D) ನಾಲಿಗೆ
77) ಆಹಾರದ ರುಚಿ ನೋಡುವ ಅಂಗ ….
A) ಮೂಗು
B) ನಾಲಿಗೆ ✓
C) ಕೈ
D) ತಲೆ
78) ಶಬ್ದವನ್ನು ಕೇಳಲು ಸಹಾಯ ಮಾಡುವ ಅಂಗ ….
A) ಕಿವಿ ✓
B) ಮೂಗು
C) ಕಣ್ಣು
D) ನಾಲಿಗೆ
79) ವಾಸನೆಯನ್ನು ಗ್ರಹಿಸುವ ಅಂಗ ….
A) ಮೂಗು ✓
B) ಕಣ್ಣು
C) ಬಾಯಿ
D) ಹಲ್ಲು
80) ಯಾರಾದರೂ ಮುಟ್ಟಿದ ತಕ್ಷಣ ಪ್ರತಿಕ್ರಿಯೆ ನೀಡುವ ಅಂಗ ….
A) ಹಲ್ಲು
B) ಕೈ
C) ಕಾಲು
D) ಚರ್ಮ ✓
81) ಪಕ್ಷಿಗಳು …. ಗಳಿಂದ ಹಾರಡುತ್ತವೆ
A) ರೆಕ್ಕೆ ✓
B) ಕಾಲು
C) ಚರ್ಮ
D) ತುಪ್ಪಟ
82) ಹಸುವಿಗೆ ಎಷ್ಟು ಕಾಲುಗಳಿವೆ?
A) 2
B) 4 ✓
C) 3
D) 5
83) ನೀರಿನಲ್ಲಿ ವಾಸಿಸುವ ಪ್ರಾಣಿ ಇದಾಗಿದೆ
A) ಬೆಕ್ಕು
B) ಗಿಳಿ
C) ಮೀನು ✓
D) ಪಾರಿವಾಳ
84) ಏಕ ವಾರ್ಷಿಕ ಸಸ್ಯಗಳಿಗೆ ಉದಾಹರಣೆ ….
A) ಶುಂಠಿ
B) ಜೋಳ
C) ಕಬ್ಬು
D) ಬೀಟ್ರೂಟ್
85) ದೈ ವಾರ್ಷಿಕ ಸಸ್ಯಗಳಿಗೆ ಉದಾಹರಣೆ ….
A) ಆಲೂಗಡ್ಡೆ
B) ಭತ್ತ
C) ಶುಂಠಿ
D) ತೆಂಗು
86) ಬಹು ವಾರ್ಷಿಕ ಸಸ್ಯಗಳಿಗೆ ಉದಾಹರಣೆ ….
A) ಜೋಳ
B) ಹೂಕೋಸು
C) ಹತ್ತಿ
D) ಹಲಸು
87) ಸಮಾಜದ ಅತಿ ಚಿಕ್ಕ ಘಟಕ ….
A) ಶಾಲೆ
B) ಕುಟುಂಬ ✓
C) ಮನೆ
D) ಊರು
88) ಭಾರತದ ಮುಖ್ಯ ಕಸುಬು ಇದಾಗಿದೆ
A) ಕೃಷಿ ✓
B) ನೇಕಾರ
C) ಬಡಗಿ
D) ಬಟ್ಟೆ ಹೆಣೆಯುವುದು
89) ಈ ಕೆಳಗಿನದು ಮಕ್ಕಳ ಹಕ್ಕಾಗಿದೆ
A) ಉದ್ಯೋಗ
B) ಕೃಷಿ
C) ಶಿಕ್ಷಣ ✓
D) ಕೂಲಿ
90) ಸಾಕುವ ಪ್ರಾಣಿ ಇದಾಗಿದೆ
A) ಸಿಂಹ
B) ಮೇಕೆ ✓
C) ನರಿ
D) ತೋಳ
91) ಈ ಪ್ರಾಣಿ ಪ್ರಪಂಚದಲ್ಲಿ ಅತಿ ದೊಡ್ಡ ಪ್ರಾಣಿ
A) ಸಿಂಹ
B) ನರಿ
C) ತಿಮಿಂಗಲ
D) ಆನೆ ✓
92) ನವೀಕರಿಸಬಹುದಾದ ಸಂಪನ್ಮೂಲಕ್ಕೆ ಉದಾಹರಣೆ
A) ಗಾಳಿ ✓
B) ಪೆಟ್ರೋಲ್
C) ಡೀಸೆಲ್
D) ಸೀಮೆಎಣ್ಣೆ
93) ನವೀಕರಿಸಲಾಗದ ಸಂಪನ್ಮೂಲಕೆ ಉದಾಹರಣೆ
A) ನೀರು
B) ಮಣ್ಣು
C) ಡೀಸೆಲ್ ✓
D) ಆಕ್ಸಿಜನ್
94) ಸೂರ್ಯನಿಂದ ದೊರೆಯುವ ಶಕ್ತಿ
A) ಪವನಶಕ್ತಿ
B) ಅಣುಶಕ್ತಿ
C) ವಿದ್ಯುತ್ ಶಕ್ತಿ
D) ಸೌರಶಕ್ತಿ ✓
95) ಭೂಮಿಯ ಮೇಲಿರುವ ಎಲ್ಲಾ ಶಕ್ತಿಗಳ ಮೂಲ ಅಕರ
A) ನಕ್ಷತ್ರ
B) ಸೂರ್ಯ ✓
C) ಚಂದ್ರ
D) ಗ್ರಹ
96) ನಮಗೆ …. ಕುಡಿಯಲು ಬೇಕೇ ಬೇಕು
A) ನೀರು ✓
B) ಆಹಾರ
C) ಹಣ್ಣು
D) ತಿನಿಸು
97) ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ......
A) ಆಕ್ಸಿಜನ್
B) ನೈಟ್ರೋಜನ್ ✓
C) ಇಂಗಾಲ
D) ಕಾರ್ಬನ್
98) ಬಳಸಬಹುದಾದ ಸಿಹಿನೀರಿನ ಪ್ರಮಾಣ .......
A) 40%
B) 50%
C) 30%
D) 20% ✓
99) ಜಲಮಾಲಿನ್ಯಕ್ಕೆ ಉದಾಹರಣೆ ….
A) ಚರಂಡಿ ನೀರು ✓
B) ಸಿಹಿ ನೀರು
C) ಶುದ್ಧ ನೀರು
D) ಪ್ಲಾಸ್ಟಿಕ್
100) ವಾಯು ಮಾಲಿನ್ಯಕ್ಕೆ ಉದಾಹರಣೆ ….
A) ಹೊಗೆ ✓
B) ನೀರು
C) ಗಾಳಿ
D) ಕಾಗದ
101) ನೆಲ ಮಾಲಿನ್ಯಕ್ಕೆ ಉದಾಹರಣೆ ….
A) ಕೀಟನಾಶಕ ✓
B) ಹೊಗೆ
C) ಚರಂಡಿ ನೀರು
D) ಯಾವುದು ಅಲ್ಲ
102) ನೀರಿನ ಮುಖ್ಯ ಮೂಲ ….
A) ಮಳೆ ✓
B) ಬಾವಿ
C) ಕೆರೆ
D) ಬೋರ್‌ವೆಲ್
103) ಭೂಮಿಯ ಮೇಲೆ …. ಗಳು ನೀರಿನ ಅತಿದೊಡ್ಡ ಆಕರಗಳಾಗಿವೆ
A) ಕೆರೆ
B) ಸಾಗರ ✓
C) ನದಿ
D) ಬಾವಿ
104) ಪರಿಸರ ರಕ್ಷಣೆ ನಮ್ಮೆಲ್ಲರ …..
A) ಹೊಣೆ ✓
B) ಜವಾಬ್ದಾರಿ
C) ಕಾಳಜಿ
D) ಮೇಲಿನ ಎಲ್ಲವೂ
105) ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು ?
A) ಜೀವಿಗಳು ಜೀವಕೋಶಗಳಿಂದಾಗಿವೆ.
B) ಜೀವಿಗಳು ಉಸಿರಾಡುತ್ತವೆ.
C) ಜೀವಿಗಳು ಆಹಾರ ಸೇವಿಸುತ್ತವೆ.
D) ಯಾವುದೂ ಅಲ್ಲ ✓
106) ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು ?
A) ಜೀವಿಗಳು ಬೆಳೆಯುತ್ತವೆ.
B) ಜೀವಿಗಳು ಚಲಿಸುತ್ತವೆ.
C) ಜೀವಿಗಳು ವಿಸರ್ಜನೆ ಮಾಡುತ್ತವೆ.
D) ಯಾವುದೂ ಅಲ್ಲ ✓
107) ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಯಾವುದು ?
A) ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ.
B) ಜೀವಿಗಳು ಪ್ರಚೋದನೆಗೆ ಪ್ರತಿಕ್ರಿಯಿಸುತ್ತವೆ.
C) ಜೀವಿಗಳು ಜೀವಿತಾವಧಿಯನ್ನು ಹೊಂದಿವೆ.
D) ಯಾವುದೂ ಅಲ್ಲ ✓
108) ಸಸ್ಯಗಳು ಎಲೆಗಳ ತಳಭಾಗದಲ್ಲಿರುವ …… ಮೂಲಕ ಉಸಿರಾಡುತ್ತವೆ.
A) ಪತ್ರರಂಧ್ರಗಳ (ಸ್ಟೊಮ್ಯಾಟಾ) ✓
B) ಬೇರು
C) ಕಾಂಡ
D) ಹೂವು
109) ಸಸ್ಯಗಳು ಸೂರ್ಯನ ಬೆಳಕಿನ ಶಕ್ತಿ, ವಾಯುವಿನಲ್ಲಿನ ಕಾರ್ಬನ್ ಡೈಆಕ್ಸೆöÊಡ್, ಮಣ್ಣಿನಲ್ಲಿರುವ ನೀರು, ಖನಿಜ-ಲವಣಾಂಶಗಳನ್ನು ಬೇರುಗಳ ಮೂಲಕ ಹೀರಿ ಎಲೆಯಲ್ಲಿನ ಪತ್ರಹರಿತ್ತಿನ ಸಹಾಯದಿಂದ ಆಹಾರ ತಯಾರಿಸುತ್ತವೆ. ಇದನ್ನು …. ಎನ್ನುವರು.
A) ದ್ಯುತಿ ಸಂಶ್ಲೇಷಣೆ ✓
B) ಆಹಾರ ಸಂಗ್ರಹಣೆ
C) ಆಹಾರ ಸಂಸ್ಕರಣೆ
D) ಆಹಾರ ಸಾಗಾಣಿಕೆ
110) ಡ್ರಾಸಿರಾ, ನೆಪೆಂಥಿಸ್, ಯುಟ್ರಿಕ್ಯುಲೇರಿಯಾ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡರು ಕೂಡ ನೈಟ್ರೊಜನ್‌ಗಾಗಿ ಕೀಟಗಳನ್ನು ಅವಲಂಬಿಸಿವೆ. ಇವುಗಳನ್ನು ….. ಎನ್ನುವರು
A) ಕೀಟಾಹಾರಿ ಸಸ್ಯಗಳು ✓
B) ಪುಚ್ಛ ಸಸ್ಯಗಳು
C) ಜರಿ ಸಸ್ಯಗಳು
D) ಮಾಂಸಾಹಾರಿ ಸಸ್ಯಗಳು
111) ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದಿಲ್ಲ. ಅವು ಆಹಾರಕ್ಕಾಗಿ ಸಸ್ಯ ಹಾಗೂ ಇತರ ಪ್ರಾಣಿಗಳನ್ನು ಅವಲಂಬಿಸಿವೆ. ಹಾಗಾಗಿ ಪ್ರಾಣಿಗಳನ್ನು ಎನ್ನುವರು.
A) ಪರಪೋಷಕಗಳು ✓
B) ಸ್ವ ಪೋಷಕಗಳು
C) ಪೋಷಕಗಳು
D) ಯಾವುದೂ ಅಲ್ಲ
112) ಸಸ್ಯ ಹಾಗೂ ಅದರ ಉತ್ಪನ್ನಗಳನ್ನು ಮಾತ್ರ ಆಹಾರವನ್ನಾಗಿ ಸೇವಿಸುವ ಪ್ರಾಣಿಗಳು ….
A) ಸಸ್ಯಾಹಾರಿ ✓
B) ಮಾಂಸಾಹಾರಿ
C) ಮಿಶ್ರಾಹಾರಿ
D) ಮೇಲಿನ ಎಲ್ಲವೂ
113) ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳು ….
A) ಸಸ್ಯಾಹಾರಿ
B) ಮಾಂಸಾಹಾರಿ ✓
C) ಮಿಶ್ರಾಹಾರಿ
D) ಮೇಲಿನ ಎಲ್ಲವೂ
114) ಸಸ್ಯ ಹಾಗೂ ಪ್ರಾಣಿಗಳೆರಡನ್ನೂ ಆಹಾರವಾಗಿ ಸೇವಿಸುವ ಪ್ರಾಣಿಗಳು ….
A) ಸಸ್ಯಾಹಾರಿ
B) ಮಾಂಸಾಹಾರಿ
C) ಮಿಶ್ರಾಹಾರಿ ✓
D) ಮೇಲಿನ ಎಲ್ಲವೂ
115) ….. ಭೂಮಿಯಲ್ಲಿ ನೀರಿರುವ ಕಡೆಗೆ ಬೆಳೆಯುವುದು.
A) ಬೇರು ✓
B) ಎಲೆ
C) ಹೂವು
D) ಹಣ್ಣು
116) ಸೂರ್ಯಕಾಂತಿ ಸಸ್ಯವು …. ಕಡೆಗೆ ಮುಖ ಮಾಡುವುದು.
A) ಸೂರ್ಯನ ✓
B) ಚಂದ್ರನ
C) ದಕ್ಷಿಣದ
D) ಉತ್ತರದ
117) ಸಸ್ಯಗಳು ಬೀಜ ಮತ್ತು ಕಾಂಡಗಳ ಮೂಲಕ …. ಮಾಡುತ್ತವೆ.
A) ಸಂತಾನೋತ್ಪತ್ತಿ ✓
B) ಉಸಿರಾಟ
C) ಪ್ರಯಾಣ
D) ಎಲ್ಲವೂ
118) ಸಸ್ಯಗಳು ಕೂಡ ಉಸಿರಾಟ ಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೆöÊಡ್ ಅನಿಲವನ್ನು ಹೊರ ಹಾಕುತ್ತವೆ. ಒಣಗಿದ ಎಲೆ, ಕಾಂಡ, ಕೊಳೆತ ಭಾಗಗಳು ಸಸ್ಯಗಳಿಂದ ಕಳಚಿಕೊಳ್ಳುತ್ತವೆ. ಹೆಚ್ಚಾದ ನೀರನ್ನು ಸಸ್ಯಗಳು ….. ಮೂಲಕ ಹೊರಹಾಕುತ್ತವೆ.
A) ಎಲೆಗಳ ✓
B) ಹೂಗಳ
C) ಬೇರುಗಳ
D) ಕಾಂಡಗಳ
119) ಜೀವಿಯೊಂದು ತನ್ನನ್ನೇ ಹೋಲುವ ಮರಿ ಜೀವಿಗಳಿಗೆ ಜನ್ಮ ನೀಡುವುದನ್ನು ….. ಎನ್ನುವರು.
A) ಸಂತಾನೋತ್ಪತ್ತಿ
B) ಪುನರ್ಜನ್ಮ
C) ಅನುವಂಶೀಯತೆ
D) ಯಾವುದೂ ಅಲ್ಲ
120) ಆಮೆ ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ) …
A) 150 ✓
B) 100
C) 50
D) 25
121) ಆನೆ ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ) …
A) 70 ✓
B) 50
C) 30
D) 10
122) ಆಕಳು ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ) …
A) 20 ✓
B) 40
C) 60
D) 80
123) ಹದ್ದು ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ) …
A) 20 ✓
B) 50
C) 80
D) 45
124) ಮಾನವ ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ) …
A) 70-80 ✓
B) 40-50
C) 50-60
D) 50-55
125) ಸಸ್ಯಗಳನ್ನು ಜೀವಿತಾವಧಿಯ ಆಧಾರದ ಮೇಲೆ …. ಸಸ್ಯಗಳು ಎಂದು ವಿಂಗಡಿಸಲಾಗಿದೆ.
A) ಏಕವಾರ್ಷಿಕ ಸಸ್ಯಗಳು,
B) ದ್ವೈವಾರ್ಷಿಕ ಸಸ್ಯಗಳು
C) ಬಹುವಾರ್ಷಿಕ ಸಸ್ಯಗಳು
D) ಮೇಲಿನ ಮೂರು ಹೌದು ✓
126) ಏಕದಳ ಧಾನ್ಯ ಸಸ್ಯಗಳ ಬೀಜವು …. ಬೀಜ ದಳವನ್ನು ಹೊಂದಿರುತ್ತದೆ.
A) ಒಂದು ✓
B) ಎರಡು
C) ಮೂರು
D) ನಾಲ್ಕು
127) ಜೋಳ, ರಾಗಿ, ಗೋಧಿ, ಭತ್ತ, ಇವುಗಳು …. ಗೆ ಉದಾಹರಣೆ
A) ಸಿರಿಧಾನ್ಯಗಳು ✓
B) ದ್ವಿದಳ ಧಾನ್ಯಗಳು
C) ಏಕದಳ ಧಾನ್ಯಗಳು
D) ಯಾವುದೂ ಅಲ್ಲ
128) ದ್ವಿದಳ ಧಾನ್ಯ ಸಸ್ಯಗಳ ಬೀಜವು ….. ಬೀಜ ದಳಗಳನ್ನು ಹೊಂದಿರುತ್ತದೆ.
A) ಒಂದು
B) ಎರಡು ✓
C) ಮೂರು
D) ನಾಲ್ಕು
129) ಹುರುಳಿ, ಶೇಂಗಾ. ತೊಗರಿ, ಕಡಲೆ, ಉದ್ದು. ಇವುಗಳು …. ಗೆ ಉದಾಹರಣೆ.
A) ಸಿರಿಧಾನ್ಯಗಳು
B) ದ್ವಿದಳ ಧಾನ್ಯಗಳು ✓
C) ಏಕದಳ ಧಾನ್ಯಗಳು
D) ಯಾವುದೂ ಅಲ್ಲ
130) ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ….
A) ರಕ್ಷಿಸುತ್ತದೆ ✓
B) ಶಿಕ್ಷಿಸುತ್ತದೆ
C) ಬೆಳೆಸುತ್ತದೆ
D) ಉಳಿಸುತ್ತದೆ
131) ಕುಟುಂಬ
132) 2 ಕ್ಕಿಂತ ಹೆಚ್ಚು ತಲೆಮಾರಿನವರು ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು …….. ಎನಿಸಿಕೊಳ್ಳುವುದು.
A) ಅವಿಭಕ್ತ ಕುಟುಂಬ ✓
B) ವಿಭಕ್ತ ಕುಟುಂಬ
C) ಸಾದಾರಣ ಕುಟುಂಬ
D) ಅಸಾಧಾರಣ ಕುಟುಂಬ
133) 2 ತಲೆಮಾರಿನವರು ವಾಸಿಸುವ ಚಿಕ್ಕ ಕುಟುಂಬವು …… ಎನಿಸಿಕೊಳ್ಳುವುದು.
A) ಅವಿಭಕ್ತ ಕುಟುಂಬ
B) ವಿಭಕ್ತ ಕುಟುಂಬ ✓
C) ಸಾದಾರಣ ಕುಟುಂಬ
D) ಅಸಾಧಾರಣ ಕುಟುಂಬ
134) ಒಂದು ನಿಶ್ಚಿತ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ….. ಎಂದು ಕರೆಯುತ್ತಾರೆ.
A) ಸಮುದಾಯ ✓
B) ಸಂಘ
C) ಸಂಸ್ತೆ
D) ಸಹಕಾರ ಸಂಸ್ಥೆ
135) ಸಮುದಾಯದಲ್ಲಿನ ಸದಸ್ಯರು ಪರಸ್ಪರ ….
A) ಅವಲಂಬಿತರಾಗಿರುತ್ತಾರೆ.
B) ಸಹಕಾರದಿಂದ ಇರುತ್ತಾರೆ
C) ಒಳ್ಳೆಯ ಸಂಬಂಧದಿಂದ ಇರುತ್ತಾರೆ
D) ಮೇಲಿನ ಎಲ್ಲವೂ ಸರಿ ✓
136) ಬೇರೆ ಬೇರೆ ಹೆಸರುಗಳ ಸಮುದಾಯಗಳು ….
A) ಗ್ರಾಮ ಸಮುದಾಯ,
B) ನಗರ ಸಮುದಾಯ,
C) ಬುಡಕಟ್ಟು ಸಮುದಾಯ.
D) ಮೇಲಿನ ಮೂರು ಹೌದು ✓
137) ಎಲ್ಲಾ ಕುಟುಂಬಗಳ ಗುಂಪನ್ನು ……. ಎಂದು ಕರೆಯುತ್ತಾರೆ.
A) ಸಮುದಾಯ ✓
B) ಬಡಾವಣೆ
C) ಬೀದಿ
D) ಬುಡಕಟ್ಟು
138) ಭಾರತದಲ್ಲಿ ಶೇಕಡಾ …… ಭಾಗದಷ್ಟು ಜನರು ಗ್ರಾಮಗಳಲ್ಲಿ ವಾಸಿಸುತ್ತಾರೆ.
A) 72 ✓
B) 50
C) 40
D) 20
139) ಶೇಕಡ …. ಭಾಗದಷ್ಟು ಗ್ರಾಮದ ವಾಸಿಗಳಿಗೆ ಕೃಷಿಯೇ ಜೀವನಾಧಾರ.
A) 70 ✓
B) 100
C) 50
D) 10
140) ಕೃಷಿಯೊಂದಿಗೆ ಹೈನುಗಾರಿಕೆ (ಹಸು, ಎಮ್ಮೆ ಸಾಕಣೆ), …. ಮುಂತಾದ ಉಪ ಕಸುಬುಗಳನ್ನು ಮಾಡುತ್ತಾರೆ.
A) ಕೋಳಿ ಸಾಕಣೆ,
B) ಮೀನುಗಾರಿಕೆ,
C) ರೇಷ್ಮೆಹುಳು ಸಾಕಣೆ,
D) ಮೇಲಿನ ಮೂರು ಕೂಡ ✓
141) ಗ್ರಾಮಗಳಲ್ಲಿ ನೇಕಾರ, … ಇತ್ಯಾದಿ ಕಸುಬುಗಳನ್ನು ಗ್ರಾಮಗಳಲ್ಲಿ ಕಾಣಬಹುದು.
A) ಕಮ್ಮಾರ,
B) ಬಡಗಿ,
C) ಬುಟ್ಟಿ ಹೆಣೆಯುವ
D) ಮೇಲಿನ ಎಲ್ಲಾ ✓
142) ರೈತರು ಕೃಷಿ ಚಟುವಟಿಕೆಗೆ …. ಅವಲಂಬಿಸಿದ್ದಾರೆ.
A) ಮಳೆಯನ್ನು ✓
B) ನಗರವನ್ನು
C) ಜೀತ ಪದ್ಧತಿಯನ್ನು
D) ಗಾಳಿಯನ್ನು
143) ಗ್ರಾಮಗಳಲ್ಲಿರುವ ಸಮಸ್ಯೆಗಳು ….
A) ನೈರ್ಮಲ್ಯ,
B) ಆರೋಗ್ಯ,
C) ಶಿಕ್ಷಣ ಮತ್ತು ಉದ್ಯೋಗ
D) ಮೇಲಿನ ಎಲ್ಲಾ ✓
144) ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವು ಯಾವುವೆಂದರೆ-
A) ರೋಜಗಾರ್ ಯೋಜನೆ
B) ಸರ್ವ ಶಿಕ್ಷಣ ಅಭಿಯಾನ
C) ನಿರ್ಮಲ ಗ್ರಾಮ ಯೋಜನೆ
D) ಮೇಲಿನ ಎಲ್ಲಾ ✓
145) ಗ್ರಾಮೀಣ ವಿದ್ಯಾವಂತ ಯುವಜನರಿಗೆ ಸ್ವಂತ ಉದ್ಯೋಗಕ್ಕಾಗಿ … ಯೋಜನೆ
A) ರೋಜಗಾರ್ ಯೋಜನೆ
B) ಜವಾಹರ್‌ಗ್ರಾಮ ಸಮೃದ್ಧಿ ಯೋಜನೆ.
C) ಸರ್ವ ಶಿಕ್ಷಣ ಅಭಿಯಾನ
D) A ಮತ್ತು B ಸರಿ ✓
146) ಗುಣಾತ್ಮಕ ಶಿಕ್ಷಣವನ್ನು ನೀಡುವ ಯೋಜನೆ …
A) ರೋಜಗಾರ್ ಯೋಜನೆ
B) ಜವಾಹರ್‌ಗ್ರಾಮ ಸಮೃದ್ಧಿ ಯೋಜನೆ.
C) ಸರ್ವ ಶಿಕ್ಷಣ ಅಭಿಯಾನ ✓
D) ಮದ್ಯಾಹ್ನದ ಬಿಸಿಯೂಟ ಯೋಜನೆ
147) ಗ್ರಾಮ ನೈರ್ಮಲ್ಯದ ಗುರಿಗಾಗಿ ಇರುವ ಯೋಜನೆ ….
A) ನಿರ್ಮಲ ಗ್ರಾಮ ಯೋಜನೆ ✓
B) ರೋಜಗಾರ್ ಯೋಜನೆ
C) ಜವಾಹರ್‌ಗ್ರಾಮ ಸಮೃದ್ಧಿ ಯೋಜನೆ.
D) ಸರ್ವ ಶಿಕ್ಷಣ ಅಭಿಯಾನ
148) ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಯೋಜನೆ ….
A) ಭಾಗ್ಯಲಕ್ಷ್ಮಿ ಯೋಜನೆ ✓
B) ರೋಜಗಾರ್ ಯೋಜನೆ
C) ಜವಾಹರ್‌ಗ್ರಾಮ ಸಮೃದ್ಧಿ ಯೋಜನೆ.
D) ಸರ್ವ ಶಿಕ್ಷಣ ಅಭಿಯಾನ
149) ಬಡವರಿಗೆ ಉಚಿತ ನಿವೇಶನ ಮತ್ತು ಮನೆಗಳನ್ನು ಕಟ್ಟಲು ಸಾಲ ಹಾಗೂ ಅನುದಾನ ನೀಡಲು ಇರುವ ಯೋಜನೆ ….
A) ಆಶ್ರಯ ಯೋಜನೆ ✓
B) ರೋಜಗಾರ್ ಯೋಜನೆ
C) ಜವಾಹರ್‌ಗ್ರಾಮ ಸಮೃದ್ಧಿ ಯೋಜನೆ.
D) ಸರ್ವ ಶಿಕ್ಷಣ ಅಭಿಯಾನ
150) ದಟ್ಟ ಅರಣ್ಯಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಗುಂಪನ್ನು …..ಎಂದು ಕರೆಯುತ್ತೇವೆ.
A) ಬುಡಕಟ್ಟು ಸಮುದಾಯ ✓
B) ಸಮುದಾಯ
C) ಕುಟುಂಬ
D) ಗ್ರಾಮ
151) ಕರ್ನಾಟಕದಲ್ಲಿರುವ ಬುಡಕಟ್ಟು ಜನಾಂಗದವರು ….
A) ಮೈಸೂರು ಜಿಲ್ಲೆಯ ಸೋಲಿಗರು,
B) ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು,
C) ಕೊಡಗು ಜಿಲ್ಲೆಯ ಜೇನು ಕುರುಬರು ಮತ್ತು ಯೆರವರು
D) ಮೇಲಿನ ಎಲ್ಲರೂ ✓
152) ಸಮುದಾಯ - ಕ್ರೀಡೆಗಳು
153) ಜನರು ಮನೋರಂಜನೆಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಕಂಡುಕೊಂಡ ಚಟುವಟಿಕೆಗಳೇ …
A) ಕ್ರೀಡೆಗಳು ✓
B) ಪ್ರವಾಸಗಳು
C) ದಾರವಾಹಿಗಳು
D) ಚಲನಚಿತ್ರಗಳು
154) ಆಟ, ಯೋಗ, ದೈಹಿಕ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ …. ಆರೋಗ್ಯ ವೃದ್ಧಿಸುತ್ತದೆ.
A) ದೈಹಿಕ
B) ಮಾನಸಿಕ
C) ದೈಹಿಕ ಮತ್ತು ಮಾನಸಿಕ ✓
D) ಮೇಲಿನ ಯಾವುದೂ ಅಲ್ಲ
155) ಇವುಗಳನ್ನು ಅಭ್ಯಾಸ ಮಾಡುವುದರಿಂದ ನರ ಮತ್ತು ಸ್ನಾಯುಗಳ ಹೊಂದಾಣಿಕೆ ಉಂಟಾಗಿ ದೇಹ ಬಲಗೊಳ್ಳುತ್ತದೆ.
A) ಕ್ರೀಡೆ ✓
B) ಯೋಗ
C) ವಿಶ್ರಾಂತಿ
D) ತೂಕಡಿಕೆ
156) ಇದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು.
A) ಕ್ರೀಡೆ ✓
B) ಯೋಗ
C) ವಿಶ್ರಾಂತಿ
D) ತೂಕಡಿಕೆ
157) ಇದರಿಂದ ಒಳ್ಳೆಯ ದೈಹಿಕ ಆಕಾರವನ್ನು ಪಡೆಯುವುದರಿಂದ ದೇಹ ಸುಂದರವಾಗುತ್ತದೆ.
A) ಕ್ರೀಡೆ ✓
B) ಯೋಗ
C) ವಿಶ್ರಾಂತಿ
D) ತೂಕಡಿಕೆ
158) ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
A) ಕ್ರೀಡೆ ✓
B) ಯೋಗ
C) ವಿಶ್ರಾಂತಿ
D) ತೂಕಡಿಕೆ
159) ಇದರಿಂದ ಮನೋರಂಜನೆ ಮತ್ತು ಉಲ್ಲಾಸ ಉಂಟಾಗಿ ಸದಾ ಲವಲವಿಕೆಯಿಂದ ಕೂಡಿ ಹೆಚ್ಚು ಚುರುಕಾಗಿರಬಹುದು.
A) ಕ್ರೀಡೆ ✓
B) ಪ್ರಯಾಣ
C) ವಿಶ್ರಾಂತಿ
D) ತೂಕಡಿಕೆ
160) ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಿಂದ ದೇಶ ವಿದೇಶಗಳ ನಡುವೆ ಸ್ನೇಹ, ಸೌಹಾರ್ದತೆ ಹೆಚ್ಚಿ, ಪರಸ್ಪರ ಬಾಂಧವ್ಯ ಬೆಳೆದು, ಸಂಬಂಧಗಳು …
A) ಉತ್ತಮಗೊಳ್ಳುತ್ತವೆ
B) ಉಳಿಯುತ್ತವೆ
C) ಗಟ್ಟಿಗೊಳ್ಳುತ್ತವೆ
D) ಮೇಲಿನ ಎಲ್ಲವೂ ಸರಿ ✓
161) ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು
A) ತೇನ್‌ಸಿಂಗ್ ನೋರ್ಗೆ ✓
B) ಕೋಲಂಬಸ್
C) ಕಲ್ಪನಾಚಾವ್ಲಾ
D) ಮೇಲಿನ ಯಾರೂ ಅಲ್ಲ
162) ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ …
A) ಬಚೇಂದ್ರಿಪಾಲ್ ✓
B) ಕಲ್ಪನಾ ಚಾವ್ಲಾ
C) ಯೂರಿ ಗಗಾರಿನ್
D) ಮೇಲಿನ ಯಾರೂ ಅಲ್ಲ
163) ಗ್ರಾಮೀಣ ಸಾಹಸ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು. ಆದರೆ …… ದ ಪ್ರಭಾವದಿಂದಾಗಿ ಇತ್ತೀಚೆಗೆ ಇವು ಮರೆಯಾಗುತ್ತಿವೆ.
A) ಆಧುನಿಕತೆ,
B) ಟಿ.ವಿ.,
C) ಅಂತರ್‌ಜಾಲ
D) ಮೇಲಿನ ಎಲ್ಲದರ ✓
164) …. ಕ್ರೀಡೆಯು ಮೈಸೂರು ಮಹಾರಾಜರ ಕಾಲದಿಂದಲೂ ಬಂದಿದ್ದು, ಇಂದಿಗೂ ದಸರಾ ಕ್ರೀಡೆಯ ಒಂದು ಭಾಗವಾಗಿ ಉಳಿದುಕೊಂಡಿದೆ.
A) ಕುಸ್ತಿ ✓
B) ಓಟ
C) ಕ್ರಿಕೆಟ್
D) ಸೈಕಲ್ ಸ್ಪರ್ಧೆ
165) ಸೈಕಲ್ ತುಳಿಯುವುದು, ಈಜುವುದು, ಬಿರುಸಾಗಿ ನಡೆಯುವುದು, ಯೋಗಾಭ್ಯಾಸ ಮಾಡುವುದು ಉತ್ತಮ ಅಭ್ಯಾಸ. ಇದರಿಂದ …. ಉತ್ತಮಗೊಳ್ಳುತ್ತದೆ.
A) ಆರೋಗ್ಯ ✓
B) ಅನಾರೋಗ್ಯ
C) ದುರ್ಬಲತೆ
D) ಆರ್ಥಿಕ ಸ್ಥಿತಿ
166) 5 ನೈಸರ್ಗಿಕ ಸಂಪನ್ಮೂಲಗಳು
167) ಸಂಪನ್ಮೂಲವೆಂದರೆ ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ …. ಇತ್ಯಾದಿ.
A) ನೀರು ಮತ್ತು ಮಣ್ಣು
B) ಗಾಳಿ ಮತ್ತು ಖನಿಜಗಳು
C) ಸಸ್ಯ ಮತ್ತು ಪ್ರಾಣಿ ಸಂಪತ್ತು
D) ಮೇಲಿನ ಎಲ್ಲವೂ ✓
168) ನಾನಿಲ್ಲದೆ ನೀನು ಒಂದು ಕ್ಷಣವಿಲ್ಲ, ಗಿಡ ಮರ ಪ್ರಾಣಿಗಳಿಗೂ ನಾನು ಬೇಕಲ್ಲ, ನಾನು ಯಾರ ಕಣ್ಣಿಗೂ ಕಾಣೋದಿಲ್ಲ, ನಾನು ಯಾರು?
A) ಗಾಳಿ ✓
B) ನೀರು
C) ನೆರಳು
D) ಯಾವುದೂ ಅಲ್ಲ
169) ಭೂಮಿಯ ಬಹು ಭಾಗ ನಾನೇ ಇರುವೆ, ನಿನ್ನ ಬಾಯಾರಿಕೆ ನಾನು ನೀಗುವೆ, ಗಿಡಮರ ಪ್ರಾಣಿಗಳಿಗೆ ತಂಪು ಕೊಡುವೆ, ನಾನು ಯಾರು?
A) ಗಾಳಿ
B) ನೀರು ✓
C) ನೆರಳು
D) ಯಾವುದೂ ಅಲ್ಲ
170) ನನ್ನ ಮೇಲೆ ನೀನಿರುವೆ, ಸಸ್ಯ ಬೆಳೆಯಲು ನೆರವಾಗುವೆ, ಜೀವರಾಶಿಗೆ ಆಸರೆಯಾಗುವೆ, ನಾನು ಯಾರು?
A) ಗಾಳಿ
B) ನೀರು
C) ನೆರಳು
D) ಭೂಮಿ ✓
171) ಹಣ್ಣು, ಕಾಯಿ ನೀಡುವೆ, ತಂಪು ನೆರಳು ಕೊಡುವೆ, ನಾನಿಲ್ಲದೆ ಜೀವ ಜಾಲವಿಲ್ಲ, ನಾನು ಯಾರು?
A) ಗಾಳಿ
B) ನೀರು
C) ನೆರಳು
D) ಮರ ✓
172) ಬಸ್ಸು, ಲಾರಿ, ಕಾರು ಚಲಿಸಲು ನಾನು ಬೇಕು, ನಾನು ತಯಾರಾಗಲು ಸಾವಿರಾರು ವರ್ಷ ಬೇಕು, ಭೂಮಿಯೊಳಗಿನಿಂದ ನನ್ನ ತೆಗೆಯಬೇಕು, ನಾನು ಯಾರು?
A) ಗಾಳಿ
B) ನೀರು
C) ಮರ
D) ಪೆಟ್ರೋಲ್ ✓
173) ಪಾತ್ರೆ ತಟ್ಟೆ, ಲೋಟ ಚೆಂಬು ಎಲ್ಲವೂ ನನ್ನಿಂದ, ನಿನ್ನ ಕಿವಿ, ಕಾಲ್ಗೆ ನಾನೇ ಅಂದ, ನಿನಗಾನಂದ, ಅದಿರು ರೂಪದಿ ಬಂದು ಗಟ್ಟಿಯಾಗುವೆ ನಿನ್ನಿಂದ, ನಾನು ಯಾರು?
A) ಗಾಳಿ
B) ನೀರು
C) ನೆರಳು
D) ಲೋಹ ✓
174) ಕತ್ತಲ ಕಳೆಯುವೆ, ಬೆಳಕನು ನೀಡುವೆ, ಶಕ್ತಿಯ ಮೂಲವು ನಾನಾಗಿರುವೆ, ನಾನು ಯಾರು?
A) ಗಾಳಿ
B) ನೀರು
C) ನೆರಳು
D) ಸೂರ್ಯ ✓
175) ಸೌರಶಕ್ತಿ, ವಾಯು (ಗಾಳಿ), ನೀರು, ಮಣ್ಣು ಮತ್ತು ಕಾಡು (ಅರಣ್ಯ) ಗಳಂತಹ ಸಂಪನ್ಮೂಲಗಳು ಬಳಸಿದಷ್ಟೂ ದೊರಕುವಂತಹ ಸಂಪನ್ಮೂಲಗಳಾಗಿವೆ. ಮಾನವರ ಜೀವಿತಾವಧಿಯಲ್ಲಿ ಇವು ನಿರಂತರವಾಗಿ ಲಭ್ಯವಿರುವುದರಿಂದ ಈ ಸಂಪನ್ಮೂಲಗಳನ್ನು …… ಎನ್ನುವರು.
A) ನವೀಕರಿಸಬಹುದಾದ ಸಂಪನ್ಮೂಲಗಳು ✓
B) ನವೀಕರಿಸಲಾಗದ ಸಂಪನ್ಮೂಲಗಳು
C) ಬರಿದಾಗುವ ಸಂಪನ್ಮೂಲಗಳು
D) ಮೇಲಿನ ಯಾವುದೂ ಅಲ್ಲ
176) ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದಂತಹ ಸಂಪನ್ಮೂಲಗಳು ಬಳಸಿದಂತೆಲ್ಲಾ ಮುಗಿದು ಹೋಗುತ್ತವೆ. ಇಂತಹ ಸಂಪನ್ಮೂಲಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಂಪನ್ಮೂಲಗಳನ್ನು …. ಎನ್ನುವರು.
A) ನವೀಕರಿಸಬಹುದಾದ ಸಂಪನ್ಮೂಲಗಳು
B) ನವೀಕರಿಸಲಾಗದ ಸಂಪನ್ಮೂಲಗಳು ✓
C) ಬರಿದಾಗದ ಸಂಪನ್ಮೂಲಗಳು
D) ಮೇಲಿನ ಯಾವುದೂ ಅಲ್ಲ
177) ಸೂರ್ಯನಿಂದ ದೊರಕುವ ಶಕ್ತಿಯೇ ….
A) ಸೌರಶಕ್ತಿ ✓
B) ಜಲಶಕ್ತಿ
C) ಪವನಶಕ್ತಿ
D) ಅಣುಶಕ್ತಿ
178) ಸೂರ್ಯನಿಂದ ನಮಗೆ …. ದೊರೆಯುತ್ತವೆ.
A) ಬೆಳಕು
B) ಉಷ್ಣ
C) ಶಾಖ
D) ಮೇಲಿನ ಎಲ್ಲವೂ ಹೌದು ✓
179) ಭೂಮಿಗೆ …. ನೇ ನೈಸರ್ಗಿಕ ಬೆಳಕು ಮತ್ತು ಉಷ್ಣದ ಮೂಲ. ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುತ್ತವೆ
A) ಸೂರ್ಯ ✓
B) ಚಂದ್ರ
C) ಮಂಗಳ
D) ಶುಕ್ರ
180) ನಾವು ಮಣ್ಣಿನ ಮೇಲೆ ನಡೆದಾಡುತ್ತೇವೆ. ಇದರ ಮೇಲೆಯೇ ವಾಸಿಸುತ್ತೇವೆ. ನೀರಿನಂತೆಯೇ ಮಣ್ಣು ಕೂಡ ಒಂದು ….
A) ಮುಗಿಯದ ಸಂಪನ್ಮೂಲವಾಗಿದೆ ✓
B) ಬರಿದಾಗುವ ಸಂಪನ್ಮೂಲವಾಗಿದೆ
C) ಮುಗಿಯುವ ಸಂಪನ್ಮೂಲವಾಗಿದೆ
D) ನವೀಕರಿಸಲಾಗದ ಸಂಪನ್ಮೂಲವಾಗಿದೆ
181) ಸಸ್ಯಗಳ ಸಹಜವಾದ ಬೆಳವಣಿಗೆಗೆ ಮಣ್ಣು ಅತ್ಯಂತ ಅವಶ್ಯಕವಾಗಿರುತ್ತದೆ. ಸಸ್ಯಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ನೀರು ಮತ್ತು ಲವಣಗಳನ್ನು …. ಮೂಲಕ ಪಡೆಯುತ್ತವೆ
A) ಸೂರ್ಯನ
B) ಮಣ್ಣಿನ ✓
C) ಕೀಟನಾಶಕ
D) ಮೇಲಿನ ಎಲ್ಲಾ ಮೂಲಗಳಿಂದ
182) ಪರಿಸರದಲ್ಲಿನ ಕಾಡು ಪ್ರಾಣಿ ಮತ್ತು ಪಕ್ಷಿಗಳಿಗೆ ನೈಸರ್ಗಿಕ ಆವಾಸವನ್ನು, ಪ್ರಾಣಿಗಳಿಗೆ ಆಹಾರ ಮತ್ತು ಮೇವನ್ನು ಹಾಗೂ ಮಾನವರಿಗೆ ಅಗತ್ಯವಾದ ಅನೇಕ ವಸ್ತುಗಳನ್ನು ಒದಗಿಸುವುದು …
A) ಕಾಡುಗಳು ✓
B) ನಾಡುಗಳು
C) ಗುಟ್ಟಗಾಡುಗಳು
D) ಬೆಟ್ಟಗುಡ್ಡಗಳು
183) ಕಾಡುಗಳ ನಾಶ, ಜೀವ ಸಂಕುಲದ ….
A) ನಾಶ
B) ಅಳಿವು
C) ವಿನಾಶ
D) ಮೇಲಿನ ಎಲ್ಲವೂ ಒಂದೇ ಅರ್ಥ ✓
184) ಕಾಡುಗಳ ಸಂರಕ್ಷಣೆ ಎಂದರೆ …
A) ಮರಗಳನ್ನು ಕಡಿಯುವುದನ್ನು ನಿಯಂತ್ರಿಸುವುದು,
B) ಗಿಡ-ಮರಗಳನ್ನು ಬೆಳೆಸುವುದು,
C) ಕಾಡಿನ ಸರಿಯಾದ ಬಳಕೆ,
D) ಮೇಲಿನ ಎಲ್ಲಾ ಕ್ರಮವೂ ಸರಿ ✓
185) ಕಾಡ್ಗಿಚ್ಚು ಉಂಟುಮಾಡುವ ಮರಗಳ ರೆಂಬೆಗಳನ್ನು ಕತ್ತರಿಸುವ ಮೂಲಕ …. ಸಂರಕ್ಷಿಸಬಹುದು.
A) ಕಾಡುಗಳನ್ನು
B) ಕಾನನವನ್ನು
C) ಅರಣ್ಯವನ್ನು
D) ಮೇಲಿನ ಎಲ್ಲವೂ ಒಂದೇ ✓
186) ಕಾಡುಗಳನ್ನು ಸಂರಕ್ಷಿಸಲು ಸರ್ಕಾರವು ರಾಷ್ಟ್ರೀಯ ಅರಣ್ಯ ನೀತಿಯನ್ನು ….. ರಲ್ಲಿ ಪರಿಷ್ಕರಿಸಿ, ಜಾರಿಗೆ ತಂದು ಅರಣ್ಯಗಳ ಪೋಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ.
A) 1988 ✓
B) 1999
C) 2000
D) 2004
187) ಸರ್ಕಾರವು …… ಮೂಲಕ ರಾಷ್ಟ್ರೀಯ ಅರಣ್ಯಗಳನ್ನು ನಿರ್ವಹಿಸಿ, ಸಂರಕ್ಷಿಸುತ್ತಿದೆ.
A) ಅರಣ್ಯ ಇಲಾಖೆ ✓
B) ಆರ್ಥಿಕ ಇಲಾಖೆ
C) ಅಬಕಾರಿ ಇಲಾಖೆ
D) ಸಾರಿಗೆ ಇಲಾಖೆ
188) ಸಾಮಾಜಿಕ ಅರಣ್ಯಗಳನ್ನು …. ಮತ್ತು …. ಸಂರಕ್ಷಿಸುತ್ತಾರೆ.
A) ಗ್ರಾಮ ಪಂಚಾಯ್ತಿ ಮತ್ತು ಸಮುದಾಯದವರು ✓
B) ಪೋಲಿಸ್ ಮತ್ತು ವೈದ್ಯರು
C) ತಾಲ್ಲೂಕು ಮತ್ತು ಜಿಲ್ಲಾಧಿಕಾರಿಗಳು
D) ಮೇಲಿನ ಯಾರೂ ಅಲ್ಲ
189) ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯ ಜೀವಿಧಾಮಗಳು: ಕೆಲವು ಅರಣ್ಯ ಪ್ರದೇಶಗಳನ್ನು ಗುರ್ತಿಸಿ ಕಾಡಿನೊಂದಿಗೆ ವನ್ಯ ಜೀವಿಗಳನ್ನೂ ಸಂರಕ್ಷಿಸಲಾಗಿದೆ. ಉದಾಹರಣೆ : ಬನ್ನೇರುಘಟ್ಟ, ಬಂಡೀಪುರ ಅರಣ್ಯಗಳನ್ನು ಸಂರಕ್ಷಿಸಲು ಕಾನೂನುಗಳನ್ನು ರೂಪಿಸಿ ಭದ್ರತೆಯನ್ನು ಒದಗಿಸಲಾಗಿದೆ. …… ಅಪರಾಧವಾಗುತ್ತದೆ.
A) ಮರಗಳನ್ನು ಕಡಿಯುವುದು
B) ಮರಗಳ ಕಳ್ಳಸಾಗಣಿಕೆ
C) ವನ್ಯ ಪ್ರಾಣಿಗಳನ್ನು ಕೊಲ್ಲುವುದು
D) ಮೇಲಿನ ಎಲ್ಲವೂ ✓
190) ನಮ್ಮ ಹಿಂದಿನವರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅರಣ್ಯ ಸಂರಕ್ಷಣೆಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗಬನ, ಕೊಡಗು ಜಿಲ್ಲೆಯಲ್ಲಿ ಕಂಡುಬರುವ ದೇವರ ಕಾಡು. ಇಲ್ಲಿ ಮರಗಳನ್ನು ಕಡಿಯುವುದನ್ನು ….
A) ನಿಷೇಧಿಸಲಾಗಿದೆ
B) ತಡೆಯಲಾಗಿದೆ
C) ನಿಲ್ಲಿಸಲಾಗಿದೆ
D) ಮೇಲಿನ ಎಲ್ಲವೂ ಸರಿ ✓
191) ಕರ್ನಾಟಕದ ಜೀವ ವೈವಿಧ್ಯದಿಂದ ಕೂಡಿದ ಪಶ್ಚಿಮ ಘಟ್ಟದ ಅರಣ್ಯಗಳ ನಾಶವನ್ನು ತಡೆಗಟ್ಟಲು ಪಾಂಡುರಂಗ ಹೆಗಡೆಯವರು ….. ಪ್ರಾರಂಭಿಸಿದರು.
A) ಅಪ್ಪಿಕೊ ಚಳುವಳಿ ✓
B) ಮೌನ ಕಣಿವೆ ಹೋರಾಟ
C) ಜಂಗಲ್ ಬಚಾವೊ ಆಂದೋಲನ
D) ಚಿಪ್ಕೊ ಚಳುವಳಿ
192) ಕೇರಳದಲ್ಲಿರುವ ಜೀವ ವೈವಿಧ್ಯ ತಾಣವಾದ ಮೌನ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಲು ಸರ್ಕಾರ ಯತ್ನಿಸಿದಾಗ ಪರಿಸರವಾದಿಗಳು ….. ದ ಮೂಲಕ ಯೋಜನೆಯನ್ನು ತಡೆಹಿಡಿದರು.
A) ಅಪ್ಪಿಕೊ ಚಳುವಳಿ
B) ಮೌನ ಕಣಿವೆ ಹೋರಾಟ ✓
C) ಜಂಗಲ್ ಬಚಾವೊ ಆಂದೋಲನ
D) ಚಿಪ್ಕೊ ಚಳುವಳಿ
193) ಬಿಹಾರದ ಅರಣ್ಯಗಳ ಸಂರಕ್ಷಣೆಗಾಗಿ ಪ್ರಾರಂಭವಾದ …… ವು ಜಾರ್ಖಂಡ್ ಮತ್ತು ಒಡಿಶಾಗೂ ಹರಡಿ ಅರಣ್ಯಗಳ ಸಂರಕ್ಷಣೆಗೆ ಕಾರಣವಾಯಿತು.
A) ಅಪ್ಪಿಕೊ ಚಳುವಳಿ
B) ಮೌನ ಕಣಿವೆ ಹೋರಾಟ
C) ಜಂಗಲ್ ಬಚಾವೊ ಆಂದೋಲನ ✓
D) ಚಿಪ್ಕೊ ಚಳುವಳಿ
194) ಹಿಮಾಲಯದಲ್ಲಿನ ಅರಣ್ಯಗಳ ಸಂರಕ್ಷಣೆಗಾಗಿ ಸುಂದರ್‌ಲಾಲ್ ಬಹುಗುಣರವರು ….. ಪ್ರಾರಂಭಿಸಿ ಮರಗಳ ನಾಶವನ್ನು ತಡೆಹಿಡಿದರು.
A) ಅಪ್ಪಿಕೊ ಚಳುವಳಿ
B) ಮೌನ ಕಣಿವೆ ಹೋರಾಟ
C) ಜಂಗಲ್ ಬಚಾವೊ ಆಂದೋಲನ
D) ಚಿಪ್ಕೊ ಚಳುವಳಿ ✓
195) ಇಂಧನಗಳು ಉರಿದು ಶಕ್ತಿಯ ಜೊತೆಗೆ ಉಷ್ಣವನ್ನು ಬಿಡುಗಡೆ ಮಾಡುವ ವಸ್ತುಗಳಾಗಿವೆ. ಅನೇಕ ಕೆಲಸಗಳಿಗಾಗಿ ಇವುಗಳನ್ನು ಬಳಸುತ್ತೇವೆ. ಉದಾಹರಣೆ ….
A) ವಾಹನ ಚಲಿಸುವಂತೆ ಮಾಡುವುದು,
B) ಅಡುಗೆ ಮಾಡುವುದು.
C) ಯಂತ್ರಗಳು ಕಾರ್ಯ ನಿರ್ವಹಿಸುವುದು
D) ಮೇಲಿನ ಎಲ್ಲಾ ಆಯ್ಕೆಗಳು ಸರಿ ✓
196) ವಾಹನಗಳ ಬಳಕೆಗೆ ಬಳಸುವ ಇಂಧನಗಳು ….
A) ಪೆಟ್ರೋಲ್ ಮತ್ತು ಡೀಸೆಲ್
B) ಸಿ.ಎನ್.ಜಿ ಮತ್ತು ಗ್ಯಾಸೋಲಿನ್
C) ಹಬೆ ಮತ್ತು ಕಲ್ಲಿದ್ದಲು
D) ಮೇಲಿನ ಎಲ್ಲವೂ ✓
197) ಮನೆಯಲ್ಲಿ ಅಡುಗೆ ಮಾಡಲು ಬಳಸುವ ಮೂರು ಇಂಧನಗಳು ….
A) ಸೀಮೆಎಣ್ಣೆ, ಎಲ್.ಪಿ.ಜಿ, ಇದ್ದಿಲು ✓
B) ಸೀಮೆಎಣ್ಣೆ, ಸಿ,ಎನ್.ಜಿ, ಇದ್ದಿಲು
C) ಸೀಮೆಎಣ್ಣೆ, ಗ್ಯಾಸೋಲಿನ್, ಗೋಬರ್ ಗ್ಯಾಸ್
D) ಸೀಮೆಎಣ್ಣೆ, ಪಟ್ರೋಲ್, ಗೋಬರ್ ಗ್ಯಾಸ್
198) ಲಕ್ಷಾಂತರ ವರ್ಷಗಳ ಹಿಂದೆ ಭೂಪದರದೊಳಗೆ ಹೂತು ಹೋದ (ಹುದುಗಿದ) ಸತ್ತ ಸಸ್ಯ ಮತ್ತು ಪ್ರಾಣಿಗಳ ದೇಹಗಳು ಆಕ್ಸಿಜನ್ ಇಲ್ಲದೆ ಕೊಳೆತು ಉಂಟಾಗಿರುವ ಬಳಸಲು ಯೋಗ್ಯ ಪಳೆಯುಳಿಕೆಯೇ ….
A) ಇಂಧನ ✓
B) ಅವಶೇಷಗಳು
C) ನಿರ್ಜೀವಿಗಳು
D) ಶವಗಳು
199) ಭೂಗರ್ಭದಲ್ಲಿ ಸಿಗುವ ಇಂಧನ ಎಂದರೆ …..
A) ಪೆಟ್ರೋಲ್
B) ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು.
C) ಸೀಮೆಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳು
D) ಮೇಲಿನ ಎಲ್ಲವೂ ಕೂಡ ✓
200) ಪೆಟ್ರೋಲಿಯಮ್ : ನಾವು ಬಳಸುವ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಮೇಣ ಇತ್ಯಾದಿಗಳು
A) ಪೆಟ್ರೋಲಿಯಮ್‌ನ ಉಪ ಉತ್ಪನ್ನಗಳಾಗಿವೆ ✓
B) ಸೀಮೆಎಣ್ಣೆ ಉಪ ತ್ಪನ್ನವಾಗಿದೆ
C) ಮೇಣದ ಉಪ ಉಪ್ಪನ್ನವಾಗಿದೆ
D) ಯಾವುದೂ ಅಲ್ಲ
201) ಪೆಟ್ರೋಲಿಯಮ್ ಎಂಬುದು ಭೂಮಿಯೊಳಗೆ ರೂಪುಗೊಂಡಿರುವ ಒಂದು ….
A) ದ್ರವರೂಪದ ಖನಿಜ ✓
B) ಘನರೂಪದ ದ್ರವ
C) ದ್ರವರೂಪದ ಅನಿಲ
D) ಘನರೂಪದ ಅನಿಲ
202) ಶಿಲಾಪದರಗಳ ಅಡಿಯಲ್ಲಿ ಶೇಖರವಾದ ಸತ್ತ ಜೀವಿಗಳ ದೇಹದ ಮೇಲೆ ಬ್ಯಾಕ್ಟೀರಿಯಾಗಳ ಕ್ರಿಯೆ, ಅಧಿಕ ಉಷ್ಣತೆ ಮತ್ತು ಒತ್ತಡಗಳಿಂದ ….. ರೂಪಗೊಂಡಿದೆ.
A) ಪೆಟ್ರೋಲಿಯಮ್ ✓
B) ಪೆಟ್ರೋಲ್
C) ಸೀಮೆಎಣ್ಣೆ
D) ಯಾವುದೂ ಅಲ್ಲ
203) ಮೇಣ, ಪ್ಯಾರಾಪಿನ್‌ಗಳಂತಹ ಪೆಟ್ರೋಲಿಯಮ್ ಉಪ ಉತ್ಪನ್ನಗಳನ್ನು ….. ತಯಾರಿಕೆಯಲ್ಲಿಯೂ ಬಳಸುತ್ತಾರೆ.
A) ಮೇಣದ ಬತ್ತಿ, ಮರದ ಪಾಲಿಷ್,
B) ಮುಲಾಮು, ಬಣ್ಣ, ಲಿಪ್‌ಸ್ಟಿಕ್,
C) ರಾಸಾಯನಿಕ ಗೊಬ್ಬರ, ವಾಸಲಿನ್ ಜೆಲ್ಲಿ,
D) ಮೇಲಿನ ಎಲ್ಲಾ ✓
204) ಇದು ಪೆಟ್ರೋಲಿಯಮ್ ಬಾವಿಗಳಲ್ಲಿ ಪೆಟ್ರೋಲಿಯಮ್‌ನೊಂದಿಗೆ ದೊರೆಯುತ್ತದೆ. ಒತ್ತಡಕ್ಕೆ ಒಳಪಡಿಸಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬದಲೀ ಇಂಧನವಾಗಿ ವಾಹನಗಳಿಗೆ ಬಳಸಲಾಗುತ್ತದೆ.
A) ನೈಸರ್ಗಿಕ ಅನಿಲ ✓
B) ಕೃತಕ ಅನಿಲ
C) ಅನುಪಯುಕ್ತ ತ್ಯಾಜ್ಯ
D) ಮೇಲಿನ ಯಾವುದೂ ಅಲ್ಲ
205) ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಹೂತು ಹೋದ ಮರ ಗಿಡಗಳ ಅವಶೇಷಗಳು ಪೂರ್ಣವಾಗಿ ಕೊಳೆಯದೆ ಶಿಲಾ ಪದರಗಳ ಕೆಳಗೆ ಒತ್ತಡ ಮತ್ತು ಉಷ್ಣಕ್ಕೆ ಸಿಲುಕಿ ಕಪ್ಪು ಬಣ್ಣದ ರೂಪಕ್ಕೆ ಪರಿವರ್ತಿತವಾಗಿವೆ. ವಿದ್ಯುತ್ ಉತ್ಪಾದಿಸಲು ಇದನ್ನು ಇಂಧನವಾಗಿ ಬಳಸುತ್ತಾರೆ. ಶಕ್ತಿಯ ಮೂಲವಾದ ಇದನ್ನು ಕೈಗಾರಿಕೆಗಳಲ್ಲೂ ಬಳಸುತ್ತಾರೆ.
A) ಕಲ್ಲಿದ್ದಲು ✓
B) ವಿದ್ಯುತ್
C) ಇದ್ದಿಲು
D) ಮೇಲಿನ ಯಾವುದೂ ಅಲ್ಲ
206) ಖನಿಜಗಳು ನೈಸರ್ಗಿಕ ಪ್ರಕ್ರಿಯೆಗಳಿಂದ ದೀರ್ಘಾವಧಿಯಲ್ಲಿ ಭೂಮಿಯಲ್ಲಿ ರೂಪುಗೊಳ್ಳುತ್ತವೆ. ಅವು ಶಿಲೆಗಳಲ್ಲಿ ದೊರೆಯುತ್ತವೆ. ಅದಿರಿನ ರೂಪದಲ್ಲಿ ಹೊರತೆಗೆದ ಖನಿಜಗಳನ್ನು ಕಾರ್ಖಾನೆಗಳಲ್ಲಿ ಶುದ್ಧೀಕರಿಸಿ, ಲೋಹಗಳನ್ನು ಬೇರ್ಪಡಿಸಲಾಗುತ್ತದೆ.
A) ಖನಿಜ ಸಂಪನ್ಮೂಲಗಳು ✓
B) ಜಲ ಸಂಪನ್ಮೂಲಗಳು
C) ಅಲೋಹ ಸಂಪನ್ಮೂಲಗಳು
D) ಮೇಲಿನ ಯಾವುದೂ ಅಲ್ಲ
207) ಭೂ ಗರ್ಭದಲ್ಲಿನ ಖನಿಜ ಸಂಪನ್ಮೂಲಗಳಿಂದಲೇ ಇವು ದೊರೆಯುತ್ತವೆ.
A) ಕಬ್ಬಿಣ
B) ಅಲ್ಯುಮಿನಿಯಮ್,
C) ತಾಮ್ರ, ಬೆಳ್ಳಿ
D) ಮೇಲಿನ ಎಲ್ಲವೂ ✓
208) ಎಲ್ಲಾ ಕಡೆಗೂ ದೊರೆಯುವ ಸಂಪನ್ಮೂಲವಾದ ಸರ್ವವ್ಯಾಪಿ ಸಂಪನ್ಮೂಲವೆನ್ನುತ್ತಾರೆ. ಅವೇ ….
A) ಸೂರ್ಯನ ಬೆಳಕು,
B) ನೀರು,
C) ಮಣ್ಣು
D) ಮೇಲಿನ ಎಲ್ಲವೂ ✓
209) ಕಾಡು ಸಂಪನ್ಮೂಲಗಳನ್ನು ಉರುವಲು ಅಥವಾ ಮರಮುಟ್ಟುಗಳಿಗೆ ಉಪಯೋಗಿಸಿದರೆ ಪುನಃ ಉಪಯೋಗಿಸಲು ಸಾಧ್ಯವಿಲ್ಲ. ಆಗ ಕಾಡುಗಳು ನವೀಕರಿಸಲಾಗದ ಸಂಪನ್ಮೂಲಗಳಾಗುತ್ತದೆ. ಈ ಕ್ರಮದಿಂದ ನವೀಕರಿಸಬಹುದಾದ ಸಂಪನ್ಮೂಲಗಳಾಗಿ ಪರಿವರ್ತಿಸಬಹುದು.
A) ಮರಗಳನ್ನು ಪುನಃ ಪುನಃ ಬೆಳೆಸುವ ಮೂಲಕ
B) ಮಿತವಾಗಿ ಬಳಸುವುದರ ಮೂಲಕ
C) ಸಂರಕ್ಷಿಸುವ ಮೂಲಕ
D) ಮೇಲಿನ ಎಲ್ಲಾ ಕ್ರಮದಿಂದ ✓
210) ಮಾನವನಲ್ಲಿ ಹುದುಗಿದ ಬುದ್ಧಿಶಕ್ತಿ, ಕ್ರಿಯಾಶೀಲ ಮನಸ್ಸು, ಪರಿಣತಿ, ಸೌಂದರ್ಯ ಪ್ರಜ್ಞೆ ಮೊದಲಾದ ಅನೇಕ ಸಾಮರ್ಥ್ಯಗಳು ಇರುವುದರಿಂದ ಆತನು ಸಹ ಒಂದು ರೀತಿಯ …. ಎನ್ನಬಹುದು.
A) ಪ್ರಾಣಿ
B) ಸಂಪನ್ಮೂಲ ✓
C) ಅಜ್ಞಾನಿ
D) ಅನಾಗರೀಕ
211) ವಾಯು
212) ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು …. ಎಂದೂ ಕರೆಯುತ್ತಾರೆ.
A) ವಾಯುಗೋಳ ✓
B) ಜಲಗೋಳ
C) ಭೂಗೋಳ
D) ಮೇಲಿನ ಯಾವುದೂ ಅಲ್ಲ
213) ವಾಯುವಿನಲ್ಲಿ ನೈಟ್ರೋಜನ್ ಪ್ರಮಾಣ … %
A) 90
B) 78 ✓
C) 58
D) 38
214) ವಾಯುವಿನಲ್ಲಿ ಹೈಡ್ರೋಜನ್ ಪ್ರಮಾಣ … %
A) 10
B) 50
C) 21 ✓
D) 78
215) ವಾಯುವಿನಲ್ಲಿ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ … %
A) 5
B) 10
C) 40
D) 0.04 ✓
216) ವಾಯುವು …. ಮಿಶ್ರಣದಿಂದಾಗಿದೆ.
A) ನೈಟ್ರೊಜನ್ ಮತ್ತು ಜಡ ಅನಿಲಗಳ
B) ಆಕ್ಸಿಜನ್ ಮತ್ತು ಧೂಳಿನ
C) ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರಾವಿ
D) ಮೇಲಿನ ಎಲ್ಲದರ ✓
217) ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಯಾವುದು?
A) ನೈಟ್ರೋಜನ್ ✓
B) ಹೈಡ್ರೋಜನ್
C) ಆಕ್ಸಿಜನ್
D) ಕಾರ್ಬನ್ ಡೈಯಾಕ್ಸೈಡ್
218) ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಎಷ್ಟು ಪ್ರಮಾಣದಲ್ಲಿದೆ?
A) 21% ✓
B) 40%
C) 60%
D) 100%
219) ಸಾಮಾನ್ಯವಾಗಿ ವಾಯುವಿನಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಎಷ್ಟಿರುತ್ತದೆ?
A) 0.04% ✓
B) 0.01%
C) 0.25%
D) 0.75%
220) ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಘಟಕ ಯಾವುದು?
A) ನೈಟ್ರೊಜನ್ ಮತ್ತು ಜಡ ಅನಿಲಗಳು
B) ಆಕ್ಸಿಜನ್ ಮತ್ತು ಧೂಳಿನ ಕಣಗಳು
C) ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರಾವಿ ✓
D) ಮೇಲಿನ ಯಾವುದೂ ಅಲ್ಲ
221) ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಉಂಟು ಮಾಡುವ ರಾಸಾಯನಿಕಗಳು, ಧೂಳು, ಸೂಕ್ಷ್ಮ ಜೀವಿಗಳು ವಾಯುವನ್ನು ಸೇರುವುದೇ ….
A) ವಾಯು ಮಾಲಿನ್ಯ ✓
B) ಜಲ ಮಾಲಿನ್ಯ
C) ನೆಲ ಮಾಲಿನ್ಯ
D) ಶಬ್ಧ ಮಾಲಿನ್ಯ
222) ಇದರಿಂದ ಹೃದ್ರೋಗ (ಹೃದಯ ಸಂಬಂಧಿ ರೋಗ), ಕ್ಯಾನ್ಸರ್, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
A) ವಾಯು ಮಾಲಿನ್ಯ ✓
B) ಜಲ ಮಾಲಿನ್ಯ
C) ನೆಲ ಮಾಲಿನ್ಯ
D) ಶಬ್ಧ ಮಾಲಿನ್ಯ
223) ಸಸ್ಯಗಳ ಬೆಳವಣಿಗೆ ಮತ್ತು ಸಸ್ಯಗಳಿಂದ ದೊರೆಯುವ ಉತ್ಪನ್ನಗಳ (ಇಳುವರಿ) ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದರಿಂದ ಕೆಲವು ಪ್ರಾಣಿಗಳ ಸಂತತಿಯೇ ಕಣ್ಮರೆಯಾಗಬಹುದು. ವಾಯು ಸಂಪನ್ಮೂಲವು ಎಲ್ಲಾ ಜೀವಿಗಳಿಗೆ ಬಹಳ ಅಗತ್ಯವಾಗಿದ್ದು, ಇದು ಮಾಲಿನ್ಯವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ನಾವು ಈ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು.
A) ವಾಯು ಮಾಲಿನ್ಯ
B) ಜಲ ಮಾಲಿನ್ಯ
C) ನೆಲ ಮಾಲಿನ್ಯ
D) ಮೇಲಿನ ಎಲ್ಲಾ ಮಾಲಿನ್ಯಗಳು ✓
224) ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ….
A) ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ ತ್ಯಾಜ್ಯಗಳು ವಾಯುವನ್ನು ಸೇರದಂತೆ ತಡೆಯುವುದು.
B) ಹೊಗೆಯನ್ನು ವಾತಾವರಣದಿಂದ ಎತ್ತರಕ್ಕೆ ಕೊಂಡೊಯ್ದು ಬಿಡುಗಡೆ ಮಾಡುವಂತೆ ಎತ್ತರವಾದ ಹೊಗೆ ಕೊಳವೆಗಳನ್ನು ಕಟ್ಟುವುದು.
C) ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್ ಇಂಧನಕ್ಕೆ ಬದಲಾಗಿ ಅನಿಲ (ಗ್ಯಾಸ್)ಇಂಧನವನ್ನು ಬಳಸುವುದು.
D) ಮೇಲಿನ ಎಲ್ಲಾ ಕ್ರಮಗಳು ಸರಿ ✓
225) ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು …..
A) ಹೊಗೆ ನಿಯಂತ್ರಣ ವ್ಯವಸ್ಥೆ ಇರುವಂತೆ ವಿನ್ಯಾಸಗೊಳಿಸುವುದು.
B) ಸಾರ್ವಜನಿಕ ವಾಹನಗಳನ್ನು ಬಳಸುವುದು ಹಾಗೂ ಜನವಸತಿ ಪ್ರದೇಶಗಳಲ್ಲಿ ವಸ್ತುಗಳನ್ನು ಸುಡದಿರುವುದು.
C) ಬದಲಿ ಇಂಧನ ಮೂಲಗಳಾದ ಸೌರಶಕ್ತಿ, ಜಲವಿದ್ಯುತ್ ಶಕ್ತಿ ಮತ್ತು ಪವನಶಕ್ತಿಯನ್ನು ಉಪಯೋಗಿಸುವುದು.
D) ಮೇಲಿನ ಎಲ್ಲಾ ಕ್ರಮಗಳು ಸರಿ ✓
226) ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ….. ಎಂದೂ ಕರೆಯುತ್ತಾರೆ.
A) ಜೀವಜಲ ✓
B) ಅಂತರ್ಜಲ
C) ಶುದ್ಧಜಲ
D) ಗಂಗಾಜಲ
227) ಭೂಮಿಯ ಮೇಲ್ಭಾಗ ಶೇ. ….. ಭಾಗದಷ್ಟು ನೀರಿನಿಂದ ಆವರಿಸಿದೆ.
A) 71 ✓
B) 90
C) 50
D) 25
228) ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡು ಬರುತ್ತದೆ?
A) ಸಾಗರಗಳಲ್ಲಿ ✓
B) ನದಿಗಳಲ್ಲಿ
C) ಕೊಳವೆ ಬಾವಿಗಳಲ್ಲಿ
D) ಬಾವಿಗಳಲ್ಲಿ
229) ಬಳಸಬಹುದಾದ ಸಿಹಿ ನೀರಿನ ಪ್ರಮಾಣ ಎಷ್ಟು?
A) 2% ✓
B) 10%
C) 50%
D) 100%
230) ಸಿಹಿ ನೀರು ಯಾವ ಆಕರಗಳಲ್ಲಿ ದೊರೆಯುತ್ತದೆ?
A) ಎಲ್ಲಾ ಕೊಳವೆ ಬಾವಿಗಳಲ್ಲಿ
B) ಎಲ್ಲಾ ಸಾಗರಗಳಲ್ಲಿ
C) ಎಲ್ಲಾ ಸಮುದ್ರಗಳಲ್ಲಿ
D) ಎಲ್ಲಾ ನದಿಗಳಲ್ಲಿ ✓
231) ನೀರಿನ ಮುಖ್ಯ ಮೂಲ …
A) ಮಳೆ ✓
B) ಬಾವಿ
C) ಅಂತರ್ಜಲ
D) ಸಾಗರ
232) ಭೂಮಿಯ ಮೇಲೆ ….. ನೀರಿನ ಅತೀ ದೊಡ್ಡ ಆಕರಗಳಾಗಿದೆ.
A) ಸಾಗರಗಳು ✓
B) ಬಾವಿಗಳು
C) ನದಿಗಳು
D) ಅಂತರ್ಜಲ
233) ನದಿ ನೀರಿಗೂ ಮಳೆಯೇ ಆಧಾರ. ಬೇಸಿಗೆಯಲ್ಲಿ ಹಿಮ ಪರ್ವತಗಳ ಹಿಮ ಕರಗಿ ನದಿಯನ್ನು ಸೇರುತ್ತದೆ. ಆಗ ನದಿಗಳು ತುಂಬಿ ಹರಿಯುತ್ತವೆ. ಎಲ್ಲಾ ನದಿಗಳು ನಿರ್ದಿಷ್ಟ ಮಾರ್ಗದಲ್ಲಿ ಹರಿದು ಕೊನೆಗೆ …. ಸೇರುತ್ತದೆ
A) ಸಾಗರಗಳಲ್ಲಿ ✓
B) ಸಮುದ್ರಗಳಲ್ಲಿ
C) ಭೂಗರ್ಭಕ್ಕೆ
D) ಆಕಾಶಕ್ಕೆ
234) ಭೂ ಕವಚದ ಕೆಳಗೆ ಸಂಗ್ರಹಗೊಂಡಿರುವ ಅಂತರ್ಜಲವು ಒತ್ತಡದಿಂದಾಗಿ ರಂಧ್ರಗಳ ಮೂಲಕ ಹೊರ ಹೊಮ್ಮುತ್ತದೆ. ಇದನ್ನು …. ಎನ್ನುತ್ತಾರೆ. ಮಳೆಯ ನೀರು ಭೂಮಿಯ ಸಡಿಲ ಭಾಗಗಳ ಮೂಲಕ ಒಳ ಹೊಕ್ಕು ಒಂದೆಡೆ ಸೇರಿ ಅದು ಅಂತರ್ಜಲವಾಗಿ, ಈ ರೂಪದಲ್ಲಿ ಹೊರ ಬರುತ್ತದೆ
A) ಚಿಲುಮೆ ✓
B) ಝರಿ
C) ಗಡಸು ನೀರು
D) ಮೆದು ನೀರು
235) ಭೂ ಮೇಲ್ಪದರವನ್ನು ಸ್ವಲ್ಪ ಆಳಕ್ಕೆ ಕೊರೆಯುವುದರ ಮೂಲಕ ಪಡೆಯುವ ಅಂರ್ತಜಲದ ನೀರೇ …..
A) ಬಾವಿ ನೀರು ✓
B) ತೊರೆ
C) ನದಿ
D) ಹಳ್ಳ
236) ಮಳೆಯ ನೀರನ್ನು ಸಂಗ್ರಹಿಸಲು ಮಾನವರು ಕೃತಕವಾಗಿ ನಿರ್ಮಿಸಿದ ತಗ್ಗು ಭಾಗವೇ ….
A) ಕೆರೆ ✓
B) ತೊರೆ
C) ಹಳ್ಳ
D) ಝರಿ
237) ವರ್ಷವಿಡೀ ನೀರಿನ ಲಭ್ಯತೆಗಾಗಿ, ನೀರಿನ ಕೊರತೆಯಿರುವ ಸ್ಥಳಗಳಿಗೆ ನೀರನ್ನು ಒದಗಿಸಲು ಹಾಗೂ ವಿವಿಧ ಉದ್ದೇಶಗಳಿಗಾಗಿ ನೀರನ್ನು ಬಳಸಲು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುತ್ತಾರೆ. ಇದಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಇದನ್ನು ….. ಎನ್ನುತ್ತಾರೆ.
A) ಜಲಾಶಯ ✓
B) ನದಿ
C) ಸಾಗರ
D) ಸಮುದ್ರ
238) ಶುದ್ಧ ನೀರಿಗೆ ಬಣ್ಣ, ವಾಸನೆ ಮತ್ತು ರುಚಿ ಇರುವುದಿಲ್ಲ. ನೀರಿನ ರುಚಿಗೆ ಅದರಲ್ಲಿ ವಿಲೀನವಾಗಿರುವ …. ಕಾರಣ.
A) ಲವಣ ಮತ್ತು ಖನಿಜಾಂಶಗಳು ✓
B) ಕಲ್ಮಶಗಳು
C) ಕಸ ಕಡ್ಡಿಗಳು
D) ಕೀಟ ನಾಶಕಗಳು
239) ಜೀವಿಗಳ ದೇಹದಲ್ಲಿ ನೀರು ಅಧಿಕ ಪ್ರಮಾಣದಲ್ಲಿದೆ. ಸಸ್ಯ ಮತ್ತು ಪ್ರಾಣಿಗಳ ದೇಹದಲ್ಲಿ ….. ಭಾಗದಷ್ಟು ನೀರಿದೆ.
A) ಶೇಕಡ 70 ✓
B) ಶೇಕಡ 28
C) ಶೇಕಡ 50
D) ಶೇಕಡ 100
240) ಯಾವ ಆಯ್ಕೆ ತಪ್ಪಾಗಿದೆ?
A) ಮೊತ್ತ ಮೊದಲು ಜೀವ ಉಗಮವಾದದ್ದೇ ನೀರಿನಲ್ಲಿ.
B) ಸಸ್ಯ ಮತ್ತು ಪ್ರಾಣಿಗಳ ಜೈವಿಕ ಕ್ರಿಯೆಗಳಿಗೆ ನೀರು ಅವಶ್ಯಕ.
C) ಸಸ್ಯಗಳ ಆಹಾರ ತಯಾರಿಸಲು ಹಾಗೂ ಬೆಳವಣಿಗೆಗೆ ನೀರು ಅಗತ್ಯ.
D) ಯಾವ ಆಯ್ಕೆಯೂ ತಪ್ಪಾಗಿಲ್ಲಾ ✓
241) ಮಣ್ಣು, ಕಸ, ಪೇಪರ್, ಉಳಿಕೆ ಆಹಾರ ಪದಾರ್ಥಗಳು ಸೇರುವುದರಿಂದ ನೀರು ಭೌತಿಕವಾಗಿ ಕಲುಷಿತಗೊಳ್ಳುತ್ತದೆ. ಕಾರ್ಖಾನೆಗಳಿಂದ ಬರುವ ರಾಸಾಯನಿಕಗಳು ಬೆರೆತ ನೀರು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಸೇರಿದ ನೀರು ಅಪಾಯಕಾರಿ ಅಂಶಗಳಿಂದ ಕೂಡಿ ವಿಷಯುಕ್ತವಾಗುತ್ತದೆ. ಈ ನೀರನ್ನು ಸೇವಿಸುವುದರಿಂದ ….. ರೋಗಗಳು ಬರಬಹುದು.
A) ಕಾಲರಾ,
B) ಅತಿಸಾರ,
C) ಆಮಶಂಕೆ
D) ಮೇಲಿನ ಎಲ್ಲಾ ✓
242) ಕಲುಷಿತ ನೀರನ್ನು ಸೇವಿಸುವುದರಿಂದ ….
A) ಕೆಲವೊಮ್ಮೆ ಪ್ರಾಣಕ್ಕೆ ಹಾನಿಯೂ ಸಂಭವಿಸಬಹುದು.
B) ಕಾಲರಾ, ಅತಿಸಾರ, ಆಮಶಂಕೆ ಕಾಯಿಲೆ ಬರಬಹುದು.
C) ಕಲುಷಿತ ನೀರು ಜಲಚರಗಳ ಸಂತತಿಯ ನಾಶಕ್ಕೂ ಕಾರಣವಾಗುತ್ತದೆ.
D) ಮೇಲಿನ ಎಲ್ಲವೂ ಸರಿ. ✓
243) ಕಲುಷಿತ ನೀರಿನಿಂದ ಬರುವ ರೋಗ ….
A) ಕಾಲರಾ ✓
B) ಮಲೇರಿಯಾ
C) ಅತಿಸಾರ
D) ಕ್ಯಾನ್ಸರ್
244) ನಿಂತ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಹರಡುವ ರೋಗ ….
A) ಕಾಲರಾ
B) ಮಲೇರಿಯಾ ✓
C) ಅತಿಸಾರ
D) ಕ್ಯಾನ್ಸರ್
245) ಪ್ಲಾಸ್ಮೋಡಿಯಮ್ ಎಂಬ ರೋಗಾಣು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯ ಶರೀರದಲ್ಲಿ ಇರುತ್ತದೆ. ಈ ಸೊಳ್ಳೆಯು ಮನುಷ್ಯರನ್ನು ಕಚ್ಚಿದಾಗ ಈ ರೋಗಾಣು ರಕ್ತವನ್ನು ಸೇರಿ ಅತೀ ಜ್ವರ, ಮೈನಡುಕ, ವಾಂತಿ ಮತ್ತು ತಲೆನೋವು ಮುಂತಾದ ರೋಗ ಲಕ್ಷಣಗಳು ಕಂಡುಬರುತ್ತದೆ. ಇದೇ
A) ಕಾಲರಾ
B) ಮಲೇರಿಯಾ ✓
C) ಅತಿಸಾರ
D) ಕ್ಯಾನ್ಸರ್
246) ಕೃಷಿ
247) ನೇಗಿಲ ಹಿಡಿದು ಹೊಲದೊಳು ಹಾಡುತ, ಉಳುವ ಯೋಗಿಯ ನೋಡಲ್ಲಿ, ಬರೆದವರು -
A) ರಾಷ್ಟ್ರಕವಿ ಕುವೆಂಪು ✓
B) ಪುತಿನ
C) ಕೆ.ಎಸ್.ನಿಸಾರ್ ಅಹಮದ್
D) ದ ರಾ ಬೇಂದ್ರೇ
248) ರೈತರ ಮುಖ್ಯ ಕಸುಬು
A) ಕೃಷಿ. ✓
B) ಹೈನುಗಾರಿಕೆ.
C) ಹಾಲು ಮಾರಾಟ.
D) ಕುರಿ ವ್ಯಾಪಾರ.
249) ರೈತರನ್ನು …. ಎಂತಲೂ ಕರೆಯುತ್ತಾರೆ.
A) ಕೃಷಿಕರು ✓
B) ಕಾರ್ಮಿಕರು
C) ಕುಶಲಕರ್ಮಿಗಳು
D) ವ್ಯಾಪಾರಿಗಳು
250) ತಮ್ಮ ಜೀವನ ಸಾಗಿಸಲು ….., ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
A) ಕೃಷಿಕರು ✓
B) ಕಾರ್ಮಿಕರು
C) ಕುಶಲಕರ್ಮಿಗಳು
D) ವ್ಯಾಪಾರಿಗಳು
251) ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕರಲ್ಲಿ ಈ ಬಗೆಯ ಕೃಷಿಕರಿರುತ್ತಾರೆ.
A) ಕೃಷಿ ಕಾರ್ಮಿಕರು
B) ಸಣ್ಣ ಕೃಷಿಕರು
C) ದೊಡ್ಡ ಕೃಷಿಕರು
D) ಮೇಲಿನ ಎಲ್ಲಾ ಬಗೆ ✓
252) ಇವರಿಗೆ ತಮ್ಮದೇ ಸ್ವಂತ ಜಮೀನು ಇರುವುದಿಲ್ಲ. ತಮ್ಮ ಜೀವನ ಸಾಗಿಸಲು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.
A) ಕೃಷಿ ಕಾರ್ಮಿಕರು ✓
B) ಸಣ್ಣ ಕೃಷಿಕರು
C) ದೊಡ್ಡ ಕೃಷಿಕರು
D) ಮೇಲಿನ ಎಲ್ಲರೂ
253) ಇವರಿಗೆ ತಮ್ಮದೇ ಆದ ಸ್ವಲ್ಪ ಜಮೀನು ಇರುತ್ತದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳನ್ನು ಮಾರಿ ಬರುವ ಹಣದಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರು ಸಹ ಸಮಸ್ಯೆಗಳನ್ನು ಹೊಂದಿದ್ದಾರೆ.
A) ಕೃಷಿ ಕಾರ್ಮಿಕರು
B) ಸಣ್ಣ ಕೃಷಿಕರು ✓
C) ದೊಡ್ಡ ಕೃಷಿಕರು
D) ಮೇಲಿನ ಎಲ್ಲರೂ
254) ಸಣ್ಣ ಕೃಷಿಕರಿಗೆ ….
A) ಕೃಷಿ ಮಾಡಲು ಹಣದ ಅಭಾವವಿರುತ್ತದೆ.
B) ಕೃಷಿ ಜಮೀನು ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ.
C) ಕೃಷಿ ಜಮೀನಿಗೆ ನೀರಿನ ಸೌಲಭ್ಯ (ನೀರಾವರಿ) ಕಡಿಮೆ ಇರುತ್ತದೆ.
D) ಮೇಲಿನ ಎಲ್ಲಾ ಆಯ್ಕೆ ಸರಿ ✓
255) ಸಣ್ಣ ಕೃಷಿಕರಿಗೆ ….
A) ಹಲವು ಸನ್ನಿವೇಶಗಳಲ್ಲಿ ಜಮೀನಿಗೆ ನೀರು ದೊರೆಯುವುದೇ ಇಲ್ಲ.
B) ಕೃಷಿ ಬೆಳೆ ತೆಗೆಯಲು ಇವರಿಗೆ ಸರಿಯಾದ ಮಾರ್ಗದರ್ಶನ ಇರುವುದಿಲ್ಲ.
C) ಕೃಷಿ ಮಾಡಲು ಹಣದ ಅಭಾವವಿರುತ್ತದೆ.
D) ಮೇಲಿನ ಎಲ್ಲಾ ಆಯ್ಕೆ ಸರಿ ✓
256) ದೊಡ್ಡ ಕೃಷಿಕರು ….
A) ಸಾಮಾನ್ಯವಾಗಿ ದೊಡ್ಡ ಕೃಷಿಕರು ಹೆಚ್ಚು ಜಮೀನು ಹೊಂದಿರುತ್ತಾರೆ.
B) ಜಮೀನಿನಲ್ಲಿ ಕೃಷಿ ಕೆಲಸಗಳಿಗಾಗಿ ಕುಟುಂಬದ ಸದಸ್ಯರಲ್ಲದೆ, ಸಹಾಯಕರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
C) ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಿ, ಬಳಸುತ್ತಾರೆ.
D) ಮೇಲಿನ ಎಲ್ಲಾ ಆಯ್ಕೆಯು ಸರಿ ✓
257) ದೊಡ್ಡ ಕೃಷಿಕರು ….
A) ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಇದ್ದಾಗ ಮಾರಾಟ ಮಾಡುತ್ತಾರೆ.
B) ಬ್ಯಾಂಕ್‌ಗಳ ಹಣಕಾಸು ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ.
C) ವಿವಿಧ ಬೆಳೆಗಳ ಕೃಷಿ ಮಾಡುವುದರಿಂದ ಇವರು ಹೆಚ್ಚಿನ ಆದಾಯ ಹೊಂದಿರುತ್ತಾರೆ.
D) ಮೇಲಿನ ಎಲ್ಲಾ ಆಯ್ಕೆಯು ಸರಿ ✓
258) ಕೃಷಿಕರು ಜಮೀನುಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳುತ್ತಾರೆ ಎನ್ನುವುದು ನಿನಗೆ ತಿಳಿದಿದೆ. ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು) ಯನ್ನು ಮುಖ್ಯವಾಗಿ ಎರಡು ವಿಧದಲ್ಲಿ ವಿಭಾಗಿಸಲಾಗಿದೆ.
A) ಮಳೆಯಾಧಾರಿತ ಕೃಷಿ ಭೂಮಿ
B) ನೀರಾವರಿ ಕೃಷಿ ಭೂಮಿ
C) ಬಿಸಿಲಾಧಾರಿತ ಕೃಷಿ ಭೂಮಿ
D) ಮೇಲಿನ A ಮತ್ತು B ಮಾತ್ರ ✓
259) ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿನ ಜಮೀನು …. ಯಾಗಿದೆ. ಕಡಿಮೆ ನೀರನ್ನು ಬಳಸುವ ಬೆಳೆಗಳನ್ನು ಭೂಮಿಯ ಮಣ್ಣಿಗನುಗುಣವಾಗಿ ಬೆಳೆಯುತ್ತಾರೆ.
A) ಮಳೆಯಾಧಾರಿತ ಕೃಷಿ ಭೂಮಿ ✓
B) ನೀರಾವರಿ ಕೃಷಿ ಭೂಮಿ
C) ಬಿಸಿಲಾಧಾರಿತ ಕೃಷಿ ಭೂಮಿ
D) ಮೇಲಿನ ಯಾವುದೂ ಅಲ್ಲ
260) …. ಯ ಬೇಸಾಯವನ್ನು ಖುಷ್ಕಿ ಅಥವಾ ಒಣಭೂಮಿ ಬೇಸಾಯ ಎಂತಲೂ ಕರೆಯಲಾಗುವುದು.
A) ಮಳೆಯಾಧಾರಿತ ಕೃಷಿ ಭೂಮಿ ✓
B) ನೀರಾವರಿ ಕೃಷಿ ಭೂಮಿ
C) ಬಿಸಿಲಾಧಾರಿತ ಕೃಷಿ ಭೂಮಿ
D) ಮೇಲಿನ ಯಾವುದೂ ಅಲ್ಲ
261) ಬೆಳೆಗಳಿಗೆ ಮಳೆಯ ನೀರನ್ನು ಹೊರತುಪಡಿಸಿದರೆ ಕೆರೆ, ಕಾಲುವೆ, ಬಾವಿ, ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತದೆ. ಹೀಗೆ ನೀರನ್ನು ಬಳಸಿ ಕೃಷಿ ಮಾಡುವುದನ್ನು ….. ಎನ್ನುವರು.
A) ನೀರಾವರಿ ಕೃಷಿ ✓
B) ಮಳೆ ಕೃಷಿ
C) ಅಂತರ್ಜಲ ಕೃಷಿ
D) ಮೇಲಿನ ಯಾವುದೂ ಅಲ್ಲ
262) ನೀರಾವರಿ ಭೂಮಿಯಲ್ಲಿ ಮಣ್ಣಿಗೆ ತಕ್ಕಂತೆ ಕಬ್ಬು, ಭತ್ತ, ಹತ್ತಿಯಂತಹ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳನ್ನು ….. ಎನ್ನುವರು.
A) ನೀರಾವರಿ ಬೆಳೆಗಳು ✓
B) ಮುಂಗಾರು ಬೆಳೆಗಳು
C) ಹಿಂಗಾರು ಬೆಳೆಗಳು
D) ಮೇಲಿನ ಎಲ್ಲವೂ
263) ಸರಿಯಾದ ಆಯ್ಕೆ ಯಾವುದು ?
A) ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ.
B) ಕೊಟ್ಟಿಗೆ / ತಿಪ್ಪೆಗೊಬ್ಬರವನ್ನು ಕೃಷಿ ಭೂಮಿಗೆ ಬಳಸಲಾಗುತ್ತದೆ..
C) ಎರೆಹುಳು ಗೊಬ್ಬರವನ್ನು ಮಣ್ಣಿನ ಪೋಷಕಾಂಶ ಹೆಚ್ಚಿಸಲು ಉಪಯೋಗಿಸಲಾಗುತ್ತದೆ.
D) ಮೇಲಿನ ಎಲ್ಲವೂ ಸರಿ ✓
264) ಸರಿಯಾದ ಆಯ್ಕೆ ಯಾವುದು ?
A) ರಾಸಾಯನಿಕ ಪೀಡೆ ನಾಶಕಗಳ ಸಿಂಪಡಣೆ ಮಾಡಿ ಬೆಳೆ ಬೆಳೆಯಲಾಗುತ್ತದೆ.
B) ಹಸಿರೆಲೆ / ಒಣಗಿದ ತರಗೆಲೆಗಳನ್ನೂ ಈ ಕೃಷಿಯಲ್ಲಿ ಬಳಸಲಾಗುತ್ತದೆ.
C) ಧಾನ್ಯಗಳನ್ನು ಹಗೇವಿನಲ್ಲಿ ಸಂಗ್ರಹಿಸುತ್ತಾರೆ
D) ಮೇಲಿನ ಎಲ್ಲವೂ ಸರಿ ✓
265) ರಾಸಾಯನಿಕ ಕೃಷಿಯಲ್ಲಿ …. ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ.
A) ರಾಸಾಯನಿಕ ಗೊಬ್ಬರಗಳನ್ನು
B) ಪೀಡೆ ನಾಶಕಗಳನ್ನು
C) ಸಾವಯವ ಗೊಬ್ಬರವನ್ನು
D) ಮೇಲಿನ ಎಲ್ಲವನ್ನು ✓
266) ಸಾವಯವ ಕೃಷಿಯಲ್ಲಿ …. ಸಾವಯವ ಪೀಡೆ ನಾಶಕ ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ.
A) ಕೊಟ್ಟಿಗೆ ಗೊಬ್ಬರ
B) ಹಸಿರೆಲೆ ಗೊಬ್ಬರ
C) ಎರೆಹುಳು ಗೊಬ್ಬರ
D) ಮೇಲಿನವುಗಳ ಬಳಸಿಕೊಂಡು ✓
267) ಒಂದೇ ಕೃಷಿ ಜಮೀನಿನಲ್ಲಿ ವರ್ಷವೊಂದಕ್ಕೆ 2 ರಿಂದ 3 ಬೆಳೆಗಳನ್ನು ಬೆಳೆಯುವುದು. ಉದಾಹರಣೆಗೆ, ಜೋಳ, ಭತ್ತ, ರಾಗಿ, ಸೂರ್ಯಕಾಂತಿ, ಹತ್ತಿ, ಹುರಳಿ, ಕಡಲೆ, ತೊಗರಿ.
A) ಸಾಂದ್ರ ಬೇಸಾಯ ✓
B) ಮಿಶ್ರ ಬೇಸಾಯ
C) ತೋಟಗಾರಿಕೆ
D) ಕೃಷಿ ಮಾತ್ರ
268) ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ದನಕರು, ಕೋಳಿ, ರೇಷ್ಮೆ, ಜೇನು ಸಾಕಾಣಿಕೆ ಮಾಡುವುದು.
A) ಸಾಂದ್ರ ಬೇಸಾಯ
B) ಮಿಶ್ರ ಬೇಸಾಯ ✓
C) ತೋಟಗಾರಿಕೆ
D) ಕೃಷಿ ಮಾತ್ರ
269) ಆಹಾರದ ಬೆಳೆಗಳ ಬದಲಿಗೆ ಕೃಷಿ ಜಮೀನಿನಲ್ಲಿ ವಿವಿಧ ಹಣ್ಣುಗಳು, ತರಕಾರಿ, ಕಾಫಿ, ಟೀ ಅಥವಾ ಹೂಗಳನ್ನು ಬೆಳೆಯುವುದು.
A) ಸಾಂದ್ರ ಬೇಸಾಯ
B) ಮಿಶ್ರ ಬೇಸಾಯ
C) ತೋಟಗಾರಿಕೆ ✓
D) ಕೃಷಿ ಮಾತ್ರ
270) ಧಾನ್ಯಗಳ ಸಂಗ್ರಹ ವಿಧಾನವು ನಮ್ಮ ಹಿರಿಯರ ಕೊಡುಗೆಯಾಗಿದೆ. ಅವುಗಳನ್ನು …. ಎನ್ನುತ್ತಾರೆ. ಇವು ಧಾನ್ಯಗಳ ಸಂಗ್ರಹಣೆ ಮಾಡುವ ಸಾಂಪ್ರದಾಯಿಕ ವಿಧಾನಗಳಾಗಿವೆ.
A) ಹಗೇವು
B) ಬಿದಿರಿನ ಕಣಜ
C) ಕಣ
D) ಮೇಲಿನ ಎಲ್ಲಾ ಆಯ್ಕೆಯು ಸರಿ ✓
271) ಕೃಷಿಯನ್ನು ಅವಲಂಬಿಸಿ ಬದುಕು ಸಾಗಿಸುವ ಕೃಷಿಕರೇ ನಮ್ಮ ನಿಜವಾದ …...
A) ಅನ್ನದಾತರು ✓
B) ಕಾರ್ಮಿಕರು
C) ನೌಕರರು
D) ಶ್ರಮಿಕರು
272) ಒಕ್ಕಲಿಗ ಒಕ್ಕಿದರೆ ನಕ್ಕು ನಲಿವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೆ …. ಜಗವೆಲ್ಲ
A) ಬಿಕ್ಕುವುದು
B) ಉಕ್ಕುವುದು
C) ಉಣ್ಣುವುದು
D) ಸುಮ್ಮನಿರುವುದು
273) ನಾವು ಸೇವಿಸುವ ಆಹಾರದಲ್ಲಿ ಒಂದಕ್ಕಿಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಅದರಲ್ಲೂ ಸಸ್ಯಮೂಲದ ನವಣೆ, ಊದಲು, ಆರ್ಕದಂತಹ ……. ಗಳಂತೂ ಪೋಷಕಾಂಶಗಳ ಕಣಜವೆ ಆಗಿವೆ. ನಮ್ಮ ಹಿರಿಯರು ಈ ಧಾನ್ಯಗಳನ್ನು ಹೆಚ್ಚು ಬಳಸುತ್ತಿದ್ದರು. ಆರೋಗ್ಯಕ್ಕೆ ಉತ್ತಮ ಎನಿಸಿರುವ ಇವುಗಳ ಉಪಯೋಗ ಇತ್ತೀಚೆಗೆ ಕಡಿಮೆಯಾಗುತ್ತಿದೆ.
A) ಸಿರಿಧಾನ್ಯ ✓
B) ದ್ವಿದಳ ಧಾನ್ಯ
C) ಏಕದಳ ಧಾನ್ಯ
D) ದುಬಾರಿ ಧಾನ್ಯ
274) ಪ್ರಮುಖ ಸಿರಿ ಧಾನ್ಯಗಳು ….
A) ರಾಗಿ, ಜೋಳ
B) ನವಣೆ, ಸಜ್ಜೆ
C) ಊದಲು, ಆರ್ಕ
D) ಮೇಲಿನ ಎಲ್ಲಾ ✓
275) ತಪ್ಪಾದ ಹೇಳಿಕೆ ಯಾವುದು ?
A) ಸಿರಿಧಾನ್ಯಗಳನ್ನು ಕಡಿಮೆ ನೀರನ್ನು ಬಳಸಿ ಕಡಿಮೆ ಅವಧಿಯಲ್ಲಿ ಬೆಳೆಯಬಹುದು.
B) ಸಿರಿಧಾನ್ಯಗಳು ಬಹುತೇಕ ವಿವಿಧ ಪರಿಸರ, ವಾಯುಗುಣದಲ್ಲಿ ಸುಲಭವಾಗಿ ಬೆಳೆಯುತ್ತವೆ.
C) ಎಲ್ಲವೂ ಸರಿ ✓
D) ಮೇಲಿನ ಎಲ್ಲವೂ ತಪ್ಪು
276) ತಪ್ಪಾದ ಹೇಳಿಕೆ ಯಾವುದು ?
A) ಸಿರಿ ಧಾನ್ಯಗಳನ್ನು ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕಗಳಿಲ್ಲದೆ ಇವುಗಳನ್ನು ಬೆಳೆಯಬಹುದು.
B) ಸಿರಿಧಾನ್ಯಗಳನ್ನು ಬರಗಾಲದ ಮಿತ್ರರು ಎನ್ನುತ್ತಾರೆ.
C) ಇವು ಹೆಚ್ಚು ಪೋಷಕಾಂಶಗಳುಳ್ಳ ಧಾನ್ಯಗಳಾಗಿವೆ.
D) ಎಲ್ಲವೂ ಸರಿ ✓
277) ತಪ್ಪಾದ ಹೇಳಿಕೆ ಯಾವುದು? ಬದಲಾದ ಆಹಾರ ಅಭ್ಯಾಸದ ಪರಿಣಾಮಗಳು ….
A) ಜನರು ಬಹಳ ಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ.
B) ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತಿದೆ.
C) ಆರೋಗ್ಯಕರ ಆಹಾರಕ್ಕಿಂತ, ರುಚಿಕರ ಆಹಾರ ಸೇವನೆ ಹೆಚ್ಚಾಗಿರುವುದರಿಂದ ದೇಹಕ್ಕೆ ವಿಷಯುಕ್ತ ರಾಸಾಯನಿಕಗಳು ಸೇರುತ್ತಿವೆ.
D) ತಪ್ಪು ಯಾವುದೂ ಅಲ್ಲ. ಎಲ್ಲವೂ ಸರಿ ✓
278) ತಪ್ಪಾದ ಹೇಳಿಕೆ ಯಾವುದು? ಬದಲಾದ ಆಹಾರ ಅಭ್ಯಾಸದ ಪರಿಣಾಮಗಳು ….
A) ಜನರು ಬಹಳ ಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ.
B) ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತಿದೆ.
C) ಮಸಾಲೆಯುಕ್ತ ಆಹಾರ, ಜಂಕ್ ಫುಡ್‌ಗಳಿಂದಾಗಿ ಬೊಜ್ಜು ಸಮಸ್ಯೆ ಉಂಟಾಗಿದೆ.
D) ತಪ್ಪು ಯಾವುದೂ ಅಲ್ಲ. ಎಲ್ಲವೂ ಸರಿ ✓
279) ನಾವು ಸೇವಿಸುವ ಆಹಾರವನ್ನು ಎಲ್ಲೆಂದರಲ್ಲಿ ಚೆಲ್ಲಿ ಪೋಲು ಮಾಡಿರುವುದನ್ನು ಹಲವೆಡೆ ಕಾಣಬಹುದು. ಸೇವಿಸಲು ಯೋಗ್ಯವಾಗಿರುವ ಆಹಾರವನ್ನು ಸೇವಿಸದೇ ಎಲ್ಲೆಂದರಲ್ಲಿ ಚೆಲ್ಲುವುದನ್ನು …. ಎನ್ನುವರು.
A) ಆಹಾರದ ಪೋಲಾಗುವಿಕೆ ✓
B) ಆಹಾರದ ಸದ್ಭಳಕೆ
C) ಆಹಾರ ಕಾಪಾಡಿಕೊಳ್ಳುವಿಕೆ
D) ಆಹಾರದ ವಿನಿಯೋಗ
280) ಉಪ್ಪಿನಕಾಯಿಯ ರುಚಿ ನಮಗೆಲ್ಲ ಗೊತ್ತು. ಅದು ಬಹಳ ದಿನ ಕೆಡದಂತೆ ಇರಲು ಅದಕ್ಕೆ ….. ಹಾಕಿರುತ್ತಾರೆ.
A) ಉಪ್ಪನ್ನು ✓
B) ಸಕ್ಕರೆಯನ್ನು
C) ನೀರನ್ನು
D) ಹುಣಸೆ ಹುಳಿಯನ್ನು
281) ಸರಿಯಾದ ಹೇಳಿಕೆ ಯಾವುದು?
A) ಉಪ್ಪಿನಕಾಯಿ ಬಹಳ ದಿನ ಕೆಡದಂತೆ ಇರಲು ಅದಕ್ಕೆ ಉಪ್ಪನ್ನು ಸೇರಿಸಿರುತ್ತಾರೆ
B) ತಾಜಾ ಹಣ್ಣುಗಳನ್ನು ಸಂರಕ್ಷಿಸಲು, ಸಕ್ಕರೆಯಂತಹ ವಸ್ತುಗಳನ್ನು ಬಳಸಲಾಗುತ್ತದೆ
C) ದ್ರಾಕ್ಷಿಹಣ್ಣನ್ನು ಒಣಗಿಸಿ ಒಣದ್ರಾಕ್ಷಿಯಾಗಿ ಬಳಸುತ್ತಾರೆ
D) ಮೇಲಿನ ಎಲ್ಲವೂ ಸರಿ ✓
282) ಮೀನು, ಮಾಂಸ ಮತ್ತು ಹಾಲನ್ನು ಅತಿ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿ ರಕ್ಷಿಸುತ್ತಾರೆ. ಇದನ್ನು …. ಎನ್ನುವರು. ಉದಾಹರಣೆಗೆ, ರೆಫ್ರ್ರೀ ಜರೇಟರ್(ಫ್ರಿಡ್ಜ್).
A) ಶೀತಕ ಸಂಗ್ರಹಣೆ ✓
B) ನಿರ್ಜಲ ಸಂಗ್ರಹಣೆ
C) ಉಷ್ಣಕ ಸಂಗ್ರಹಣೆ
D) ಕತ್ತಲಲ್ಲಿ ಸಂಗ್ರಹಣೆ
283) ಉತ್ತಮ ಆಹಾರವು …..
A) ನಮ್ಮನ್ನು ದೈಹಿಕವಾಗಿ ಆರೋಗ್ಯವಂತರನ್ನಾಗಿಸುತ್ತದೆ
B) ಮಾನಸಿಕವಾಗಿ ಆರೋಗ್ಯವಂತರನ್ನಾಗಿಸುತ್ತದೆ
C) ಖಾಯಿಲೆ ಬರದಂತೆ ಸಂರಕ್ಷಿಸುತ್ತದೆ
D) ಮೇಲಿನ ಎಲ್ಲಾ ಆಯ್ಕೆಯು ಸರಿ ✓
.......... END ...........
No comments:
Post a Comment